ಶನಿವಾರಸಂತೆ, ಮಾ. 9: ದುಂಡಳ್ಳಿ ಗ್ರಾ.ಪಂ.ನ 2017-18ನೇ ಸಾಲಿನ ಹರಾಜು ಪ್ರಕ್ರಿಯೆ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದು ಕಳೆದ ಸಾಲಿಗಿಂತ ರೂ. 3,19,200 ಲಕ್ಷ ಅಧಿಕ ಲಾಭ ದೊರೆತಿದೆ.

ಹಂದಿ ಮಾಂಸ ಮಾರುಕಟ್ಟೆ ರೂ. 4,96,000 ಲಕ್ಷಗಳಿಗೆ ಹರಾಜಾಗಿದ್ದು, ಕಳೆದ ಸಾಲಿನಲ್ಲಿ ರೂ. 3,00,100 ಲಕ್ಷಗಳಿಗೆ ಹರಾಜಾಗಿತ್ತು. ಈ ಸಾಲಿನಲ್ಲಿ ರೂ, 1,95,900 ಲಕ್ಷ ಅಧಿಕ ಲಾಭ ಬಂದಿದೆ. ಕುರಿ ಮಾಂಸ ಮಾರುಕಟ್ಟೆ ರೂ. 1,65,000 ಲಕ್ಷಗಳಿಗೆ ಹರಾಜಾಗಿದ್ದು, ಕಳೆದ ಸಾಲಿನಲ್ಲಿ ರೂ. 44,700 ಸಾವಿರ ರೂಪಾಯಿಗಳಿಗೆ ಹರಾಜಾಗಿತ್ತು. ಈ ಸಾಲಿನಲ್ಲಿ ರೂ. 1,20,300 ಲಕ್ಷ ಅಧಿಕ ಲಾಭ ಬಂದಿದೆ.

ಹಸಿಮೀನು ಮಾರುಕಟ್ಟೆ ರೂ. 20,000 ರೂಪಾಯಿಗಳಿಗೆ ಹರಾಜಾಗಿದ್ದು, ಕಳೆದ ಸಾಲಿನಲ್ಲಿ 17 ಸಾವಿರ ರೂಪಾಯಿಗಳಿಗೆ ಹರಾಜಾಗಿತ್ತು. ಈ ಸಾಲಿನಲ್ಲಿ ರೂ. 3 ಸಾವಿರ ಅಧಿಕ ಲಾಭ ಬಂದಿದೆ.

ಈ ನಡುವೆ ಕುರಿಮಾಂಸ ಮಾರುಕಟ್ಟೆ ಹರಾಜಿನ ಸಂದರ್ಭ ಬಿಡ್ಡುದಾರರಿಬ್ಬರು ಪೈಪೋಟಿ ನಡೆಸಿ ಮಾತಿಗೆ ಮಾತು ಬೆಳೆದು ಸಭೆಯಲ್ಲಿಯೇ ಕೈಕೈ ಮಿಲಾಯಿಸಿದರು. ತಕ್ಷಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಉಳಿದ ಬಿಡ್ಡುದಾರರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿ ಅವರಿಬ್ಬರನ್ನು ಸಭೆಯಿಂದ ಹೊರ ಕಳುಹಿಸಿದರು. 15 ನಿಮಿಷ ಸಭೆಯನ್ನು ಮುಂದೂಡಿ ನಂತರ ಹರಾಜು ಮುಂದುವರಿಸಲಾಯಿತು. ಸಭೆಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಎನ್.ಕೆ. ಸುಮತಿ, ನೇತ್ರಾವತಿ, ಬಿ.ಎಂ. ಪಾರ್ವತಿ, ಕಮಲಮ್ಮ, ಎ.ಆರ್. ರಕ್ಷಿತ, ಸಂದೇಶ, ಸಂತೋಷ್, ಯೋಗೇಂದ್ರ, ಎಂ.ಸಿ. ಹೂವಣ್ಣ ಉಪಸ್ಥಿತರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.