ಮಡಿಕೇರಿ, ಮಾ. 9: ಕೊಡಗು ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರ 2015ರ ಜನವರಿ 19 ರಂದು ರಚನೆಯಾಗಿದೆ. ಇದೀಗ ಸರ್ಕಾರದ ನೋಟಿಫಿಕೇಶನ್‍ನಂತೆ ಪುನರ್ ರಚನೆಗೊಂಡಿದ್ದು, ಪೊಲೀಸ್ ದೂರು ಪ್ರಾಧಿಕಾರ ಪದಾಧಿಕಾರಿಗಳನ್ನು ಹೊಂದಿದೆ.
ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ ಮಡಿಕೇರಿ 08272-225500, ಇ-ಮೇಲ್ ಜಛಿಞoಜgu@ಟಿiಛಿ.iಟಿ, ಸದಸ್ಯರಾಗಿ ಬಿ.ಎಂ. ರಾಜು, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಸರಸ್ವತಿ ನಿಲಯ, ಮೈಸೂರಮ್ಮ ಬಡವಾಣೆ, ಅರವತ್ತೊಕ್ಲು ಗ್ರಾಮ, ಗೋಣಿಕೊಪ್ಪ ಅಂಚೆ, ವೀರಾಜಪೇಟೆ ತಾಲೂಕು, ಕೊಡಗು ಜಿಲ್ಲೆ-9972655243, ಸದಸ್ಯ ಕಾರ್ಯದರ್ಶಿಯಾಗಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮಡಿಕೇರಿ-08272-229000, ಸದಸ್ಯರಾಗಿ ಡಾ. ಪುಷ್ಪಕುಟ್ಟಣ್ಣ ನಿವೃತ್ತ ಪ್ರಾಂಶುಪಾಲರು, ಹೊಸಕೇರಿ ಗ್ರಾಮ ಅರೆಕಾಡು ಅಂಚೆ, ಮಡಿಕೇರಿ 08272-230035 ಮತ್ತು 9845504537. ಇವರುಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವು ಡಿವೈಎಸ್ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿ-ಸಿಬ್ಬಂದಿರವರ ಪೊಲೀಸ್ ಅಭಿರಕ್ಷೆಯಲ್ಲಿ ನಡೆದ ಸಾವು, ತೀವ್ರ ಸ್ವರೂಪದ ಗಾಯ ಅಥವಾ ಅತ್ಯಾಚಾರದ ದೂರಿನ ಬಗ್ಗೆ ವಿಚಾರಣೆ ಮಾಡಬಹುದಾಗಿದೆ.
ದೂರು ಸಲ್ಲಿಸಬೇಕಾದ ವಿಳಾಸ: ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ಮಡಿಕೇರಿ 571201 ಅಥವಾ ಅಧ್ಯಕ್ಷರು, ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ, ಕೊಠಡಿ ಸಂಖ್ಯೆ 5, ಜಿಲ್ಲಾಡಳಿತ ಭವನದ ಮೊದಲನೇ ಮಹಡಿ, ಜಿಲ್ಲಾಧಿಕಾರಿಯವರ ಕಚೇರಿ, ಮಡಿಕೇರಿ ಕೊಡಗು ಜಿಲ್ಲೆ. ಅಡಿಷನಲ್ ಡಿಎಸ್‍ಪಿ ಮತ್ತು ಮೇಲಿನ ಹುದ್ದೆಯ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುವಂತಿದ್ದಲ್ಲಿ ರಾಜ್ಯ ದೂರುಗಳ ಪ್ರಾಧಿಕಾರಕ್ಕೆ ದೂರನ್ನು ಸಲ್ಲಿಸಬಹುದಾಗಿದ್ದು, ಅದರ ವಿಳಾಸ ಅಧ್ಯಕ್ಷರು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಕೊಠಡಿ ಸಂ. 36 ನೆಲಮಹಡಿ, ವಿಕಾಸಸೌಧ, ಬೆಂಗಳೂರು-01, ದೂರವಾಣಿ 22386063, 22034220.
ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸಾರ್ವಜನಿಕರಿಗಾಗಿ ವೆಬ್‍ಸೈಟ್ ಪ್ರಾರಂಭಿಸಿದ್ದು ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/sಠಿಛಿಚಿ ಆಗಿದ್ದು, ಸಾರ್ವಜನಿಕರು ಇದನ್ನು ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಕೊಡಗು ಜಿಲ್ಲೆಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಸಲ್ಲಿಸಬೇಕಾದ ದೂರುಗಳನ್ನು ಇ-ಮೇಲ್ ವಿಳಾಸ ಜಠಿಛಿಚಿmಜಛಿ@ಞಚಿಡಿಟಿಚಿಣಚಿಞಚಿ.gov.iಟಿ ಗೆ ನೇರವಾಗಿ ಸಲ್ಲಿಸಬಹುದಾಗಿರುತ್ತದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.