ಮಡಿಕೇರಿ, ಮಾ. 9: ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ವತಿಯಿಂದ ಮಡಿಕೇರಿಯ ಮೈತ್ರಿ ಭವನದಲ್ಲಿ ಬಾಲ್ಯವಿವಾಹ ನಿಷೇಧ ಕುರಿತ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಹೆಚ್.ಐ. ಮುಮ್ತಾಜ್ ನೆರವೇರಿಸಿ, ಬಾಲ್ಯವಿವಾಹ ನಿಷೇಧ ಕಾಯಿದೆ 2006ರ ಪ್ರಕಾರ 18 ವರ್ಷಕ್ಕಿಂತ ಮುಂಚೆ ಹುಡುಗಿಗೆ ಮತ್ತು 21 ವರ್ಷಕ್ಕಿಂತ ಮುಂಚೆ ಹುಡುಗನಿಗೆ ಮದುವೆಯನ್ನು ಮಾಡುವದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಬಾಲ್ಯವಿವಾಹ ನಡೆಸುವವರು ಹಾಗೂ ಈ ಬಾಲ್ಯವಿವಾಹದಲ್ಲಿ ಭಾಗಿಯಾಗುವವರಿಗೆ ಶಿಕ್ಷೆ ವಿಧಿಸಲಾಗುವದು ಎಂಬ ಮಾಹಿತಿಯನ್ನು ನೀಡುವ ಮೂಲಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.