ಮಡಿಕೇರಿ, ಮಾ. 9: ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳನ್ನು 2016-17ನೇ ಸಾಲಿಗೆ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶೇ. 33 ಕ್ಕಿಂತ ಹೆಚ್ಚಿನ ಕೃಷಿ ಬೆಳೆಹಾನಿ ಸಂಭವಿಸಿದ ರೈತರುಗಳಿಂದ ಅರ್ಜಿ ಪಡೆಯಲಾಗಿದ್ದು, ಅರ್ಜಿಗಳೊಂದಿಗೆ ಬೆಳೆಹಾನಿ ವಿವರ, ಅಂದಾಜು ನಷ್ಟ ಮತ್ತು ವಿಸ್ತೀರ್ಣ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ, IಈSಅ ಅoಜe ಮತ್ತು ಮೊಬೈಲ್ ಸಂಖ್ಯೆಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ, ನಾಡಕಚೇರಿ ಮತ್ತು ತಾಲೂಕು ಕಚೇರಿಗಳಿಗೆ ಸಲ್ಲಿಸಲು ಸೂಚನೆ ನೀಡಲಾಗಿತ್ತು.

ಪ್ರಸ್ತುತ ಬಹುತೇಕ ಪರಿಹಾರ ತಂತ್ರಾಂಶದಲ್ಲಿ ಮಾಹಿತಿ ಅಳವಡಿಸಲಾಗಿದ್ದು, ಇನ್ನು ಕೆಲವು ರೈತರು ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ನೀಡದೆ ಇರುವದರಿಂದ ಪರಿಹಾರ ಮಂಜೂರಾತಿ ನೀಡುವಾಗ ಎಸ್.ಎಂ.ಎಸ್. ಕಳುಹಿಸಲು ಹಾಗೂ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಲು ಸಾಧ್ಯವಾಗುತ್ತಿಲ್ಲ. ಇದುವರೆಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನೀಡದ ರೈತರು ಕೂಡಲೇ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಮಾಹಿತಿ ನೀಡಲು ಕೋರಿದೆ. ರೈತರು ತಮಗೆ ಸಂಬಂಧಿಸಿದ ಬ್ಯಾಂಕ್‍ಗಳಿಗೆ ತೆರಳಿ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.