ಮಡಿಕೇರಿ, ಮಾ. 9: ಇಲ್ಲಿನ ಜನರಲ್ ತಿಮ್ಮಯ್ಯ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕೋಡಿ ಲಾಸ್ಯ ಚಂದ್ರಶೇಖರ್ ಸಂಗೀತ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಯನ್ನು ಗುರುತಿಸಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾಮಟ್ಟದ ಅಸಾಧಾರಣ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಶಸ್ತಿ ಪತ್ರದೊಂದಿಗೆ ರೂ. 10 ಸಾವಿರ ನಗದು ಬಹುಮಾನ ನೀಡಿ ಇತ್ತೀಚೆಗೆ ನಡೆದ ‘ಮಕ್ಕಳ ಹಬ್ಬ’ದಲ್ಲಿ ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಮತ್ತು ಇತರರು ಗೌರವಿಸಿದರು. ಲಾಸ್ಯ ಮಡಿಕೇರಿಯ ಕೋಡಿ ಚಂದ್ರಶೇಖರ್ ಮತ್ತು ಗಗನ ದಂಪತಿಯ ಪುತ್ರಿ.