ಮಡಿಕೇರಿ, ಮಾ. 10: “ವಿಶ್ವದ ಅತ್ಯುತ್ತಮ ಹಾಗೂ ಅತ್ಯಂತ ಸುಂದರ ವಸ್ತುಗಳನ್ನು ನೋಡಲು ಹಾಗೂ ಮುಟ್ಟಲು ಸಾಧ್ಯವಿಲ್ಲ. ಅವುಗಳನ್ನು ಮನಸ್ಸಾರೆ ಅನುಭವಿಸಬೇಕು,” ಎಂಬ ಮಾತನ್ನು ಹೆಲನ್ ಕೆಲ್ಲರ್ ಹೇಳಿದ್ದರು. ಇಂತಹ ಅನುಭವ ನೀಡುವ ಒಂದು ವಿಷಯ ಸಂಗೀತ ಹಾಗೂ ಗಾಯನ. ಮನತುಂಬಿ ಹಾಡಿದರೆ, ಮನಸ್ಸಿಟ್ಟು ಕೇಳುವರು ಎಲ್ಲರು.

ಹೀಗೆ ಮಡಿಕೇರಿ ನಗರದಲ್ಲಿ ಇತ್ತೀಚೆಗೆ ಪಾದಚಾರಿಗಳು ಹಾಗೂ ವಾಹನ ಸಂಚಾರಿಗಳÀ ಗಮನ ಸೆಳೆದದ್ದು ಇಸ್ಮಾಯಿಲ್ ತಂಡ. ಆಟೋ ರಿಕ್ಷಾ, ಅದರಲ್ಲಿ ಮೈಕ್ ಹಾಗೂ ಸ್ವರ ವ್ಯವಸ್ಥೆ, ಅಲ್ಲಿ ಮೂವರಾದ ಇಸ್ಮಾಯಿಲ್, ಸಾಬು ಹಾಗೂ ಆಲಿಯವರ ಗಾಯನ. ಹಿಂದಿ, ಮಲೆಯಾಳಂ ಮತ್ತು ತಮಿಳು ಹಾಡುಗಳನ್ನು ಹಾಡುತ್ತಾ, ಈ ಮೂವರು ಕ್ಯಾಲಿಕಟ್‍ನಿಂದ ಬಂದಿದ್ದು, ಇಲ್ಲಿ ತಮ್ಮ ಆರ್ಕೆಸ್ಟ್ರಾ ಸಹಿತದ ಗಾಯನ ಹಬ್ಬಿಸುತ್ತಾ ಭಿಕ್ಷೆ ಬೇಡುವ ವಿಶೇಷ ಪರಿಯಿದು. ಇಲ್ಲಿ ಗಮನಾರ್ಹ ವಿಚಾರವೆಂದರೆ ಇವರು ಅಂಧರು. ಇನ್ನೊಬ್ಬರ ಹಂಗಿನಲ್ಲಿ ಬಾಳಬಾರದೆಂಬ ನಿಲುವು ಹೊಂದಿದ ಈ ಮೂವರೂ, ವಿಕಲ ಚೇತನರಿಗೆ ಹೆಚ್ಚಿನ ಉದ್ಯೋಗಾ ವಕಾಶ ದೊರೆತಿಲ್ಲದ ಈ ಸಮಾಜ ದಲ್ಲಿ, ತಮ್ಮಿಂದಾದಷ್ಟು ಮಟ್ಟಿನಲ್ಲಿ ಸಂಪಾದಿಸಿ ಸ್ವತಂತ್ರ ಜೀವಿಗಳಾಗಿ ಬಾಳಲಿಚ್ಚಿಸುವ ಗಾಯನ ಪ್ರತಿಭೆಗಳಿವರು. - Pಜಿಆರ್