ಗ್ರಾಮಸ್ಥರ ಆಕ್ರೋಶ

ನಾಪೆÇೀಕ್ಲು, ಮಾ. 10: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಿಂದ ಕೀಯಲ್‍ಕೇರಿಗೆ ಸಾಗುವ ರಸ್ತೆಯ ದುಸ್ಥಿತಿಯಿಂದಾಗಿ ವಾಹನಗಳು ಸಂಚರಿ ಸಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೆ ಜನರು ಕೂಡಾ ನಡೆದಾಡಲು ಸಮಸ್ಯೆಯಾಗಿದೆ. ರಸ್ತೆ ಯುದ್ದಕ್ಕೂ ಹರಡಿರುವ ಕಲ್ಲುಗಳಿಂದ ತುಂಬಿರುವ ರಸ್ತೆಯಿಂದಾಗಿ ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಗ್ರಾಮಸ್ಥರಾದ ಗಿರೀಶ್, ಸದಾ, ಸನ್ನು, ಪೂವಣ್ಣ ಮತ್ತಿತರರು ನಾಪೆÇೀಕ್ಲು ಭಾಗಮಂಡಲ ಮುಖ್ಯ ರಸ್ತೆಯಿಂದ ಪೇರೂರು ಗ್ರಾಮಕ್ಕೆ ತೆರಳುವ 4 ಕಿ.ಮೀ. ಅಂತರದ ರಸ್ತೆ ಡಾಮರೀಕರಣಗೊಂಡಿದೆ. ಮುಂದುವರಿದ ಭಾಗವಾಗಿ ಕೀಯಲ್‍ಕೇರಿಗೆ ತೆರಳುವ ರಸ್ತೆ ಡಾಂಬರೀಕರಣವಾಗದೆ ಹಾಗೆಯೇ ಉಳಿದಿದೆ. ರಸ್ತೆ ಡಾಮರೀಕರಣಕ್ಕೆಂದು ಆರು ತಿಂಗಳ ಹಿಂದೆಯೇ ಭೂಮಿಪೂಜೆ ನೆರವೇರಿಸಲಾಗಿತ್ತು. ಗ್ರಾಮಸ್ಥರು ಉತ್ತಮ ರಸ್ತೆಯ ಕನಸು ಕಂಡಿದ್ದರು. ನಿರೀಕ್ಷೆಯಂತೆ ರೂ. 1.85 ಲಕ್ಷ ವೆಚ್ಚದಲ್ಲಿ 100 ಮೀ. ಅಂತರದ ರಸ್ತೆ ನಿರ್ಮಾಣದ ಭರವಸೆ ದೊರೆಯಿತು. ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಜಲ್ಲಿಕಲ್ಲುಗಳು, ಡಾಮರು ತಂದಿರಿಸಲಾಯಿತು. ಆದರೆ ಕಾಮಗಾರಿ ಆರಂಭವಾಗಲಿಲ್ಲ. ಡಾಮರು ಡ್ರಮ್ಮುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲುಗಳ ರಾಶಿಯಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿದ ಅವರು ಕೂಡಲೇ ಈ ಕಾಮಗಾರಿಯನ್ನು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.