ಶನಿವಾರಸಂತೆ. ಮಾ. 10: ಶನಿವಾರಸಂತೆ ಗ್ರಾಮ ಪಂಚಾಯಿತಿ ತುರ್ತು ಸಭೆ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಸೇರಿದ ಮಳಿಗೆಗಳು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಮಾಡುವ ದಿನದ ಬಗ್ಗೆ ಚರ್ಚಿಸಲಾಯಿತು.

ಬೈಪಾಸ್ ರಸ್ತೆ ತ್ಯಾಗರಾಜ ಕಾಲೋನಿಗೆ ಕೋಳಿ ಮಾಂಸದ ಅಂಗಡಿಗಳಿಗೆ ಪರವಾನಿಗೆ, ಪಟ್ಟಣದ ಒಳಭಾಗದಲ್ಲಿ ಮಾಂಸ ಅಂಗಡಿಗಳಿಗೆ ಪರವಾನಿಗೆ ನೀಡದಂತೆ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಸಂತೆಯ ದಿನ ಮಾರುಕಟ್ಟೆಯ ಹೊರ ಭಾಗದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಅಂಗಡಿಗಳನ್ನು ಹಾಕದಂತೆ ನಿರ್ಣಯಿಸಲಾಯಿತು.

ನಾಲ್ಕನೇ ದರ್ಜೆಯ ಸಿಬ್ಬಂದಿಯೋರ್ವ ಮದ್ಯಪಾನ ಮಾಡಿ ಪಂಚಾಯಿತಿಯ ಒಳಗಡೆ ಕಾರ್ಯದರ್ಶಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಬಗ್ಗೆ ಕಾರ್ಯದರ್ಶಿ ಲಿಖಿತ ಹೇಳಿಕೆಯನ್ನು ಸಭೆಯ ಮುಂದಿಟ್ಟರು.

ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಗೀತಾಹರೀಶ್, ಸದಸ್ಯರುಗಳಾದ ಸೌಭಾಗ್ಯ ಲಕ್ಷ್ಮೀ, ರಜನಿ, ಉಷಾ, ಹೇಮ, ಸರ್ದಾರ್, ಆದಿತ್ಯಗೌಡ, ಪಾಂಡು, ಹರೀಶ್, ಲೆಕ್ಕಾಧಿಕಾರಿ ಹರಿಣಿ, ಬಿಲ್‍ಕಲೆಕ್ಟರ್ ವಸಂತ, ಹಾಗೂ ಕಂಪ್ಯೂಟರ್ ನಿರ್ವಾಹಣ ಫೌಜಿಯ ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ತಮ್ಮಯ್ಯಾಚಾರಿ ಸ್ವಾಗತಿಸಿ, ವಂದಿಸಿದರು.