ಮಡಿಕೇರಿ, ಮಾ. 11: ಮಹದೇವಪೇಟೆ ಮಹಿಳಾ ಸಹಕಾರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರಿಗಾಗಿ ಹಾಡಿನ ಸ್ಪರ್ಧೆ ಹಾಗೂ ಅಡುಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.
ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯೆಯರು ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಮಹದೇವಪೇಟೆ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಯನ್. ಸವಿತಾ ಭಟ್ ಮಾತನಾಡಿ, ಮಹಿಳೆಯರು ಕೀಳರಿಮೆಯನ್ನು ತೊರೆದು ಸಮಾಜದಲ್ಲಿ ಮುಂದೆ ಬರಲು ಮನಸ್ಸು ಮಾಡಬೇಕು. ಮಹಿಳೆಯರು ಮುಂದೆ ಬಂದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಜೀವನದಲ್ಲಿ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಮುಂದೆ ಬಂದು ತಮ್ಮ ಕಾಲ ಮೇಲೆ ತಾವು ನಿಂತ ಶಂಕರಿ ಅಮ್ಮ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಬೊಳ್ಳು ಮೇದಪ್ಪ, ಕಣ್ಣಿ ದೇವರಾಜ್, ಜಯಲಕ್ಷ್ಮಿ, ಉಮಾ ಜೆನಿಫರ್ ಮತ್ತಿತರರು ಪಾಲ್ಗೊಂಡಿದ್ದರು. ಸಂಧ್ಯಾ ಅಶೋಕ್ ಪ್ರಾರ್ಥಿಸಿ, ಸವಿತಾ ಭಟ್ ಸ್ವಾಗತಿಸಿದರು.