ಸುಂಟಿಕೊಪ್ಪ, ಮಾ. 11: ನಾಕೂರು ಟ್ರ್ಯಾಕ್ಟರ್ ಚಾಲಕ ಯೂಸೂಫ್ ನಿಧನಕ್ಕೆ ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಆಗಲಿದ ಸದಸ್ಯನಿಗೆ ಸಂತಾಪ ಹಾಗೂ ಮೃತರ ಕುಟುಂಬಕ್ಕೆ ಧನ ಸಹಾಯವನ್ನು ನೀಡಿದರು.
ನಾಕೂರಿನಿಂದ ಪನ್ಯಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಸಂದರ್ಭ ಹರದೂರು ಮುತ್ತಿನ ತೋಟದ ಬಳಿಯಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಾಲಕ ಯೂಸೂಫ್ ಸಾವನ್ನಪ್ಪಿದ್ದು, ಮೃತ ಯೂಸೂಫ್ ಮನೆಗೆ ತೆರಳಿದ ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳುವ ಮೂಲಕ ಧನ ಸಹಾಯದ ಚೆಕ್‍ನ್ನು ಮೃತ ಯೂಸೂಫ್ ಪೋಷಕರಿಗೆ ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಕೆ. ತಿಮ್ಮಪ್ಪ, ಹಸ್ತಾಂತರಿಸಿದರು. ಈ ಸಂದರ್ಭ ಮಾಜಿ ಅಧ್ಯಕ್ಷರುಗಳಾದ ಬಿ.ಎಂ. ಪೂವಪ್ಪ, ಅಚ್ಚುಪ್ಪ (ಹಂಸ), ಖಜಾಂಚಿ ರಿಜ್ವಾನ್ ಮತ್ತಿತರರು ಇದ್ದರು.