ಮೂರ್ನಾಡು, ಮಾ. 10: ಇಲ್ಲಿಗೆ ಸಮೀಪದ ಪಾರಾಣೆ ಕಾರ್ಪೋರೇಶನ್ ಬ್ಯಾಂಕ್ ಶಾಖೆ ವತಿಯಿಂದ ಕಾರ್ಪ್ ಕಿರಣ್ ಯೋಜನೆಯಡಿಯಲ್ಲಿ ಪಾರಾಣೆ ಪ್ರೌಢಶಾಲೆಗೆ ರೂ. 25 ಸಾವಿರ ಮೌಲ್ಯದ ಆಲ್ಮೇರಾಗಳನ್ನು ವಿತರಿಸಲಾಯಿತು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ. ದೇವಯ್ಯ, ಪಾರಾಣೆ ಕಾರ್ಪೋರೇಶನ್ ಬ್ಯಾಂಕ್ ಪ್ರಬಂಧಕ ವಿನ್ಸೆಂಟ್ ಅವರು ಶಾಲಾ ಮುಖ್ಯ ಶಿಕ್ಷಕಿ ಎ.ಜಿ. ರಜಿನಿ ಅವರಿಗೆ ಹಸ್ತಾಂತರಿಸಿದರು.