ಮಡಿಕೇರಿ, ಮಾ. 11: ಇಲ್ಲಿನ ಭಾರತೀಯ ವಿದ್ಯಾಭವನದ ಯೋಗ ಕೇಂದ್ರ ಹಾಗೂ ಬಾಲಭವನದ ಪತಂಜಲಿ ಯೋಗ ಕೇಂದ್ರದ ವತಿಯಿಂದ ಕೋಟೆ ಆವರಣದಲ್ಲಿ 108 ಸೂರ್ಯ ನಮಸ್ಕಾರ ಯೋಗ ಕಾರ್ಯ ನಡೆಯಿತು. 8ರ ಪೋರ ನಿಂದ ಹಿಡಿದು 72ರ ಹರಯದ ವೃದ್ಧೆಯಾದಿಯಾಗಿ ಪುರುಷ-ಮಹಿಳೆಯರು ಸೂರ್ಯನಮಸ್ಕಾರ ಮಾಡಿದರು. ಯೋಗ ಗುರುಗಳಾದ ಕೆ.ಕೆ. ಮಹೇಶ್ ಕುಮಾರ್ ಹಾಗೂ ಸುಧಾಕರ್ ಅವರುಗಳ ಮಾರ್ಗ ದರ್ಶನದಲ್ಲಿ ಯೋಗ ಪಟುಗಳು ಸೂರ್ಯನಿಗೆ ವಂದಿಸಿದರು.