ವೀರಾಜಪೇಟೆ, ಮಾ. 11: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಕೂಟ್ಯಾಲು-ನೀತರೆ-ಕೀಕೋಡ್ ಸಂಪರ್ಕ ರಸ್ತೆಯ ಅಭಿವೃದ್ದಿಗೆ 2016-17ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ

ರೂ. 10.00 ಲಕ್ಷಗಳ ಅನುದಾನ ವನ್ನು ಶಾಸಕ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಬಿಡುಗಡೆ ಮಾಡಿದ್ದಾರೆ. ಸದರಿ ಕಾಮಗಾರಿಯ ಭೂಮಿ ಪೂಜೆಯನ್ನು ತಾ. 10 ರಂದು ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಸುನಿಲ್ ಸುಬ್ರಮಣಿ ಅವರು ವೀರಾಜಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಹಾಗೂ ಈ ಭಾಗದ ಜನರ ಬೇಡಿಕೆಯಂತೆ ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವದು ಇಲ್ಲಿನ ಸಾರ್ವಜನಿಕರ ಕರ್ತವ್ಯವಾಗಿದೆ. ರಸ್ತೆಯ ಎರಡೂ ಬದಿ ಜಾಗವನ್ನು ಸಾರ್ವಜನಿಕರು ರಸ್ತೆಗೆ ಬಿಟ್ಟು ಸಹಕರಿಸಬೇಕು. ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಸಂಬಂಧಿಸಿದವರೊಂದಿಗೆ ವ್ಯವಹರಿಸಲಾಗುದು ಎಂದು ಹೇಳಿದರು. ಸ್ಥಳೀಯರಾದ ಕುಪುಡಿರ ಪೆÇನ್ನು ಮುತ್ತಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ಬಹುಮುಖ್ಯವಾದ ಸಂಪರ್ಕ ರಸ್ತೆಗೆ ಅನುದಾನ ಬಿಡುಗಡೆ ಮಾಡಿ ಸಹಕರಿಸಿದ ವಿಧಾನ ಪರಿಷತ್ ಶಾಸಕ ಸುನಿಲ್ ಸುಬ್ರಮಣಿ ಅವರಿಗೆ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸಿದರು.

ವೀರಾಜಪೇಟೆ ತಾಲೂಕು ಪಂಚಾಯಿ ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಂಬಿ ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಕಾಯಪಂಡ ಸುನಿಲ್, ಬಿರುನಾಣಿ ಜಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಾಯ್ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಬೊಟ್ಟಂಗಡ ಗಿರೀಶ್, ಬಲ್ಯಮೀದೇರಿರ ಸುರೇಶ್, ಬಲ್ಯಮೀದೇರಿರ ನಿವೃತ್ತ ಕ್ಯಾಪ್ಟನ್ ಮಾಚಯ್ಯ, ಕಾಯಪಂಡ ಮಧು ಮೋಟಯ್ಯ, ಕಾಯಪಂಡ ಚಿಣ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಅಣ್ಣೀರ ಮಲ್ಲಿಗೆ, ಸ್ಥಳೀಯರು, ಅಭಿಯಂತರ ಓಬಯ್ಯ, ಗುತ್ತಿಗೆದಾರ ಜೀವನ್ ಮತ್ತಿತರರು ಉಪಸ್ಥಿತರಿದ್ದರು.