ಮಡಿಕೇರಿ, ಮಾ.11: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಕಾರದಲ್ಲಿ ‘ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ’ ಬಗ್ಗೆ ಜನಜಾಗೃತಿ ಅಭಿಯಾನವು ತಾ. 13 ರಿಂದ ಆರಂಭಗೊಳ್ಳಲಿದೆ.

ತಾ. 13 ರಂದು ಬೆಳಗ್ಗೆ 11.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಬೀದಿ ನಾಟಕ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿ.ಪಂ. ಸಿಇಒ ಚಾರುಲತಾ ಸೋಮಲ್ ಅವರು ಚಾಲನೆ ನೀಡಲಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಈ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಸರ್ಕಾರದ ಜನಪರ ಹಲವು ಕಾರ್ಯಕ್ರಮಗಳ ಮಾಹಿತಿ ನೀಡುವ ಕ್ಷೇತ್ರ ಪ್ರಚಾರ ಕಾರ್ಯಕ್ರಮ ನಡೆಯಲಿದೆ.

ಮಡಿಕೇರಿ ತಾಲೂಕಿನ ಗಾಂಧಿನಗರ-ಮೂರ್ನಾಡು, ಕಾಂತೂರು ಮೂರ್ನಾಡು, ಬೇತ್ರಿ, ನಾಪೋಕ್ಲು, ಪಾರ್ಟೆಕಾಡು ಪೈಸಾರಿ ಹೊದ್ದೂರು, ತೊಂಭತ್ತುಮನೆ ಹಾಕತ್ತೂರು ಹುಳಿತಾಳ. ವೀರಾಜಪೇಟೆ ತಾಲೂಕಿನ ಪರುಂಬಾಡಿ, ಬಾಳುಗೋಡು, ಕರಡಿಗೋಡು, ಸಿದ್ದಾಪುರ, ಮಾಲ್ದಾರೆ, ಕಾರ್ಮಾಡು, ಕುಟ್ಟ, ಶ್ರೀಮಂಗಲ, ಸೋಮವಾರಪೇಟೆ ತಾಲ್ಲೂಕಿನ ಹಳೆಕೂಡಿಗೆ, ನೆಲ್ಲಿಹುದಿಕೇರಿ, ಚೌಡ್ಲು, ಬಳಗುಂದ, ಗಣಗೂರು, ತ್ಯಾಗರಾಜ ಕಾಲೋನಿ, ಚಿಕ್ಕಳುವಾರದಲ್ಲಿ ನಡೆಯಲಿದೆ.

ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ಮಡಿಕೇರಿ ತಾಲೂಕಿನ ಯವಕಪಾಡಿ ಮತ್ತು ನಾಲಡಿ, ವೀರಾಜಪೇಟೆ ತಾಲೂಕಿನ ಚೆನ್ನಂಗಿ ಬಸವನಹಳ್ಳಿ, ದಿಡ್ಡಳ್ಳಿ, ಕಾರೆಹಡ್ಲು, ಚಿಕ್ಕರೇಷ್ಮೇ, ರೇಷ್ಮೇಹಡ್ಲು (ದೊಡ್ಡ ರೇಷ್ಮೆ) ಇಲ್ಲಿ ನಡೆಯಲಿದೆ. ಸೋಮವಾರಪೇಟೆ ತಾಲೂಕಿನ ಬಾಳೆಗಂದಿ, ತ್ಯಾಗತ್ತೂರು ಮತ್ತು ವಾಲ್ನೂರುವಿನಲ್ಲಿ ನಡೆಯಲಿದೆ.