ಗೋಣಿಕೊಪ್ಪಲು, ಮಾ. 12: ಬೆಂಗಳೂರಿನ ಜೈನ್ ಯುನಿವರ್ಸಿಟಿ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಸ್ಥಳೀಯ ಶಿಟೋರಿಯೊ ಕರಾಟೆ ಸಂಸ್ಥೆ ಪಟುಗಳು ಸ್ಪರ್ಧಿಸಿ ಸಾಧನೆ ಮಾಡಿದ್ದಾರೆ.

12 ರಿಂದ 13 ರ ವಯೋಮಿತಿಯ ಸ್ಪರ್ಧೆಯಲ್ಲಿ ಕಾಪ್ಸ್ ಶಾಲೆಯ ಸಮ್ಮುಖ್ ತೃತೀಯ ಸ್ಥಾನ, 13 ರಿಂದ 14 ರ ವಯೋಮಿತಿಯ ವಿಭಾಗದಲ್ಲಿ ಲಯನ್ಸ್ ಶಾಲೆಯ ಅಚಲ್ ಉತ್ತಪ್ಪ ದ್ವಿತೀಯ, 16 ವಯೋಮಿತಿ ಮೇಲ್ಪಟ್ಟ ವಿಭಾಗದಲ್ಲಿ ಸಿಐಟಿ ಕಾಲೇಜಿನ ಉಳುವಂಗಡ ಅಮಿತ್ ತೃತೀಯ ಸ್ಥಾನ ಪಡೆದಿದ್ದಾರೆ. ಹಿರಿಯ ಕರಾಟೆ ಪಟುಗಳಾದ ಅರುಣ್ ಮಾಚಯ್ಯ, ಪ್ರಸಾದ್ ದೇವಯ್ಯ ಹಾಗೂ ಜಮ್ಮಡ ಜಯ ಜೋಯ್ಯಪ್ಪ ಮಾರ್ಗದರ್ಶನದಲ್ಲಿ ಕರಾಟೆ ಪಟುಗಳು ತರಬೇತಿ ಪಡೆದಿದ್ದಾರೆ.