ಮಾನ್ಯರೆ,

ಗುಜರಾತ್ ರಾಜ್ಯದಲ್ಲಿ ಕಾನೂನು ಜಾರಿಯಲ್ಲಿದೆ. ರಸ್ತೆ ಬದಿಗಳಲ್ಲಿ ಮನೆ, ಕಟ್ಟಡ, ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಹಲವು ರೂಪು-ರೇಷೆಗಳಿವೆ.

ಕಟ್ಟಡ ನಿರ್ಮಾಣದ ಸಂದರ್ಭ ಮರಳು, ಜಲ್ಲಿ, ಕಬ್ಬಿಣ ಹಾಗೂ ಇತರ ವಸ್ತುಗಳನ್ನು ಇಂತಷ್ಟೇ ದಿನ ಅಲ್ಲಿ ಇರಿಸಲು ಕಾಲಾವಕಾಶವಿದೆ. ನಿಗದಿತ ಅವಧಿಯ ಬಳಿಕ ವಸ್ತುಗಳು ರಸ್ತೆ ಬದಿಯಲ್ಲಿದ್ದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವದು ಹಾಗೂ ದಂಡ ವಿಧಿಸಲಾಗುವದು. ಜೊತೆಯಲ್ಲಿ ಲಾರಿಗಳಲ್ಲಿ ಮರಳು, ಸೀಮೆಂಟ್ ಸಾಗಿಸುವಾಗ ಅವುಗಳಿಂದ ಧೂಳು ಹಾಗೂ ಕಣಗಳು ಹೊರ ಬಾರದಂತೆ ಟಾರ್ಪಾಲಿನಿಂದ ಮುಚ್ಚಿರಬೇಕು.

ಆದರೆ ಸುಂದರ ಮಡಿಕೇರಿಯಲ್ಲಿ ಅನೇಕ ರಸ್ತೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನು ಹಾಗೆಯೇ ಬಿಡಲಾಗಿದೆ. ಅಲ್ಲದೆ ಕೆಲವು ರಸ್ತೆಗಳ ಬದಿಗಳಲ್ಲಿ, ಮನೆ-ಕಟ್ಟಡಗಳನ್ನು ಕಡೆವಿದ ಹಾಗೂ ರಿಪೇರಿ ಮಾಡಿದ ಸಂದರ್ಭ ಉಳಿದ ಗಾರೆ, ಇಟ್ಟಿಗೆಗಳನ್ನು ಬಿಸುಟು ಹಾಕಿದ್ದಾರೆ. ನಮ್ಮಂತ ಪ್ರವಾಸಿಗರಿಗೆ ಸುಂದರ ಮಡಿಕೇರಿಯ ಕಲ್ಪನೆಗೆ ಇವೆಲ್ಲ ಕಪ್ಪು ಚುಕ್ಕಿಯಂತೆ ಕಂಡವು. ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿಯಮ ರೂಪಿಸಿ.

-(emಚಿiಟ ಮೂಲಕ ಕಳುಹಿಸಿದ ಪತ್ರ) ರಜನೀಶ್ ಮೆಹ್ತಾ, ಗುಜರಾತ್