ನಾಪೆÇೀಕ್ಲು, ಮಾ. 12: ಕಳೆದ 2 ತಿಂಗಳಿನಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಕಾಮಾಲೆ (ಜಾಂಡೀಸ್) ರೋಗಕ್ಕೆ ಸಮೀಪದ ಚೆರಿಯಪರಂಬುವಿನ ಗೃಹಿಣಿ ಬಲಿಯಾಗಿದ್ದಾರೆ. ಚೆರಿಯಪರಂಬು ನಿವಾಸಿ ಸೈನುದ್ದೀನ್ ಎಂಬವರ ಪತ್ನಿ ಶಬಾನ (21) ಮೃತಪಟ್ಟ ದುರ್ಧೈವಿ ಮಹಿಳೆ.

ಕಳೆದ ಸೋಮವಾರ (ಮಾ. 6 ರಂದು) ಅನಾರೋಗ್ಯದ ಕಾರಣ ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಆಗಮಿಸಿದ್ದಾರೆ. ಆ ಸಂದರ್ಭದಲ್ಲಿ ರಕ್ತ ಪರೀಕ್ಷೆ ನಡೆಸಲಾಗಿ ಮೂತ್ರದಲ್ಲಿ ಜಾಂಡೀಸ್ ಇರುವ ಬಗ್ಗೆ ತಿಳಿದು ಬಂದಿದೆ. ಮನೆಯವರು ಎಲ್ಲರಂತೆ ಇವರಿಗೂ ಹಸಿರು ಔಷಧಿ ಕೊಡಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ನಾಲ್ಕು ದಿನಗಳಲ್ಲಿ ರೋಗ ಉಲ್ಬಣಗೊಂಡಿದೆ. ಪುನಃ ಆಸ್ಪತ್ರೆಗೆ ಬಂದು ಪರೀಕ್ಷಿಸಿದಾಗ ಜಾಂಡೀಸ್ ಅವರ ಲಿವರ್, ಕಿಡ್ನಿ ಮತ್ತು ಮೆದುಳಿಗೆ ಹರಡಿರುವದಾಗಿ ತಿಳಿದು ಬಂದಿದೆ. ಶನಿವಾರ ಅಸ್ವಸ್ಥರಾಗಿದ್ದ ಶಬಾನಳನ್ನು ಮಡಿಕೇರಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಚಿಕಿತ್ಸೆ ನೀಡಲು ಒಪ್ಪದ ಕಾರಣ ಕೇರಳದ ಕೋಯಿಕೋಡ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದಾರೆ.

(ಮೊದಲ ಪುಟದಿಂದ) ಚಿಕಿತ್ಸೆ ಫಲಕಾರಿಯಾಗದೆ ಕಾಲಿಕಟ್ ಮೆಡಿಕಲ್ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಿಸದೆ ಶನಿವಾರ ಮಧ್ಯರಾತ್ರಿ ಮೃತಪಟ್ಟಿರುವದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ನಾಪೋಕ್ಲು ಸಮೀಪದ ಕಲ್ಲುಮೊಟ್ಟೆಯ ಮೈದು ಅವರ ಪುತ್ರಿ ಶಬಾನಳನ್ನು ಚೆರಿಯಪರಂಬುವಿನ ಅಹಮ್ಮದ್ ಅವರ ಪುತ್ರ ಸೈನುದ್ದೀನ್ ಎಂಬವರಿಗೆ 2 ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಉದ್ಯೋಗ ನಿಮಿತ್ತ ಕೊಲ್ಲಿ ರಾಷ್ಟ್ರದಲ್ಲಿದ್ದಾರೆ. ಜಾಂಡೀಸ್ ಮಹಾಮಾರಿಗೆ ಇವರ ಒಂದು ವರ್ಷದ ಮಗು ತಾಯಿ ಇಲ್ಲದೆ ತಬ್ಬಲಿಯಾಗಿದೆ.

ಸಾರ್ವಜನಿಕರ ಆಕ್ರೋಶ: ಕಳೆದ ಎರಡು ತಿಂಗಳಿನಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಜಾಂಡೀಸ್ ಇರುವ ಬಗ್ಗೆ ತಿಳಿದು ಬಂದಿದ್ದರೂ ಇದರ ತಡೆಗೆ ಯಾವದೇ ಸೂಕ್ತ ಕ್ರಮಕೈಗೊಂಡಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಅಮಾಯಕ ಹೆಣ್ಣು ಮಗಳು ಪ್ರಾಣ ಕಳೆದುಕೊಳ್ಳು ವಂತಾಗಿದೆ. ಇನ್ನೂ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಈ ಸಾವಿಗೆ ಸಂಬಂಧಿಸಿದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಧ್ಯಕ್ಷರ ಪ್ರತಿಕ್ರಿಯೆ: ನಾಪೋಕ್ಲು ಗ್ರಾ.ಪಂ. ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಈ ಬಗ್ಗೆ ಪ್ರತಿಕ್ರಿಯಿಸಿ, ‘ಜಾಂಡೀಸ್’ ರೋಗದ ಬಗ್ಗೆ ಈಗಾಗಲೇ ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ. ನಾಪೋಕ್ಲು ಮಾರುಕಟ್ಟೆ ಬಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಬೇತು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ, ರೋಗ ಬಂದವರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವದು ಉತ್ತಮ. ಈಗಾಗಲೇ ನೀರಿನ ಟ್ಯಾಂಕ್‍ಗಳಿಗೆ ಬ್ಲಿಚಿಂಗ್ ಪೌಡರ್ ಹಾಕಿ ಶುದ್ಧಗೊಳಿಸಲಾಗಿದೆ ಮುಂದೆ ರೋಗ ಬಾರದ ರೀತಿಯಲ್ಲಿ ಗ್ರಾಮ ಪಂಚಾಯತ್‍ನಿಂದ ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. - ಪ್ರಭಾಕರ್, ದುಗ್ಗಳ