ಸುಂಟಿಕೊಪ್ಪ, ಮಾ. 12: ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ ನೇಮಕವಾದ ಬಿ.ಬಿ.ಭಾರತೀಶ್ ಅವರಿಗೆ ತಮ್ಮ ಹುಟ್ಟೂರು ಸುಂಟಿಕೊಪ್ಪದಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಅದ್ದೂರಿ ಸ್ವಾಗತ ನೀಡಿದರು.ಇಲ್ಲಿನ ಕನ್ನಡ ವೃತ್ತದಲ್ಲಿ ಭಾರತೀಶ್ ಅವರಿಗೆ ಮಾಲಾರ್ಪಣೆ ಮಾಡಿ ಜೈ ಘೋಷದೊಂದಿಗೆ ಕಾರ್ಯಕರ್ತರು ಸಂಭ್ರಮಿಸಿದರು.

ಹಿರಿಯ ಬಿಜೆಪಿ ಮುಖಂಡ ಯಂಕನ ಕರುಂಬಯ್ಯ ಮಾತನಾಡಿ, ಇಂದು ರಾಜಕೀಯ ವಿಷಮ ಪರಿಸ್ಥಿತಿಯಲ್ಲಿದೆ. ದೇಶದ ಜನತೆಯಲ್ಲಿನ ವಿಚಾರಧಾರೆಗಳು ವಿಭಿನ್ನ ದೃಷ್ಟಿಕೋನದಲ್ಲಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ಪುಟ್ಟ ಗ್ರಾಮದ ಪುಟ್ಟ ಹುಡುಗ ಭಾರತೀಶನಿಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ. ರಾಜಕೀಯದಲ್ಲಿ ಕಾಲೆಳೆಯುವದು ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಬಡವ ಬಲ್ಲಿದ, ಜಾತಿ,ಮತ ನೋಡದೇ ಎಲ್ಲ ವರ್ಗದವರನ್ನು ಒಟ್ಟಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮಹತ್ವದ ಜವಾಬ್ದಾರಿ ಇದೆ ಎಂಬ ಕಿವಿ ಮಾತು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಲ್ಲಿ ಜವಾಬ್ದಾರಿ ಹುಡುಕಿಕೊಂಡು ಬರಲಿದೆ ಎಂಬದಕ್ಕೆ ನಾನೇ ಸಾಕ್ಷಿ. ಪಕ್ಷದಲ್ಲಿ ಹಲವಾರು ಜವಾಬ್ಧಾರಿ ಲಭಿಸಿದ ತಾನು ಅದನ್ನು ಸುಸೂತ್ರವಾಗಿ ಪ್ರಾಮಾಣಿಕವಾಗಿ ನಿರ್ವಹಿಸಿದಕ್ಕೆ ಇಂದು ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿದೆ. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಕೆಲವರಲ್ಲಿ ಮೂಡಿದ ಗೊಂದಲವನ್ನು ಇಬ್ಬರು ಶಾಸಕರುಗಳು, ಮಾಜಿ ಅಧ್ಯಕ್ಷರು,ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿಪಡಿಸುತ್ತೇನೆ. ಹಿರಿಯರ ಸಲಹೆ ಸೂಚನೆಯಂತೆ ಪಕ್ಷವನ್ನು ಸದೃಢವಾಗಿ ಕಟ್ಟುತ್ತೇನೆ. ಟೀಕೆ ಮಾಡಿದೆ ನಾವು ಬೆಳೆಯುವದಕ್ಕೆ ಮುಂದಿರುವ ಸವಾಲನ್ನು ಸ್ವೀಕರಿಸಿದರೆ ಮುಂದಿನ ಹಾದಿ ಸುಗಮವಾಗಲಿದೆ ಎಂದರು.

ತಾ.ಪಂ.ಸದಸ್ಯೆ ವಿಮಲಾವತಿ ಮಾತನಾಡಿ, ಸಂಘಟನೆಯಲ್ಲಿ ತೊಡಗಿಸಿಕೊಂಡ ಭಾರತೀಶ್ ಅವರಿಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ ಎಂದರು.

ಮಾಜಿ ನಗರ ಬಿಜೆಪಿ ಅಧ್ಯಕ್ಷ ಬಿ.ಕೆ.ಮೋಹನ್ ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ಸದಸ್ಯರಿದ್ದಾಗ ಸಿಕ್ಕಿದೆ.ಜಿ.ಪಂ. ಅಕ್ಷರ ದಾಸೋಹ ಅವ್ಯವಹಾರವನ್ನು ಬಯಲಿಗೆಳೆದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಕಾಂಗ್ರೆಸ್ ಜನವೇದನಾ ಸಭೆಯಲ್ಲಿ ಅಸ್ತಿತ್ವವಿಲ್ಲದೆ ವ್ಯಕ್ತಿಯೊಬ್ಬರು ಪ್ರದಾನಿ ನರೇಂದ್ರ ಮೋದಿ ಅವರನ್ನು ಕೀಳು ಶಬ್ದದಿಂದ ಹಿಯಾಳಿಸಿರುವದು ಖಂಡನೀಯ ಎಂದು ಹೇಳಿದರು,

ಸುಂಟಿಕೊಪ್ಪ ನಗರ ಬಿಜೆಪಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಮಾಜಿ ಗ್ರಾಮ ಪಂ.ಅಧ್ಯಕ್ಷ ಬಿ.ಐ.ಭವಾನಿ,ನಾಕೂರು ಶಿರಂಗಾಲ ಗ್ರಾ.ಪಂ. ಸದಸ್ಯ ಅಂಬೆಕಲ್ ಚಂದ್ರಶೇಖರ್, ಸತೀಶ್.ಪೊನನ್À. ಗೋಪಾಲ. ಬಿ.ಕೆ.ಪ್ರಶಾಂತ್. ಆನಂದ, ಬಿ.ಎಂ.ಸುರೇಶ್, ಸಿ ಚಂದ್ರ, ಜ್ಯೋತಿ ಭಾಸ್ಕರ್, ಬಿ.ಎಸ್.ಈರಪ್ಪ, ಶಂಕರನಾರಾಯಣ, ಸಂದೀಪ್, ಚೋಮಣಿ, ವಿಜಯ, ಪಟ್ಟೆಮನೆ ಉದಯ ಕುಮಾರ್, ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗೇಶ್ ಪೂಜಾರಿ, ಯುವ ಮೋರ್ಚಾ ಅಧ್ಯಕ್ಷ ರಂಜಿತ್ ಪೂಜಾರಿ, ಎಸ್ ಸಿ ಮೋರ್ಚಾ ಅಧ್ಯಕ್ಷ ಹೊನ್ನಪ್ಪ, ರಾಮಕುಟ್ಟಿ, ಡಾ.ಶಶಿಕಾಂತ್ ರೈ,ಸದಾಶಿವ ರೈ, ಸುದೀಶ್ ಕುಂಞರಾಮನ್, ಬಿ.ಎಸ್.ಆಶೋಕ್ ಸೇಟ್ ಇತರರು ಇದ್ದರು.

ಪಠಾಕಿ ಸಿಡಿಸಿದ ಪರಿಣಾಮ ರಸ್ತೆಯಲ್ಲಿ ಬಿದ್ದಿದ್ದ ಕಾಗದದ ಚೂರುಗಳನ್ನು ಬಿಜೆಪಿ ಕಾರ್ಯಕರ್ತರು ಗುಡಿಸಿ ತೆಗೆದು ಸ್ವಚ್ಛ ಭಾರತ್ ಅಭಿಯಾನಕ್ಕೆ ಸಾಥ್ ನೀಡಿದ್ದು ಗಮನಾರ್ಹವಾಗಿತ್ತು.