ನಾಪೋಕ್ಲು, ಮಾ. 12: ಕೊಡಗಿನಲ್ಲಿ ಮಳೆ - ಬೆಳೆಗೆ ಆದಿದೇವನೆಂಬ ಖ್ಯಾತಿಯ ಕಕ್ಕಬ್ಬೆ ಶ್ರೀ ಪಾಡಿ ಇಗ್ಗುತ್ತಪ್ಪ, ನೆಲಜಿಯ ಶ್ರೀ ಇಗ್ಗುತ್ತಪ್ಪ ಹಾಗೂ ಪೇರೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ಈಶ್ವರ - ಇಗ್ಗುತ್ತಪ್ಪ ದೇವರುಗಳ ಕುಂಭಮಾಸದ ವಾರ್ಷಿಕ ಜಾತ್ರೆ ಅದ್ದೂರಿಯಾಗಿ ನೆರವೇರಿತು. ವರ್ಷಂಪ್ರತಿಯಂತೆ ಮೂರು ದೇವ ಸನ್ನಿಧಿಗಳಿಂದ ಇಂದು ಆಯಾ ಗ್ರಾಮಸ್ಥರು ಭಕ್ತರೊಡಗೂಡಿ ಎತ್ತು ಪೋರಾಟ ಸಹಿತ ಸಾಂಪ್ರದಾಯಿಕ ‘ದುಡಿಪಾಟ್'ನೊಂದಿಗೆ ಮಲ್ಮ ಬೆಟ್ಟದ ತುತ್ತ ತುದಿಯಲ್ಲಿರುವ ಪ್ರಕೃತಿ ರಮಣೀಯ ಆದಿನೆಲೆಗೆ ತೆರಳಿ ಪೂಜಾದಿಗಳಲ್ಲಿ ಪಾಲ್ಗೊಂಡರು.

ಪಾಡಿ ಇಗ್ಗುತ್ತಪ್ಪ ಹಾಗೂ ನೆಲಜಿ ಸನ್ನಿಧಿಗಳಲ್ಲಿ ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತರು ತುಲಾಭಾರ ಸೇವೆ, ಹರಕೆ ಕಾಣಿಕೆ ಸಲ್ಲಿಸಿ, ಮಹಾಪೂಜೆ ಯೊಂದಿಗೆ ಪ್ರಸಾದ ಸ್ವೀಕರಿಸಿ ಪುನೀತರಾದರು. ಪೇರೂರು ಸನ್ನಿಧಿಯಲ್ಲಿ ಕೂಡ ವಾರ್ಷಿಕ ಮಹಾಪೂಜೆ, ಅನ್ನದಾನ ನೆರವೇರಿತು.

ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿ ಕೋತ್ಸವವು ವಿಜೃಂಭಣೆಯಿಂದ ನೆರವೇರಿತು.

ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೆÇೀರಾಟ ಹಾಗೂ

(ಮೊದಲ ಪುಟದಿಂದ) ಬಲಿವಾಡುವಿನ ಆಗಮನದಿಂದ ದೇವಳದಲ್ಲಿ ಉತ್ಸವ ಆರಂಭ ಗೊಂಡಿತು. ಅದರೊಂದಿಗೆ ಇನ್ನಿತರ ತಕ್ಕಮುಖ್ಯಸ್ಥರ ಎತ್ತು ಪೆÇೀರಾಟ ಸೇವೆಗಳೂ ಸಂಪ್ರದಾಯದಂತೆ ನಡೆಯಿತು. ಭಕ್ತರ ತುಲಾಭಾರ ಸೇವೆಗಳು, ಮಧ್ಯಾಹ್ನದ ಮಹಾ ಪೂಜೆಯ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿಯೊಂದಿಗೆ ಮೂರ್ನಾಲ್ಕು ಕಿ.ಮೀ. ದೂರದ ಆದಿ ಸ್ಥಳ ಮಲ್ಮ ಬೆಟ್ಟಕ್ಕೆ ತೆರಳಿ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮೀಪದ ನೆಲಜಿ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು, ಹಾಗೂ ಪೇರೂರು ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು ಭಕ್ತಾದಿಗಳು ಮಲ್ಮ ಬೆಟ್ಟದಲ್ಲಿ ಸೇರುತ್ತಾರೆ. ಮೂರು ಇಗ್ಗುತ್ತಪ್ಪ ದೇವಾಲಯಗಳ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ದೈವಿಕ ವಿಧಿವಿಧಾನಗಳು ನೈವೇಧ್ಯ, ಪೂಜೆ, ಹರಕೆ ಸೇವೆಗಳನ್ನು ನೆರವೇರಿಸಿ ದೇವ ಕಟ್ಟನ್ನು ಹಿಂತೆಗೆಯಲಾಯಿತು . ರಾತ್ರಿ ದೇವಾಲಯದಲ್ಲಿ ಉತ್ಸವ ಮೂರ್ತಿ ಯ ನೃತ್ಯೋತ್ಸವದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಂಡಿತು.

ದೈವಿಕ ವಿಧಿವಿಧಾನಗಳನ್ನು ವೇಧ ಮೂರ್ತಿಗಳಾದ ಕುಶ ಭಟ್, ಲವ ಭಟ್, ಜಗದೀಶ್ ಮತ್ತಿತರರು ಪಾಡಿ ಯಲ್ಲಿ ನೆರವೇರಿಸಿದರು. ದೇವತಕ್ಕರಾದ ಪರದಂಡ ಕಾವೇರಪ್ಪ ಹಾಗೂ ಪ್ರಮುಖರಾದ ಕಾಂಡಂಡ ಜೋಯಪ್ಪ, ಪರದಂಡ ಡಾಲಿ, ಲಲಿತಾ ನಂದಕುಮಾರ್, ಹ್ಯಾರಿ ಮಂದಣ್ಣ, ನರೇಶ್, ರಘು, ಸುರಾ ನಾಣಯ್ಯ, ಡಾ. ಕಾವೇರಪ್ಪ, ಪಾರುಪತ್ಯೆಗಾರ ಪ್ರಿನ್ಸ್ ತಮ್ಮಪ್ಪ, ವ್ಯವಸ್ಥಾಪಕ ಕಾಳಿಂಗ ಮೊದಲಾದ ವರು ಉಪಸ್ಥಿತರಿದ್ದರು.

ನೆಲಜಿ ಇಗ್ಗುತ್ತಪ್ಪ : ನೆಲಜಿ ಇಗ್ಗುತ್ತಪ್ಪ ದೇವಳದಲ್ಲಿಯೂ ಕುಂಬ್ಯಾರು ಕಲಾಡ್ಚ ಹಬ್ಬದ ಪ್ರಯುಕ್ತ ಎತ್ತು ಪೆÇೀರಾಟ, ತುಲಾಭಾರ ಸೇವೆ, ಮಹಾಪೂಜೆ, ದೇವರಬಲಿ,