ಮಡಿಕೇರಿ, ಮಾ. 12: ಕೊಡಗಿನ ಕುಮಾರಿ ತೇಜಸ್ವಿನಿ ಶರ್ಮಾ, ಮಿಸ್ ಇಂಟರ್ ಕಾಂಟಿನೆಂಟಲ್ ಯೂನಿವರ್ಸ್ ಸ್ಪರ್ಧೆಯ ಕೊನೆಯ ಹಂತ ತಲುಪಿದ್ದಾರೆ. ಮಾರ್ಚ್ 1 ರಿಂದ 5ನೇ ತಾರೀಖಿನವರೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸ್ಪರ್ಧೆಯಲ್ಲಿ ಈಕೆ ಪಾಲ್ಗೊಂಡಿದ್ದು, ಭಾರತ ಸೇರಿದಂತೆ ರಷ್ಯಾ, ನೇಪಾಳ, ಅಮೇರಿಕಾ, ಮ್ಯಾನ್ಮಾರ್, ಮಾಲ್ಡೀವ್ಸ್ ಹಾಗೂ ಇತರ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತೇಜಸ್ವಿನಿ ಭಾರತವನ್ನೂ 2 ಪ್ರತಿಷ್ಠಿತ ಫ್ಯಾಷನ್ ಸಂಸ್ಥೆಗಳ ಮೂಲಕ ಪ್ರತಿನಿಧಿಸಿದ್ದು, ಫೆ. 7 ರಂದು ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಸ್ ಇಂಟರ್ ಕಾಂಟಿನೆಂಟಲ್ ಯೂನಿವರ್ಸ್ ಇಂಡಿಯಾ ಆಗಿ ಕಿರೀಟ ಧಾರಣೆ ಮಾಡಲಾಗಿತ್ತು. ಭಾರತದಲ್ಲಿ 200 ಯುವತಿಯರು ಸ್ಪರ್ಧಿಸಿದ್ದರು.

ಮಡಿಕೇರಿಯ ಉದ್ಯಮಿ ಪ್ರಸನ್ನ ಭಟ್ ಹಾಗೂ ನಗರಸಭಾ ಸದಸ್ಯೆ ಸಂಗೀತ ಪ್ರಸನ್ನ ಅವರ ಪುತ್ರಿ ಆಗಿರುವ ತೇಜಸ್ವಿನಿ ಸಂತ ಜೋಸೆಫರ ವಿದ್ಯಾರ್ಥಿಯಾಗಿ ನಂತರ ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಇದೀಗ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ.