ಸೋಮವಾರಪೇಟೆ, ಮಾ. 12: ಪಟ್ಟಣದ ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ಜಾತ್ರೋತ್ಸವಕ್ಕೆ ಭಾನುವಾರದಂದು ಧ್ವಜಾರೋಹಣ ಮಾಡುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಜಾತ್ರೋತ್ಸವದ ಧ್ವಜಾರೋಹಣ ವನ್ನು ದೇವಾಲಯ ಸಮಿತಿಯ ಗೌರವಾಧ್ಯಕ್ಷ ಎನ್.ಜಿ. ಜನಾರ್ಧನ್ ಹಾಗೂ ಅಧ್ಯಕ್ಷ ಎನ್.ಡಿ. ವಿನೋದ್ ನೆರವೇರಿಸಿದರು. ಮುಂಜಾನೆ ಗಣಪತಿ ಹೋಮ ನಡೆಯಿತು. ನಂತರ ದೇವಾಲಯ ಆವರಣ ಹಾಗೂ ದೈವಗಳ ಆಯುಧಗಳ ಶುದ್ಧೀಕರಣ ಪೂಜೆ ನಡೆಯಿತು.

ದೇವಾಲಯದಲ್ಲಿ ಪ್ರತಿಷ್ಠಾಪಿಸಿ ರುವ ನಾಗದೇವತೆಗಳಿಗೆ ವಿವಿಧ ಅಭಿಷೇಕ, ಅರ್ಚನೆಗಳೊಂದಿಗೆ ವಿಶೇಷ ಪೂಜೆ ನಡೆಯಿತು. ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂಧರಿ ಅವರ ಪೌರೋಹಿತ್ಯದಲ್ಲಿ ನಡೆಯಿತು. ಈ ಸಂದರ್ಭ ಮುತ್ತಪ್ಪಸ್ವಾಮಿ ದೇವಾಲಯದ ಬಿ.ಕೆ. ಗೋಪಾಲ್ ಮಡಯನ್ ಹಾಗೂ ಅರ್ಚಕ ಜಯಂತ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ಜಾತ್ರೋತ್ಸವದ ಅಂಗವಾಗಿ ದೇವಾಲಯದ ಆವರಣವನ್ನು ವಿದ್ಯುತ್ ದೀಪಗಳಿಂದ ಆಕರ್ಷಣೀಯ ವಾಗಿ ಅಲಂಕರಿಸಲಾಗಿದೆ. ಅಚ್ಚುಕಟ್ಟಿನ ಜಾತ್ರೋತ್ಸವದ ವ್ಯವಸ್ಥೆಗಾಗಿ ದೇವಾಲಯ ಸಮಿತಿ ಸದಸ್ಯರುಗಳು ಶ್ರಮಿಸುತ್ತಿದ್ದಾರೆ.