ಮಡಿಕೇರಿ, ಮಾ. 12: ರೋಟರಿ ಮಿಸ್ಟಿಹಿಲ್ಸ್, ಮುಳಿಯ ಪ್ರಾಪರ್ಟಿಸ್, ರೋಟರ್ಯಾಕ್ಟ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಇಂದು ಮುಳಿಯ ಹಿಮವನ ಬಡಾವಣೆಯಲ್ಲಿ ಏರ್ಪಡಿಸಲಾಗಿದ್ದ ‘ಸ್ಕಿಲ್ ಫಾರ್ ಡ್ರೈವ್ ಅಂಡ್ ರೈಡ್' ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನ ಸ್ಪರ್ಧೆಗಳು ನೋಡುಗರನ್ನು ರಂಜಿಸಿದವು.

ದ್ವಿಚಕ್ರ ವಾಹನ ವಿಭಾಗದಲ್ಲಿ 15ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಚತುಷ್ಚಕ್ರ ವಾಹನ ವಿಭಾಗದಲ್ಲೂ 20ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡು ತಮ್ಮ ಚಾಲನ ಸಾಮಥ್ರ್ಯ ಪ್ರದರ್ಶಿಸಿದರು.

ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಡರ್ಟ್‍ಟ್ರ್ಯಾಕ್ ರೈಡರ್ ಕೊಂಗೇಟಿರ ಬೋಪಯ್ಯ, ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್, ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಅಬ್ದುಲ್ ಕೌಸರ್, ರೋಟರಿ ಮಿಸ್ಟಿಹಿಲ್ಸ್ ಮಾಜಿ ಸಹಾಯಕ ಗವರ್ನರ್ ರವೀಂದ್ರ ರೈ ಮತ್ತಿತರರು ಇದ್ದರು.