ಮಡಿಕೇರಿ, ಮಾ. 13: ಜಿಲ್ಲೆಯ ಬಹುತೇಕ ಆದಿವಾಸಿಗಳನ್ನು ತೋಟದ ಮಾಲೀಕರು ಸಮರ್ಪಕವಾಗಿ ನೋಡಿಕೊಳ್ಳದೆ, ಕನಿಷ್ಟ ವೇತನವನ್ನು ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆದಿವಾಸಿಗಳಿಂದ ನಗರದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಯಿತು.

ಕೊಡಗು ಜಿಲ್ಲಾ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಸುದರ್ಶನ ವೃತ್ತದಿಂದ ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆ ತೆರಳಿ ಕಾರ್ಮಿಕರಿಗೆ ಸೂಕ್ತ ಭದ್ರತೆ, ಕನಿಷ್ಟ ವೇತನ, ನಿವೇಶನ ಹಾಗೂ ಭೂಮಿಯ ಹಕ್ಕು ಕಲ್ಪಿಸುವಂತೆ ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಸಮಿತಿಯ ವೈ.ಕೆ. ಗಣೇಶ್,