ಮ್ಯಾನ್ ಹೋಲ್ ದುರಂತ : ಮೂವರ ಬಂಧನ

ಬೆಂಗಳೂರು, ಮಾ. 13: ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ವೇಳೆ ಮೂರು ಪೌರ ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೆÇಲೀಸರು ರಾಮ್ಕಿ ಸಂಸ್ಥೆಯ ಮೂವರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿಯ ಪೆÇಲೀಸ್ ಠಾಣೆ ಪೆÇಲೀಸರು, ಮ್ಯಾನ್ ಹೋಲ್ ನಿರ್ವಹಣೆ ಗುತ್ತಿಗೆ ಪಡೆದಿದ್ದ ರಾಮ್ಕಿ ಸಂಸ್ಥೆಯ ಉದ್ಯೋಗಿಗಳಾದ ಬಾಬುರೆಡ್ಡಿ, ಆಂಜನೇಯಲು ಮತ್ತು ಎನ್ ಟಿ ರೆಡ್ಡಿ ಎಂಬವರನ್ನು ಬಂಧಿಸಿದ್ದಾರೆ. ಅಂತೆಯೇ ಪ್ರಕರಣದ ತನಿಖೆ ಮುಂದುವರೆಸಿರುವ ಪೆÇಲೀಸರು ನಿರ್ಲಕ್ಷ್ಯತೆ ದೂರಿನಡಿಯಲ್ಲಿ ರಾಮ್ಕಿ ಸಂಸ್ಥೆಯ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಾ. 7ರ ಮಧ್ಯರಾತ್ರಿ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿನ ಮ್ಯಾನ್ ಹೋಲ್ ದುರಸ್ತಿ ಮಾಡಲು ಒಳಗೆ ಹೋಗಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಸರಿಯಾದ ಕ್ರಮ ಮತ್ತು ಪೌರ ಕಾರ್ಮಿಕರ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು. ಸಾರ್ವಜನಿಕರ ವಿರೋಧದ ಬಳಿಕ ಎಚ್ಚೆತ್ತಿದ್ದ ಸರ್ಕಾರ ಪ್ರಕರಣದ ತನಿಖೆಗೆ ಆದೇಶಿಸಿತ್ತು.

ಅರುಣ್ ಜೇಟ್ಲಿಗೆ ರಕ್ಷಣಾ ಖಾತೆ ಜವಾಬ್ದಾರಿ

ನವದೆಹಲಿ, ಮಾ. 13: ತೀವ್ರ ಕುತೂಹಲ ಕೆರಳಿಸಿದ್ದ ಗೋವಾ ವಿಧಾನಸಭೆ ಸರ್ಕಾರ ರಚನೆ ಕಸರತ್ತು ವಿವಾದ ಅಂತ್ಯವಾಗಿದ್ದು, ಮೈತ್ರಿ ಸರ್ಕಾರ ಮಾಡಲು ಬಿಜೆಪಿ ಮುಂದಾಗಿರುವಂತೆಯೇ ಪರಿಕರ್ ಅವರ ರಾಜಿನಾಮೆಯಿಂದ ತೆರವಾಗಿರುವ ಕೇಂದ್ರ ರಕ್ಷಣಾ ಸಚಿವಾಲಯದ ಜವಾಬ್ದಾರಿಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ನೀಡಲಾಗಿದೆ. ಪರಿಕರ್ ಅವರು ಇಂದು ಗೋವಾ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಇತರ ಮಿತ್ರ ಪಕ್ಷಗಳ ನೆರವಿನೊಂದಿಗೆ ಅವರು ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದೆ.

ಹಳೆಯ ನೋಟು ವಿನಿಮಯ: ನಾಲ್ವರ ಬಂಧನ

ಹೈದರಾಬಾದ್, ಮಾ. 13: ಹಳೆಯ 500 ಮತ್ತು 1000ದ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲು ಯತ್ನಿಸುತ್ತಿದ್ದ ನಾಲ್ವರನ್ನು ಪೆÇಲೀಸರು ಇಂದು ಬಂಧಿಸಿದ್ದಾರೆ. ನಾಲ್ವರ ಗುಂಪು 1.2 ಕೋಟಿ ಮೌಲ್ಯದ ಹಳೆಯ 500 ಮತ್ತು 1000ದ ನೋಟುಗಳನ್ನು ಹೊಸ ನೋಟುಗಳಿಗೆ ಪರಿವರ್ತಿಸಲು ತರುತ್ತಿರುವ ನಿಖರ ಮಾಹಿತಿ ಪಡೆದ ಪೆÇಲೀಸರು ಅವರನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆ ನಡೆಸಿದರು. ನಾಲ್ವರು ಆರೋಪಿಗಳು ಮತ್ತು ಅವರಿಂದ ವಶಪಡಿಸಿಕೊಳ್ಳಲಾದ 1.2 ಕೋಟಿ ರೂಪಾಯಿಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪೆÇಲೀಸರು ಹಸ್ತಾಂತರಿಸಿದ್ದಾರೆ.

ಕಾರು ಅಪಘಾತ : ಸೊರಕೆ ಆಸ್ಪತ್ರೆಗೆ ದಾಖಲು

ಪುತ್ತೂರು, ಮಾ. 13: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರಯಾಣಿಸುತ್ತಿದ್ದ ಕಾರು ಪುತ್ತೂರಿನ ಉರ್ಲಾಂಡಿ ಸಮೀಪ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಸೊರಕೆ ಅವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸೊರಕೆ ಅವರ ಕಾರು ಹಾಗೂ ಮಾರುತಿ ಒಮ್ನಿ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡು ವಾಹನಗಳು ತೀವ್ರ ಜಖಂಗೊಂಡಿದೆ.

ಉಳಿತಾಯ ಖಾತೆ ವಿತ್ ಡ್ರಾ ಮಿತಿ ಮುಕ್ತಾಯ

ಮುಂಬೈ, ಮಾ. 13: ಹಳೆಯ 500 ಮತ್ತು 1000ದ ನೋಟುಗಳ ಅನಾಣ್ಯೀಕರಣದ ನಂತರ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗಳಲ್ಲಿರುವ ಹಣವನ್ನು ವಿತ್ ಡ್ರಾ ಮಾಡುವದರ ಮೇಲೆ ಹೇರಲಾಗಿದ್ದ ಎಲ್ಲಾ ಮಿತಿಗಳು ಇಂದಿಗೆ ಮುಕ್ತಾಯವಾಗಿದೆ. ಉಳಿತಾಯ ಖಾತೆಗಳಲ್ಲಿರುವ ನಗದನ್ನು ವಿತ್ ಡ್ರಾ ಮಾಡಲು ಆರ್ ಬಿಐ ಕೆಲವು ಷರತ್ತುಗಳನ್ನು ಹೇರಿತ್ತು. ಎರಡು ಹಂತಗಳ ಪ್ರಕ್ರಿಯೆ ಮೂಲಕ ಪ್ರತಿ ಖಾತೆಯಲ್ಲಿನ ವಾರದ ವಿತ್ ಡ್ರಾ ಮಿತಿಯನ್ನು 24,000ಗಳಿಂದ 50,000ಕ್ಕೆ ಫೆಬ್ರವರಿ 20ರಂದು ಹೆಚ್ಚಿಸಲಾಗಿತ್ತು. ಎರಡನೇ ಹಂತವಾಗಿ ಇಂದಿನಿಂದ ಎಟಿಎಂ ವಿತ್ ಡ್ರಾ ಮಿತಿಯನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.

ಭೂಕುಸಿತ: ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್

ಶ್ರೀನಗರ, ಮಾ. 13: ಜಮ್ಮು ಕಾಶ್ಮೀರದಲ್ಲಿ ಇಂದು ಮತ್ತೆ ಭೂ ಕುಸಿತ ಉಂಟಾಗಿರುವ ಪರಿಣಾಮ ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು ಸುಮಾರು 300 ಕಿಮೀ ಬಂದ್ ಆಗಿದೆ. ಭಾರತದ ಎಲ್ಲಾ ನಗರಗಳಿಗೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಕಳೆದ ನಾಲ್ಕು ದಿನಗಳಿಂದ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು, ನಿನ್ನೆಯಷ್ಟೇ ಏಕ ಮುಖ ಸಂಚಾರಕ್ಕೆ ತೆರವುಗೊಳಿಸಲಾಗಿತ್ತು. ಮತ್ತೆ ಇಂದು ಭೂ ಕುಸಿತ ಉಂಟಾಗಿರುವದರಿಂದ ರಸ್ತೆಯನ್ನು ಕ್ಲೋಸ್ ಮಾಡಲಾಗಿದೆ ಎಂದು ಸಂಚಾರ ಇಲಾಖೆ ತಿಳಿಸಿದೆ. ಪಂಥಿಯಾಲ್ ರಸ್ತೆ ಭೂ ಕುಸಿತದಿಂದ ಹಾನಿಗೊಳಗಾಗಿದೆ. ಹೀಗಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.