ಗೋಣಿಕೊಪ್ಪಲು, ಮಾ. 13: ಕಾನೂರುವಿನಲ್ಲಿ ತಾ.12 ರಂದು ರಾತ್ರಿ ಇಬ್ಬರು ವರ್ತಕರ ಮೇಲೆ ಹಲ್ಲೆ ನಡೆದಿದ್ದು ಕುಟ್ಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಭೀರ ಗಾಯಗಳಾಗಿರುವ ಯುವಕ ಕುಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಾನೂರುವಿನ ಎಂ.ಎಸ್.ಗಣೇಶ್ ಎಂಬವರಿಗೆ ಸೇರಿದ ಅಂಗಡಿ ಮಳಿಗೆಯಲ್ಲಿ ಯುವಕರಿಬ್ಬರು ಕಳೆದ ಹಲವು ವರ್ಷಗಳಿಂದ ತರಕಾರಿ ಹಾಗೂ ದಿನಸಿ ಚಿಲ್ಲರೆ ವ್ಯಾಪಾರ ನಡೆಸುತ್ತಾ ಬಂದಿದ್ದು, ಅದೇ ಗ್ರಾಮದ ಮತ್ತಿಬ್ಬರು ವ್ಯಕ್ತಿಗಳು ಕ್ಷುಲ್ಲಕ ನೆಪವೊಡ್ಡಿ ರಾತ್ರಿ 9 ಗಂಟೆ ಸುಮಾರಿಗೆ ಹಲ್ಲೆ ಮಾಡಿರುವದಾಗಿ ಪೆÇಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಕಾನೂರು ಗ್ರಾ.ಪಂ. ವರ್ತಕರ ಲೈಸೆನ್ಸ್ ಹೊಂದಿರುವ ಇಸ್ಮಾಯಿಲ್ (24) ಹಾಗೂ ಆರೀಫ್ (27) ಹಲ್ಲೆಗೊಳಗಾದ ವ್ಯಕ್ತಿಗಳಾಗಿದ್ದು ಕಾನೂರಿನ ಎಸ್.ಎಂ.ಕಿರಣ್ ಮತ್ತು ಇತರೆ ವ್ಯಕ್ತಿಯ ವಿರುದ್ಧ ಕುಟ್ಟ ಠಾಣೆಯಲ್ಲಿ ಸೆ. 323, ಸೆ. 324ರ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವದಾಗಿ ಕುಟ್ಟ ಪೆÇಲೀಸ್ ವೃತ್ತ ನಿರೀಕ್ಷಕ ದಿವಾಕರ್ ತಿಳಿಸಿದ್ದಾರೆ.

ಆರೋಪಿಗಳು ದಿನಸಿ ಅಂಗಡಿ ವಿಚಾರವಾಗಿ ವ್ಯಾಜ್ಯ ತೆಗೆದು ವರ್ತಕ ಇಸ್ಮಾಯಿಲ್‍ನ ತಲೆ, ಎದೆ, ಮಂಡಿಗೆ ಹಲ್ಲೆ ಮಾಡಿದ್ದು, ಕುಟ್ಟ ಆಸ್ಪತ್ರೆ ವೈದ್ಯ ಡಾ. ಅರ್ಜುನ್ ಚಿಕಿತ್ಸೆ ನೀಡುತ್ತಿದ್ದಾರೆ.