ಮಡಿಕೇರಿ, ಮಾ. 13: ಬದಲಾವಣೆ ನಮ್ಮೊಳಗೆಯೇ ಆರಂಭವಾಗದೆ ನಮ್ಮ ನಗರÀಸಭೆಯಿಂzಲೇ ಎಲ್ಲ ಆಗಬೇಕೆಂಬ ನಮ್ಮೆಲ್ಲರ ವಿಚಾರ ಶೂನ್ಯವೆನಿಸುತ್ತದೆ. ನಗರ ಸಭೆ ಎಲ್ಲಾ ರೀತಿಯಲ್ಲಿ ಮಡಿಕೇರಿಯನ್ನು ಕಸರಹಿತ ನಗರವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಯಾದರೂ, ಜನರ ಸಹಕಾರವಿಲ್ಲದೆ, ಕೈ ಜೋಡಿಸದೆ ಆ ಉದ್ದೇಶ ವಿಫಲವಾಗುತ್ತಿದೆ. ಇದಕ್ಕೆ ಒಂದು ಸ್ಪಷ್ಟ ನಿದರ್ಶನ ಈ ಚಿತ್ರದಲ್ಲಿರುವ ಕಸ ತುಂಬಿದ ಆಟದ ಮೈದಾನ.

ಹೆಚ್ಚಾಗಿ ಶಾಲೆಯ ಮಕ್ಕಳು ಬಳಸುವ ಈ ಆಟದ ಮೈದಾನದ ಸುತ್ತಳತೆಯನ್ನು ಚಿಪ್‍ಸ್‍ನ, ಚಾಕಲೇಟಿನ ಪ್ಯಾಕೆಟ್‍ಗಳು ಗುರುತಿಸುತ್ತವೆ. ಮಕ್ಕಳು ಮುಂದಿನ ಪ್ರಜೆಗಳು ಎಂದು ಕಲಿಸುವ ಶಾಲೆಗಳು, ಅವರಲ್ಲಿ ಮೂಡಬೇಕಾದ, ನಗರ ಹಾಗು ದೇಶದತ್ತ ಇರುವ ಜವಾಬ್ದಾರಿಗಳನ್ನು ಶಾಲೆಗಳಲ್ಲಿ ಕಲಿಸುವದು ಅತ್ಯಗತ್ಯ. ಗಿಡವಾಗಿ ಬಗ್ಗದ್ದು ಮರವಾಗಿ ಬೆಳೆÀದ ಮೇಲೆ ಬಗ್ಗೀತೇ? ನಗರದ ಸ್ವಚ್ಛತೆ ಕಾಪಾಡುವದು ನಗರ ಸಭೆಯಷ್ಟೇ ಅಲ್ಲ, ನಮ್ಮೆಲ್ಲರ ಜವಾಬ್ದಾರಿ ಕೂಡ ಎಂದು ತಿಳಿದು ಅಜೈವಿಕ ಕಸಗಳನ್ನು ರೋಡಿನ ಬದಿಯಲ್ಲಿ, ಅಥವ ಸಾರ್ವಜನಿಕ ವಲಯಗಳಲ್ಲಿ ತ್ಯಜಿಸುವದನ್ನು ಇಂದೇ ನಿಲ್ಲಿಸಿ ನಮ್ಮ ಸುಂದರ ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಮುಂದಾಗೋಣ. ಶಾಲೆಗಳಲ್ಲಿಯೂ ಕೂಡ ಈ ವಿಚಾರವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪಠ್ಯ ಪುಸ್ತಕದ ಓದಿಗಿಂತಲು ಮುಖ್ಯವಾದುದು ಎಂದು ಶಿಕ್ಷಕರು ತಿಳಿದು, ಈ ದಿಸೆಯಲ್ಲಿ ಮಕ್ಕಳ ಮನೋಭಾವವನ್ನು ಪರಿವರ್ತಿಸುವದು ಅತ್ಯಗತ್ಯವಾಗಿದೆ.

-Pಜಿಆರ್