ಸೋಮವಾರಪೇಟೆ, ಮಾ. 13 : ಇಲ್ಲಿನ ಜೇಸಿ ಸಂಸ್ಥೆಯ ಜೇಸೀರೇಟ್ಸ್ ವತಿಯಿಂದ ಸ್ಥಳೀಯ ಮಹಿಳಾ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಐವರು ಮಹಿಳೆಯರಿಗೆ ಪಂಚಮಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪದವಿಪೂರ್ವ ಕಾಲೇಜಿನ ಪ್ರಬಾರ ಪ್ರಾಂಶುಪಾಲರಾದ ತಿಲೋತ್ತಮೆ ಮಾತನಾಡಿದರು. ಕ್ರೀಡಾ ಕ್ಷೇತ್ರದಿಂದ ಶಾಂತವೇರಿ ಗ್ರಾಮದ ದೇವರಾಜಮ್ಮ, ಶಿಕ್ಷಣ ಕ್ಷೇತ್ರದಿಂದ ಹಾನಗಲ್ಲು ಗ್ರಾಮದ ನಿವೃತ್ತ ಶಿಕ್ಷಕಿ ತಂಗಮ್ಮ, ಸಮಾಜ ಸೇವೆಯಲ್ಲಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಾದ ಕಾಳಮ್ಮ, ಕೃಷಿ ಕ್ಷೇತ್ರದಲ್ಲಿ ಕುಸುಬೂರು ಗ್ರಾಮದ ಚಂದ್ರಿಕಾ ಕುಮಾರ್ ಹಾಗೂ ಯಶಸ್ವಿ ಉದ್ಯಮಿ ಕುಸುಬೂರು ಗ್ರಾಮದ ಶಕುಂತಲಾ ರವರು ಪ್ರಶಸ್ತಿಗೆ ಭಾಜನರಾದರು. ದಿನಾಚಣೆ ಪ್ರಯುಕ್ತ ಬೆಳಿಗ್ಗೆ ಅಂಗನವಾಡಿ ಸಿಬ್ಬಂದಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ಪಲಿತ ಪ್ರಥಮ ಬಹುಮಾನ ಪಡೆದರು. ಅಶ್ವಿನಿ ದ್ವಿತೀಯ ಹಾಗೂ ಸವಿತಾ ತೃತೀಯ ಬಹುಮಾನ ಪಡೆದರು. ಇಟ್ಟಿಗೆ ಮೇಲೆ ಗಂಟೆ ಹಿಡಿದು ನಡೆಯುವ ಸ್ಪರ್ಧೆಯಲ್ಲಿ ಬೆಳ್ಯಮ್ಮ ಪ್ರಥಮ, ಜನಿಫರ್ ತಾರಾ ಲೋಬೋ ದ್ವಿತೀಯ ಹಾಗೂ ವನಜ ತೃತೀಯ ಬಹುಮಾನ ಪಡೆದರು. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಇಂದ್ರಾಣಿ ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ಬಹುಮಾನವನ್ನು ಕುಸುಮ ಮತ್ತು ತೃತೀಯ ಬಹುಮಾನವನ್ನು ಪೂರ್ಣಿಮಾ ಕುಮಾರಿ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಮಹಿಳಾ ಘಟಕದ ಅಧ್ಯಕ್ಷೆ ಮೀನಾ ಮಂಜುನಾಥ್ ವಹಿಸಿದ್ದರು. ವೇದಿಕೆಯಲ್ಲಿ ಜೇಸಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಮನೋಹರ್, ಜೇಸಿ ವಲಯಾಧಿಕಾರಿ ಕೆ.ಜೆ. ಗಿರೀಶ್, ಕಾರ್ಯದರ್ಶಿ ಉಷಾ ಪ್ರಕಾಶ್, ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್ ಉಪಸ್ಥಿತರಿದ್ದರು.