ವೀರಾಜಪೇಟೆ, ಮಾ. 14: ನಿನ್ನೆ ಸಂಜೆ ಇಲ್ಲಿನ ಚೆಂಬೆಬೆಳ್ಳೂರು ರಸ್ತೆಯ ಕಾವೇರಿ ಶಾಲೆಯ ಬಳಿ ಸಂಭವಿಸಿದ ಪಿಕ್ ಅಪ್ ಜೀಪ್ ನ ಅಪಘಾತದಲ್ಲಿ ತಲೆಮರೆಸಿಕೊಂಡಿದ್ದ ಜೀಪ್ನ ಚಾಲಕ ಬೋಪಣ್ಣ ಎಂಬಾತನನ್ನು ನಗರ ಪೊಲೀಸರು ಇಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಅಪಘಾತದಿಂದ ಸುಮಾರು 22ಮಂದಿಗೆ ಗಾಯಗಳಾಗಿದ್ದು ಮಡಿಕೇರಿ ಹಾಗೂ ಮಂಗಳೂರು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಗಂಭೀರ ಸ್ವರೂಪದ ಗಾಯಗೊಂಡಿರುವ 8 ಮಂದಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದು, ತೋಟದ ಮಾಲೀಕರು ನಿನ್ನೆ ರಾತ್ರಿಯೇ ಮಂಗಳೂರು ಆಸ್ಪತ್ರೆಗೆ ತೆರಳಿದ್ದು, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.