ಮಡಿಕೇರಿ, ಮಾ. 15: ತಂಜಾವೂರಿನ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ಹಾಗೂ ಮಡಿಕೇರಿ ಆಕಾಶವಾಣಿ ವತಿಯಿಂದ ರಾಷ್ಟ್ರೀಯ ಬುಡಕಟ್ಟು ಸಮುದಾಯಗಳ ಹಾಡು ಮತ್ತು ನೃತ್ಯದ ಸಮ್ಮಿಲನ ‘ಕಾಡಿನ ಮಕ್ಕಳ ಹಬ್ಬವು ತಾ. 17 ರಿಂದ 19ರ ವರೆÀಗೆ ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು
ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆಸಲಾದ ಕಾಡಿನ ಮಕ್ಕಳ ಹಬ್ಬ ಈ ಬಾರಿ ಕೂಡ ವಿಭಿನ್ನತೆಯೊಂದಿಗೆ ಆಕರ್ಷಿಸಲಿದೆ. ಕಾಡುಗಳ ಒಡಲಲ್ಲಿ ಬುಡಕಟ್ಟು ಜನಾಂಗಗಳು ತಮ್ಮ ಅಮೂಲ್ಯ ಸಾಂಸ್ಕøತಿಕ ಸೊಬಗನ್ನು ಉಳಿಸಿ ಬೆಳೆÉಸಿಕೊಂಡು ಬರುತ್ತಿವೆ. ಬುಡಕಟ್ಟು ಜನಾಂಗಗಳು ತಮ್ಮ ವೈವಿಧ್ಯಮಯ ಕಲಾ ಪ್ರಾಕಾರಗಳಿಂದಲೆ ತಮ್ಮ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಕೊಡಗಿನ ಮೂಲ ನಿವಾಸಿಗಳಾದ ಕೊಡವ, ಕುಡಿಯ, ಕೆಂಬಟ್ಟಿ, ಮೇದ ಸೇರಿದಂತೆ ಇತರ ಜನಾಂಗಗಳು ಜನಪದ ಶ್ರೀಮಂತಿಕೆಯ ಪ್ರತೀಕವಾಗಿವೆ ಎಂದು ರಾಘವೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.