ಸೋಮವಾರಪೇಟೆ, ಮಾ. 14: ಬುದ್ಧ ಹಾಗೂ ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ನಿರಂಜನ ವಾನಳ್ಳಿ ಹೇಳಿದರು.

ಇಲ್ಲಿನ ವಕ್ಕಲಿಗರ ಸಮಾಜದಲ್ಲಿ ಆಯೋಜಿಸಿದ್ದ ಲಯನ್ಸ್ ಸಂಸ್ಥೆಯ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು. ವಾಮ ಮಾರ್ಗದಿಂದ ಗಳಿಸುವ ಹತ್ತು ಪೈಸೆಗಿಂತ ಶ್ರಮಪಟ್ಟು ಗಳಿಸಿದ ಐದು ಪೈಸೆ ಶ್ರೇಷ್ಠವಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ದುಡಿಮೆಯಿಂದ ಗೌರವಯುತವಾದ ಬದುಕು ಸಾಗಿಸಲು ಮುಂದಾಗಬೇಕು. ಹಿಂದೆ ಗುರು-ಹಿರಿಯರನ್ನು ಭಕ್ತಿ ಪೂರ್ವಕವಾಗಿ ಕಾಣಲಾಗುತ್ತಿತ್ತು. ಆದರೆ ಇಂದು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಅಮಾನವೀಯವಾಗಿ ನಡೆದು ಕೊಳ್ಳುತ್ತಿರುವದು ದುರಂತ ಎಂದರು.

ಪ್ರಾಂತೀಯ ಅಧ್ಯಕ್ಷ ಎಸ್.ಬಿ. ಲೀಲಾರಾಂ ಮಾತನಾಡಿ, ಜೀವನದಲ್ಲಿ ಬದುಕುವ ಕಲೆ ಹಾಗೂ ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳಲು ಲಯನ್ಸ್ ಸಂಸ್ಥೆ ಸಹಕಾರಿಯಾಗಿದೆ ಎಂದರು. ವೇದಿಕೆಯಲ್ಲಿ ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಎ.ಆರ್. ಮುತ್ತಣ್ಣ, ಕಾರ್ಯದರ್ಶಿ ಜೆ.ಸಿ. ಶೇಖರ್, ಖಜಾಂಚಿ ಜಗದೀಶ್, ವಲಯಾಧ್ಯಕ್ಷರಾದ ಸಿ.ಕೆ. ರಕ್ಷಿತ್, ಪಿ. ಧನು ಉತ್ತಯ್ಯ, ಪಿ.ಎಂ. ಅಪ್ಪಣ್ಣ, ಮುಖ್ಯಸಲಹೆಗಾರರಾದ ಯಮುನಾ ಚಂಗಪ್ಪ, ಲಯನ್ಸ್ ಜಿಲ್ಲಾ ರಾಜ್ಯಪಾಲ ಅರುಣ್‍ಶೆಟ್ಟಿ, ಸೋಮವಾರಪೇಟೆ ಲಯನ್ಸ್ ಅಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಮಂಜುನಾಥ್ ಚೌಟ ಹಾಗೂ ವಿವಿಧ ಜಿಲ್ಲೆಗಳ ಲಯನ್ಸ್ ಸಂಸ್ಥೆಯಿಂದ ಆಗಮಿಸಿದ್ದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.