ಮಡಿಕೇರಿ, ಮಾ. 15: ವೀರಾಜಪೇಟೆಯ ಮಲೆತಿರಿಕೆ ದೇವಾಲಯ ಪಟ್ಟಣದಿಂದ 3 ಕಿ.ಲೋ. ಮೀಟರ್ ದೂರದಲ್ಲಿದೆ. ಇದು ಸುಮಾರು 3000 ಅಡಿಗಳ ಎತ್ತರದ ಬೆಟ್ಟದಲ್ಲಿದೆ. ಮಲೆತಿರಿಕೆ ಎಂದರೆ ಕಾಡಿನ ಮಧ್ಯೆ ಇರುವ ದೇವಾಲಯ. ಏಳು ಎಕರೆ ಕಾಡುಗಳÀ ಮಧ್ಯೆ ನೆಲೆ ನಿಂತಿದೆ.

ಸುಮಾರು 600 ವರ್ಷಗಳ ಇತಿಹಾಸ ಇರುವ ಈಶ್ವರ ದೇವಾಲಯ ಇದಾಗಿದ್ದು, ಇದರ ಬಗ್ಗೆ ಲಿಖಿತ ಉಲ್ಲೇಖಗಳು ಮಾತ್ರ ಇವೆ. ಪೂರ್ವಜರ ಕಾಲದಿಂದಲೂ ಪೂಜಿಸುತ್ತಾ ಬಂದಿದ್ದು, ಹಿರಿಯರ ಪ್ರಕಾರ 600 ವರ್ಷಗಳ ಹಿಂದೆ ಹರಿಜನರ ಕುಟುಂಬದವರು ಸೌದೆಗೆಂದು ಕಾಡಿಗೆ ತೆರಳಿದರು. ಸೌದೆಯನ್ನು ಕಡಿದು ಕಟ್ಟಲೆಂದು ಬಳ್ಳಿಯನ್ನು ಕಡಿಯುವಾಗ ಅದರಲ್ಲಿ ರಕ್ತ ರೂಪದ ಹಾಲು ಬಂದಿತು. ಇದನ್ನು ನೋಡಿದ ಹರಿಜನರು ಊರಿಗೆ ಬಂದು ಕುಪ್ಪಚಿರ ಹಾಗೂ ಕುಂದಿರ ಕೊಡವ ಕುಟುಂಬಗಳಿಗೆ ತಿಳಿಸುತ್ತಾರೆ. ನಂತರ ಎಲ್ಲರೂ ಹೋಗಿ ನೋಡಿದಾಗ ಆ ಸಮಯದಲ್ಲಿ ಬಳ್ಳಿಯನ್ನು ಕಡಿದ ಹರಿಜನÀ ವ್ಯಕ್ತಿಗೆ ದೇವರು ಮೈ ಮೇಲೆ ಪ್ರವೇಶಿಸಿ ಈ ಹಿಂದೆ ಇಲ್ಲಿ ಈಶ್ವರನ ದೇವಾಲಯ ಇತ್ತು. ಇನ್ನು ಮುಂದೆ ನಾನು ಇಲ್ಲೇ ನೆಲೆಸುತ್ತೇನೆ ಎಂದು ತಿಳಿಸುತ್ತಾರೆ. ನಂತರ ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುತ್ತಾರೆ.

ಈ ದೇವಾಲಯ ಏಳು ಗ್ರಾಮಗಳಿಗೆ ಸಂಬಂಧಪಟ್ಟ ದೇವಾಲಯವಾಗಿದ್ದು, ಇಲ್ಲಿ ತಾ. 15 ರಿಂದ 21 ರವರೆಗೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರತಿ ದಿವಸ ಅನ್ನದಾನವನ್ನೂ ಮಾಡಲಾಗುತ್ತದೆ. ನಾಲ್ಕನೇ ದಿವಸ ವೀರಾಜಪೇಟೆಯ ಗೌರಿ ದೇವಾಲಯ ಹಾಗೂ ಇನ್ನೂ ಎರಡು ಸ್ಥಾನಗಳಿಗೆ ಪ್ರವೇಶಿಸುತ್ತಾರೆ. ತಡುಂಬು ತೆಗೆದುಕೊಂಡು ದೇವಾಲಯದ ಉಪ ಸ್ಥಾನಗಳಿರುವ ವೀರಾಜಪೇಟೆಯಲ್ಲಿನ ಸ್ಥಾನಗಳಿಗೆ ಪ್ರವೇಶಿಸಿ ಪೂಜೆ ಸಲ್ಲಿಸಿ ಹಿಂತಿರುಗಿ ಐಮಂಗಲದ ಮೂಲಕ ಚಂಬೆಬೆಳ್ಳೂರು ಗ್ರಾಮಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ.

ಇಂದು ದೇವತಕ್ಕರಾಗಿ ಸುಮಂತ್ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ವiಹಾಶಿವರಾತ್ರಿಯಂದು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ, ದೀಪೋತ್ಸವವÀನ್ನು ನಡೆಸುತ್ತಾರೆ. ದೇವಾಲಯದ ಹಿಂದಿನ ಭಾಗದಲ್ಲಿ ಸರ್ಪದ ಸ್ಥಾನವಿದ್ದು, ಇದನ್ನು ಮಕ್ಕಟಯ್ಯಪ್ಪ ಎಂಬ ಮೂಲ ಹೆಸರಿನಿಂದ ಕರೆಯುತ್ತಾರೆ. ಈ ಸ್ಥಾನದ ಮುಂದೆಯೇ ಹರಿಜನರು ದೇವರು ನಿಲ್ಲುತ್ತಾರೆ. ಹಬ್ಬದ ಸಮಯದಲ್ಲಿ ಹರಿಜನರು ಏಳು ದಿವಸಗಳ ಕಾಲ ಇಲ್ಲಿಯೇ ನೆಲೆಸಿ ಪೂಜೆ ನಡೆಸುತ್ತಾರೆ. ದೇವಾಲಯದ ಎಡ ಭಾಗದಲ್ಲಿ ಬ್ರಹ್ಮ ದೇವರು ನೆಲೆಸಿದ್ದಾರೆ.

ಪ್ರಸ್ತುತ ದೇವಾಲಯದ ಪೂಜೆಯನ್ನು ಪೂಜಾರಿ ಮೋಹನ್ ನೆರವೇರಿಸುತ್ತಿದ್ದಾರೆ. ಇವರು ಮೂರನೆಯ ತಲೆಮಾರಿನವರಾಗಿದ್ದು, ಇವರಿಗಿಂತ ಮೊದಲು ಎರಡು ತಲೆಮಾರಿನವರು ಪೂಜೆ ಸಲ್ಲಿಸಿದ್ದರೆಂಬ ಹೇಳಿಕೆ ಲಭ್ಯವಾಗಿದೆ.

- ಪ್ರಶಾಂತ್ ಮೊಣ್ಣಪ್ಪ