ಗೋಣಿಕೊಪ್ಪಲು, ಮಾ. 15: ಅಕ್ರಮವಾಗಿ ಲಾಟರಿ ಟಿಕೆಟ್ ಮಾರಾಟ ಅರೋಪದಡಿ ಪೊನ್ನಂಪೇಟೆಯಲ್ಲಿ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ನಗದು ಹಾಗೂ ಲಾಟರಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ರಾಜಾ ಅವರಿಂದ 150 ಲಾಟರಿ ಟಿಕೆಟ್ ಹಾಗೂ 2520 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಉಪ ನಿರೀಕ್ಷಕ ಜಯರಾಮ್ ಹಾಗೂ ಸಿಬ್ಬಂದಿ ಇದ್ದರು.