ನಾಪೆÇೀಕ್ಲು, ಮಾ. 14: ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್, ನಾಪೆÇೀಕ್ಲು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಇಂಟರ್ಯಾಕ್ಟ್ ಕ್ಲಬ್, ನಾಪೆÇೀಕ್ಲು ಗ್ರಾಮ ಪಂಚಾಯಿತಿ, ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ನಾಪೆÇೀಕ್ಲು ವರ್ತಕರ ಸಂಘ, ಶ್ರೀರಾಮ ಟ್ರಸ್ಟ್ ಮತ್ತು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಜೂನಿಯರ್ ಕಾಲೇಜು ನಾಪೆÇೀಕ್ಲು ಮತ್ತು ಮುಳಿಯ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಜನ ಜಾಗೃತಿ ಜಾಥಾ ಮತ್ತು ಸ್ತಬ್ಧ ಚಿತ್ರ ಮೆರವಣಿಗೆ ನಡೆಯಿತು

ಈ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿ, ನಮ್ಮ ಗ್ರಾಮ, ಪಟ್ಟಣ, ದೇಶ ಸ್ವಚ್ಚವಾಗಬೇಕಾದರೆ ನಮ್ಮ ಮನೆ ಮತ್ತು ಪರಿಸರವನ್ನು ಮೊದಲು ಸ್ವಚ್ಚವಾಗಿರಿಸಿಕೊಳ್ಳಬೇಕು. ಅದಕ್ಕಾಗಿ ಮನೆಯಿಂದಲೇ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ.

ಮೊದಲ ಹಂತವಾಗಿ ನಾಪೋಕ್ಲು ಗ್ರಾಮ ಪಂಚಾಯಿತಿಯ ಎಲ್ಲಾ ವಾರ್ಡ್‍ಗಳಿಗೆ ಪ್ರತ್ಯೇಕವಾದ ಸ್ವಚ್ಛತಾ ಸಮಿತಿ ರಚಿಸಲಾಗಿದೆÉ. ಮನೆಯಲ್ಲಿನ ಕಸವನ್ನು ಹಸಿ, ಒಣ ಮತ್ತು ವಿಷಕಾರಿ ಕಸ ಎಂದು ವಿಂಗಡಿಸಬೇಕು. ಕಾವೇರಿ ನದಿ ತೀರವನ್ನು ತ್ಯಾಜ್ಯ, ಕಸ ಮುಕ್ತ ಮಾಡುವ ಮೂಲಕ ಮುನ್ನಡೆಯಬೇಕು ಎಂದರು.

ನೂತನವಾಗಿ ಸ್ವಚ್ಛತಾ ಸಮಿತಿಯನ್ನು ರಚಿಸಲಾಯಿತು. ಬೇತು 1ನೇ ವಾರ್ಡಿಗೆ: ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಕಾಳೇಯಂಡ ತಿಮ್ಮಯ್ಯ, ಚೋಕಿರ ರೋಷನ್, ಸ್ಮೀತಾ, ಲವಿನ್. ಬೇತು 2ನೇ ವಾರ್ಡಿಗೆ ಗ್ರಾಮ ಪಂಚಾಯತಿ ಸದಸ್ಯ ಕುಶು ಕುಶಾಲಪ್ಪ, ವನಜಾಕ್ಷಿ, ಬಿ.ಎಂ.ಶರೀನಾ, ಸಂದೀಪ್,

ನಾಪೆÇೀಕ್ಲು 1ನೇ ವಾರ್ಡಿಗೆ: ಅಬ್ದುಲ್ ಅಜೀಜ್, ಶಹನಾಜ್, ಮಹಮ್ಮದ್ ಖುರೇಶಿ, ರಷೀದ್, ಸತೀಶ್ ಸೋಮಣ್ಣ, 2ನೇ ವಾರ್ಡಿಗೆ ಪಿ.ಸಿ. ಅಕ್ಕಮ್ಮ, ಟಿ.ಎ. ಮಹಮ್ಮದ್, ಕುಲ್ಲೇಟಿರ ಜ್ಯೋತಿ, ಕುಲ್ಲೇಟಿರ ಅಜಿತ್ ನಾಣಯ್ಯ, ಚಂದ್ರಕಲಾ. 3 ನೇ ವಾರ್ಡ್‍ಗೆ ಸಿ.ಎ. ಮುತ್ತುರಾಣಿ, ಎಸ್.ಎ. ಜಗದೀಶ್, ಟಿ.ಕೆ. ಸುಶೀಲ, ಅನಿತಾ ಮುರಳಿ, ಅಜೀತ್ ನಾಣಯ್ಯ. ಕೊಳಕೇರಿ 1ನೇ ವಾರ್ಡಿಗೆ ಟಿ. ಹೆಚ್. ಮಹಮ್ಮದ್ ಹಸೈನಾರ್, ಎಂ.ಎಂ. ಆಮೀನಾ, ಟಿ.ಆರ್, ಮೋಹಿನಿ, ಎ.ಕೆ. ಹ್ಯಾರಿಸ್, ಮಹೇಶ್, ಕೊಳಕೇರಿ 2ನೇ ವಾರ್ಡ್‍ಗೆ ಪಿ.ಬಿ. ಪದ್ಮಿನಿ, ಪುಷ್ಪ ಕೃಷ್ಣಪ್ಪ, ಬೊಟ್ಟೋಳಂಡ ಚಿತ್ರಾ ಅವರನ್ನು ಆಯ್ಕೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ. ಕೃಷ್ಣವೇಣಿ ಪ್ರಸಾದ್ ಮುಳಿಯ, ಪಿ.ಡಿ.ಓ. ಕೇಶವ, ಶಿಕ್ಷಕಿಯರಾದ ಸುಬ್ಬಮ್ಮ, ಮಮತ, ಸರಿತಾ, ಸ್ಮಿತಾ, ಶೋಭಾ, ಮಮತ, ಮತ್ತಿತರರು ಇದ್ದರು.