ಮಡಿಕೇರಿ, ಮಾ. 15: ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ಫೀಲ್ಡ್, ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ವತಿಯಿಂದ ಅಂತರ್ ಕಾಲೆÉೀಜು ಮಟ್ಟದ ಪೂವಯ್ಯ, ಸಂಕೇತ್ ಹಾಗೂ ವಿವೇಕ್ ಸ್ಮರಣಾರ್ಥ ಪುರುಷರ ಹಾಕಿ ಮತ್ತು ಫುಟ್ಬಾಲ್ ಪಂದ್ಯಾವಳಿಗೆ ಕಾಲೆÉೀಜು ಮೈದಾನದಲ್ಲಿ ಚಾಲನೆ ನೀಡಲಾಯಿತು.
ಮೂಡಾ ಅಧ್ಯಕ್ಷ ಎ.ಸಿ. ದೇವಯ್ಯ ವಿದ್ಯಾರ್ಥಿಗಳ ಸ್ಮರಣಾರ್ಥ ಶ್ವೇತವರ್ಣದ ಮೂರು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಅಪಘಾತದಲ್ಲಿ ದುರ್ಮರಣಕ್ಕೀಡಾದ ಮೂವರು ವಿದ್ಯಾರ್ಥಿಗಳಾದ ಪೂವಯ್ಯ, ಸಂಕೇತ್ ಹಾಗೂ ವಿವೇಕ್ ಅವರ ಅಕಾಲಿಕ ಮರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡಾ ಸ್ಫೂರ್ತಿಯನ್ನು ಕೂಡ ಮೆರೆಯಬೇಕೆಂದು ಕರೆ ನೀಡಿದರು. ಕ್ರೀಡಾ ಕ್ಷೇತ್ರಕ್ಕೆ ಕೊಡಗಿನ ಮತ್ತಷ್ಟು ಪ್ರತಿಭೆÉಗಳು ಸೇರ್ಪಡೆಗೊಳ್ಳಬೇಕೆಂದರು.
ದೈಹಿಕ ಶಿಕ್ಷಣ ಸಂಯೋಜಕ ಸುರೇಶ್, ಉಪನ್ಯಾಸಕರಾದ ಡಾ. ಶ್ರೀಧರ್ ಹೆಗಡೆ, ಅಪಘಾತದಲ್ಲಿ ಅಸುನೀಗಿದ ಮೂವರು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆಯಲಿರುವ ಹಾಕಿ ಹಾಗೂ ಫÀÅಟ್ಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.