ಸೋಮವಾರಪೇಟೆ, ಮಾ. 14: ಇಲ್ಲಿಗೆ ಸಮೀಪದ ಕಿಬ್ಬೆಟ್ಟ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು, ವಾರಸುದಾರರ ಪತ್ತೆಗಾಗಿ ಪೊಲೀಸ್ ಇಲಾಖೆ ಮನವಿ ಮಾಡಿದೆ. ಪಟ್ಟಣದಿಂದ ಶನಿವಾರಸಂತೆಗೆ ತೆರಳುವ ರಾಜ್ಯ ಹೆದ್ದಾರಿಯಿಂದ ಕಿಬ್ಬೆಟ್ಟ ಗ್ರಾಮದೆಡೆಗೆ ಸಾಗುವ ಮಾರ್ಗದ ಬದಿಯಲ್ಲಿ ಅನಾಥ ಶವವೊಂದು ಮಂಗಳವಾರ ಅಪರಾಹ್ನ ಪತ್ತೆಯಾಗಿದೆ. ಸುಮಾರು 45 ರಿಂದ 50 ವರ್ಷವಿರಬಹುದಾಗಿದೆ. ಮೃತ ಮಾಸಲು ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಯಾವದೋ ಖಾಯಿಲೆಯಿಂದ ಬಳಲಿ ಮೃತಪಟ್ಟಿರಬಹುದಾಗಿದೆ ಎಂದು ಸಂಶಯಿಸಲಾಗಿದೆ. ಮೃತ ದೇಹವನ್ನು ಇಲ್ಲಿನ ಶವಾಗಾರದಲ್ಲಿರಿಸಲಾಗಿದ್ದು, ಮೃತರ ವಾರಸುದಾರರಿದ್ದಲ್ಲಿ ಸೋಮವಾರಪೇಟೆಯ ಪೊಲೀಸ್ ಠಾಣೆ ದೂ.ಸಂ. 08276 282040 ಅಥವಾ ಉಪನಿರೀಕ್ಷಕರ ಮೊ. ಸಂ. 9480804952 ಅಥವಾ ವೃತ್ತ ನಿರೀಕ್ಷಕರ ಮೊ. ಸಂ. 9480804936 ರಲ್ಲಿ ಸಂಪರ್ಕಿಸಬೇಕಾಗಿ ಪೊಲೀಸ್ ಠಾಣಾ ಪ್ರಕಟಣೆ ತಿಳಿಸಿದೆ.