ಮಡಿಕೇರಿ, ಮಾ. 15: ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣ ವಿವಾದಕ್ಕೆ ಸಂಬಂಧಿಸಿದಂತೆ, ತಾನು ಅಭಿವೃದ್ಧಿಗೆ ವಿರೋಧ ಮಾಡುತ್ತಿಲ್ಲವೆಂದು ಸ್ಪಷ್ಟೀಕರಣ ನೀಡಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಭವಿಷ್ಯದಲ್ಲಿ ಅಪಾಯ ಉಂಟಾಗದಿರಲಿ ಎಂಬ ಆಶಯ ಹೊಂದಿರುವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ನಿಲ್ದಾಣ ಕಾಮಗಾರಿ ವಿವಾದ ಪ್ರಸ್ತಾಪಿಸಿ ‘ಶಕ್ತಿ’ಯೊಂದಿಗೆ ದೂರವಾಣಿ ಮೂಲಕ ಹೇಳಿಕೆ ನೀಡಿದ ಶಾಸಕರು, ಜಲಮೂಲ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸಿದರೆ, ಕೆಲವು ವರ್ಷ ಹಿಂದೆ ಬೆಂಗಳೂರಿನಲ್ಲಿ ಸಂಭವಿಸಿದ ‘ಗಂಗಾರಾಂ’ ಕಟ್ಟಡದಂತೆ ಆಗದಿರಲೆಂದು ತನ್ನ ಕಾಳಜಿ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ಒಂದು ವೇಳೆ ಹೊಸ ಬಸ್ ನಿಲ್ದಾಣ ಈಗಿನ ಯೋಜನೆಯಡಿ ಪೂರ್ಣಗೊಂಡರೆ, ಭವಿಷ್ಯದಲ್ಲಿ ನಗರದ ರಾಜಾಸೀಟ್ ಸಹಿತ ಅನೇಕ ಮನೆಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಿಸಬೇಕಾದೀತು ಎಂದು ಅಭಿಪ್ರಾಯಪಟ್ಟಿರುವ ಅವರು, ತಪ್ಪಿದಲ್ಲಿ ಕಿರಿದಾದ ಮಾರ್ಗ ಅಪಘಾತಗಳಿಗೆ ಎಡೆಯಾಗಬಹುದು ಎಂದಿದ್ದಾರೆ.
(ಮೊದಲ ಪುಟದಿಂದ) ಈಗಾಗಲೇ ನಿಲ್ದಾಣ ಕೆಲಸಕ್ಕಾಗಿ ತೆಗೆದಿರುವ ಐದು ಅಡಿ ಗುಂಡಿಗಳಲ್ಲಿ ಸರಾಸರಿ 3 ಅಡಿ ನೀರು ನಿಂತಿರುವ ಪರಿಣಾಮ, ನೂತನ ಬಸ್ ನಿಲ್ದಾಣ ಕಟ್ಟಡಕ್ಕೆ ಅದು ಭದ್ರತೆಯಾಗುವ ವಿಶ್ವಾಸ ತನಗಿಲ್ಲವೆಂದು ಅವರು ಸಮಜಾಯಿಷಿಕೆ ನೀಡಿದ್ದಾರೆ. ಈ ದಿಸೆಯಲ್ಲಿ ಜಾಗದ ಮಣ್ಣು ಪರೀಕ್ಷೆ ಹಾಗೂ ನುರಿತ ತಂತ್ರಜ್ಞರಿಂದ ಸಲಹೆ ಪಡೆಯುವ