ಮಡಿಕೇರಿ, ಮಾ. 15: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮರಗೋಡು ಫಾರ್ಮರ್ಸ್ ಡೆವಲಪ್‍ಮೆಂಟ್ ಅಂಡ್ ರಿಕ್ರಿಯೇಷನ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ರೈತ ಬಾಂಧವರನ್ನು ಆನ್‍ಲೈನ್ ಮಾರಾಟ ವ್ಯವಸ್ಥೆಗೆ ನೋಂದಣಿ ಮಾಡುವ ಸಲುವಾಗಿ ಉಚಿತ ನೋಂದಣಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಅಧ್ಯಕ್ಷ ಬಿ.ಎಸ್. ಯೋಗೇಂದ್ರ ಉದ್ಘಾಟಿಸಿದರು. ಕ್ಲಬ್‍ನ ಅಧ್ಯಕ್ಷ ಬಿದ್ರುಪಣೆ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಕಾಂಗಿರ ಸತೀಶ್, ಉಪಾಧ್ಯಕ್ಷ ಗಿರೀಶ್ ಪೂಣಚ್ಚ, ಸದಸ್ಯರು ಹಾಜರಿದ್ದರು.
100ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು. ಕಾನಡ್ಕ ತಿಲಕ್‍ರಾಜ್ ನಿರೂಪಿಸಿದರು. ಬಡುವಂಡ್ರ ಸತೀಶ್ ವಂದಿಸಿದರು.