ಕುಶಾಲನಗರ, ಮಾ. 14: ಕುಶಾಲನಗರ ಭಜನಾ ಮಂಡಳಿಗಳು ಹಾಗೂ ಸಾರ್ವಜನಿಕರ ಸಹಯೋಗ ದೊಂದಿಗೆ ಭಾಗವತ ಮಂಗಳ ಪ್ರವಚನ ಕಾರ್ಯಕ್ರಮ ನಡೆಯಿತು. 7 ದಿನಗಳ ಕಾಲ ನಡೆದ ಭಾಗವತ ಸಪ್ತಾಹ ಕುಶಾಲನಗರದ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಬ್ರಾಹ್ಮಣ ಸಮಾಜ, ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾಗವತ ಮಂಗಳ ಕಾರ್ಯಕ್ರಮ ಜರುಗಿತು.

ಈ ಸಂದರ್ಭ ಗಣಪತಿ ಪೂಜೆ, ದೇವರಿಗೆ ಅಭಿಷೇಕ ನಂತರ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ವಿದ್ವಾನ್ ಆದ್ಯ ಗೋವಿಂದಾಚಾರ್ಯ ಅವರು ಪ್ರವಚನ ನಡೆಸಿಕೊಟ್ಟರು. ಕುಶಾಲನಗರದ ಸಮಸ್ತ ಭಜನಾ ಮಂಡಳಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು.

ನಿತ್ಯ ಜೀವನದಲ್ಲಿ ಧರ್ಮನಿಷ್ಠೆಯನ್ನು ಮೂಡಿಸುವ ದೃಷ್ಠಿಕೋನದಲ್ಲಿ ನಾಗರಿಕರಿಗೆ ಮಹಾಭಾರತದಲ್ಲಿ ಮೂಡಿಬರುವ ಸಾಂದರ್ಭಿಕ ವಿಷಯಗಳನ್ನು ಪ್ರವಚನದ ಮೂಲಕ ಕಾರ್ಯ ಕ್ರಮದಲ್ಲಿ ಅರಿವು ಮೂಡಿಸಲಾಯಿತು.

ಕುಶಾಲನಗರದ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಿ.ಎನ್. ವಿಜಯೇಂದ್ರ, ಮಹಿಳಾ ಭಜನಾ ಮಂಡಳಿ ಪ್ರಮುಖರಾದ ರಮಾ ವಿಜಯೇಂದ್ರ, ಪದ್ಮಾ ಪುರುಷೋತ್ತಮ್, ಶೈಲಾ ಪುಂಡರೀಕಾಕ್ಷ ಮತ್ತಿತರ ಪ್ರಮುಖರು, ಕಾರ್ಯಕರ್ತರು ಇದ್ದರು.