ಗೋಣಿಕೊಪ್ಪಲು, ಮಾ. 14: ಕೊಡಗು ಜಿಲ್ಲೆಯಲ್ಲಿ ಗುಣಮಟ್ಟದ ಕಲಾವಿದÀರಿದ್ದಾರೆ. ಅವರಿಗೆ ಉತ್ತೇಜನ ನೀಡಲು ಸಿನೆಮಾ ಕ್ಲಬ್‍ಗಳ ಅವಶ್ಯಕತೆ ಇದೆ ಎಂದು ತೆಳಂಗ್ ನೀರ್ ಕೊಡವ ಸಿನೆಮಾ ನಿರ್ದೇಶಕ ಗೋಪಿ ಪೀಣ್ಯ ಅಭಿಪ್ರಾಯಪಟ್ಟಿದ್ದಾರೆ.
ಗೋಣಿಕೊಪ್ಪಲು ಪ್ರೆಸ್ ಕ್ಲಬ್ ವತಿಯಿಂದ ನಡೆದ ಮುಕ್ತ ಮುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಮರ್ಷಿಯಲ್ ಚಿಂತನೆಯಲ್ಲಿ ಚಿತ್ರ ನಿರ್ಮಿಸಿದರೆ ಯಶಸ್ಸು ಅಸಾಧ್ಯ. ಭಾಷೆ ಹಾಗೂ ಸ್ಥಳೀಯ ಸಂಸ್ಕøತಿ ಸಂಪನ್ಮೂಲಗಳನ್ನು ಪೋಷಿಸಲು ಚಿತ್ರದ ಮೂಲಕ ಸಂದೇಶ ನೀಡಬಹುದಾಗಿದೆ. ಇದಕ್ಕಾಗಿ ಸಣ್ಣ ಮಟ್ಟದ ಸಿನೆಮಾ ಕ್ಲಬ್‍ಗಳು ನಿರ್ಮಾಣಗೊಂಡರೆ ಸಾಕಷ್ಟು ಕೊಡವ ಸಿನೆಮಾಗಳನ್ನು ಜನರಿಗೆ ನೀಡಲು ಸಾಧ್ಯವಿದೆ ಹಾಗೂ ಸಿನಿಮಾ ಮಂದಿರಗಳಿಲ್ಲ ಎಂಬ ಕೊರಗನ್ನು ನಿವಾರಿಸದಂತಾಗುತ್ತದೆ. ಸಿನೆಮಾ ಕ್ಲಬ್‍ಗಳಲ್ಲಿ 14-20 ಮಂದಿ ವೀಕ್ಷಿಸಲು ಅವಕಾಶವಿರುವದರಿಂದ ಹೆಚ್ಚಿನ ಖರ್ಚು ಬೀಳುವದಿಲ್ಲ. ಸಣ್ಣ ಮೊತ್ತದ ಹಣದಲ್ಲಿ ಸಾಕಷ್ಟು ಸಿನೆಮಾ ಗಳನ್ನು ಜನರಿಗೆ ನೀಡಬಹುದು.
ಶಾರ್ಟ್ ಸಿನೆಮಾಗಳ ಮೂಲಕ ಸ್ಥಳಿಯವಾಗಿ ಸಿನೆಮಾ ನಿರ್ಮಿಸಲು ಸಾಧ್ಯವಿದೆ. ಹೆಚ್ಚು ಖರ್ಚು ಮಾಡದೆ ಯೂಟ್ಯೂಬ್ ಮೂಲಕ ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದರು.
ಕೊಡಗಿನಲ್ಲಿ ಕಲಾವಿದÀರ ಸಂಖ್ಯೆ ಕಡಿಮೆ ಇಲ್ಲ. ಆಸಕ್ತಿ ಇರುವವರು ನಗರಗಳಿಗೆ ಬಂದು ನಟಿಸುತ್ತಾರೆ. ವೃತ್ತಿಪರವಾಗಿ ಸ್ಥಳೀಯವಾಗಿ ತೊಡಗಿಸಿಕೊಳ್ಳದ ಕಾರಣ ಸಾಮಾನ್ಯ ಅರಿವು ಕಡಿಮೆ ಇದೆ. ಆದರೆ, ವೃತ್ತಿಪರವಾಗಿ ತೊಡಗಿಕೊಂಡಾಗ ಕಲಾವಿದÀರು ಉತ್ತಮ ಪ್ರತಿಭೆಗಳು ಎಂಬುವದನ್ನು ತೋರಿಸಿದ್ದಾರೆ. ವೃತ್ತಿಪರ ಕಲಾವಿದÀರನ್ನು ಬೆಳೆಸಲು ಕಷ್ಟದ ಮಾತು ಎಂದರು.
ಜನರಿಗೆ ಸಂದೇಶ ಕೊಡಬೇಕು ಎಂಬ ಚಿಂತನೆಯಲ್ಲಿ ತೆಳಂಗ್ ನೀರ್ ಚಿತ್ರ ನಿರ್ಮಿಸಲಾಗಿದೆ. ಹಣ ಉಳಿಸುವ ಉದ್ದೇಶದಿಂದ ಕಾಮಿಡಿ, ಹಾಡು ಇಂತಹವುಗಳಿಂದ ದೂರ ಉಳಿಯಲಾಗಿದೆ. ಆದರೂ ಜನರು ಪ್ರೀತಿಯಿಂದ ವೀಕ್ಷಿಸುತ್ತಿರುವುದು ನಮ್ಮ ಸಿನೆಮಾಸಕ್ತಿಗೆ ಒತ್ತಾಸೆ ನೀಡಿದಂತಾಗಿದೆ ಎಂದರು.
ಕೊಡಗಿನ ಪ್ರಕೃತಿ ಸೌಂದರ್ಯ ಸಿನೆಮಾ ನಿರ್ಮಿಸಲು ಸ್ಫೂರ್ತಿಯಾಯಿತು. ಆದರೆ, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಪ್ರಕೃತಿ ನಾಶಕ್ಕೆ ಬೆಲೆ ಕಟ್ಟಲು ಆಗುತ್ತಿಲ್ಲ. ಸಹಜ ಪ್ರಕೃತಿ ಉಳಿಯಲು ಎಲ್ಲರೂ ಪ್ರಯತ್ನ ಪಡಬೇಕು ಎಂದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಹೊರ ಜಿಲ್ಲೆಯಿಂದ ಬಂದು ಸಿನೆಮಾ ನಿರ್ಮಿಸುತ್ತಿರುವದು ಭಾಷಾ ಬೆಳೆವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಪ್ರಧಾನ ಕಾಯದರ್ಶಿ ಹೆಚ್.ಕೆ. ಜಗದೀಶ್ ಪ್ರಾಸ್ತಾವಿಕ ಮಾತನಾಡಿದರು. ಚೆನ್ನನಾಯಕ ಪ್ರಾರ್ಥಿಸಿದರು. ರಾಕೇಶ್ ಕೊಡಗು ಸ್ವಾಗತಿಸಿದರು.