ಮಡಿಕೇರಿ, ಮಾ. 15: ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕೆನ್ನುವ ಉದ್ದೇಶದಿಂದ ಶಾಸಕರು ತಾತ್ಕಾಲಿಕವಾಗಿ ಅಡಿಪಾಯದ ಕಾಮಗಾರಿಯನ್ನು ಸ್ಥಗಿತಗೊಳಿಸ ುವಂತೆ ತಿಳಿಸಿದ್ದಾರೆಯೇ ಹೊರತು ಸಂಪೂರ್ಣವಾಗಿ ಯೋಜನೆಗೆ ವಿರೋಧ ವ್ಯಕ್ತಪಡಿಸಿಲ್ಲವೆಂದು ನಗರಸಭೆಯ ಬಿಜೆಪಿ ಸದಸ್ಯರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷÀ ಕೆ.ಎಸ್. ರಮೇಶ್, ನಗರ ಕಾಂಗ್ರೆಸ್ ಪ್ರಮುಖರು ಖಾಸಗಿ ಬಸ್ ನಿಲ್ದಾಣದ ಯೋಜನೆಗೆ ಬಿಜೆಪಿ ಸಂಪೂರ್ಣ ವಿರೋಧವಿದೆ ಎನ್ನುವ ರೀತಿಯಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಡಿಪಾಯ ತೆಗೆಯುವ ಮೊದಲು ಹಳೆಯ ಮಣ್ಣನ್ನು ಸಂಪೂರ್ಣ ತೆರವುಗೊಳಿಸದೆ ಕಾಮಗಾರಿ ನಡೆಸುತ್ತಿದ್ದುದರಿಂದ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಅಡಿಪಾಯದ ಗುಂಡಿ ನಿರ್ಮಾಣದ ಸಂದರ್ಭ ನೀರು ಬಂದಿದ್ದು, ಮುಂದೆ ಕಟ್ಟಡ ನಿರ್ಮಾಣ ಗೊಂಡರೆ ಕಟ್ಟಡದ ಅಸ್ತಿತ್ವಕ್ಕೆ ಧಕ್ಕೆಯಾಗುವದನ್ನು ತಡೆಯಲು ಗುಣಮಟ್ಟದ ಕಾಮಗಾರಿ ನಡೆಯಬೇಕೆಂದು ಶಾಸಕರಾದಿಯಾಗಿ ಬಿಜೆಪಿ ಸದಸ್ಯರು ಆಸಕ್ತಿ ವಹಿಸಿದ್ದಾರೆ. ಅಡಿಪಾಯದ ಗುಂಡಿ ತೆಗೆದ ನಂತರ ಮಣ್ಣು ಪರೀಕ್ಷೆ ಮಾಡಲಾಗಿ ಈಗಿರುವ ಗುಂಡಿಗಿಂತ ಮೂರು ಪಟ್ಟು ಹೆಚ್ಚಿನ ಗುಂಡಿಯನ್ನು ತೆಗೆದು ಪಿಲ್ಲರ್ ಅಳವಡಿಸಬೇಕೆಂದು ಅಧಿಕಾರಿಗಳು ಈಗಾಗಲೇ ಸಲಹೆ ನೀಡಿದ್ದಾರೆ ಎಂದರು. ಇದನ್ನು ಮೀರಿ ಕಟ್ಟಡ ನಿರ್ಮಾಣಗೊಂಡರೆ ವಾಲುವ ಎಲ್ಲಾ ಸಾಧ್ಯತೆಗಳಿವೆ ಎಂದು ಕೆ.ಎಸ್. ರಮೇಶ್ ಆತಂಕ ವ್ಯಕ್ತಪಡಿಸಿದರು.
ಕಾಮಗಾರಿಯನ್ನು ಪುನರ್ ಪರಿಷ್ಕರಿಸಿ ಪಿಲ್ಲರನ್ನು ಮತ್ತಷ್ಟು ಆಳದಲ್ಲಿ ಅಳವಡಿಸುವ ಮೂಲಕ ಮುಂದಿನ 50 ವರ್ಷಗಳವರೆಗೆ ಬಾಳಿಕೆ ಬರು ವಂತಹ ಬಸ್ ನಿರ್ಮಾಣ ವಾಗಬೇಕೆನ್ನುವದು ನಮ್ಮ ಉದ್ದೇಶವೆಂದು ಸ್ಪಷ್ಟಪಡಿಸಿದರು.
ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮಾತನಾಡಿ, ಕಳಪೆ ಕಾಮಗಾರಿ ನಡೆದು ಮುಂದೆ ಅನಾಹುತ ಸಂಭವಿಸಿದಲ್ಲಿ ಜನ ಸಾಮಾನ್ಯರು ಕಷ್ಟ ಅನುಭವಿಸ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಹಾಕಿರುವ ಮಣ್ಣಿನಲ್ಲೆ ತಡೆಗೋಡೆ ನಿರ್ಮಿಸ ಲಾಗುತ್ತಿದ್ದು, ಸ್ಥಗಿತಗೊಳಿಸು ವಂತೆ ಸೂಚಿಸಿದರೂ ಕಾಮಗಾರಿ ಮುಂದು ವರಿದಿದೆ. ನೂತನ ತಂತ್ರಜ್ಞಾನದ ಮೂಲಕ ಗುಣಮಟ್ಟದ ಕಾಮಗಾರಿ ನಡೆಸಿದರೆ ಬಸ್ ನಿಲ್ದಾಣದ ಯೋಜನೆಗೆ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‍ನವರೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡು ತ್ತಿದ್ದಾರೆ ಎಂದು ಟೀಕಿಸಿದ ಪ್ರಕಾಶ್, ಅಧ್ಯಕ್ಷರು ಕುಂಡಾಮೇಸ್ತ್ರಿಯ ಕಾಮಗಾರಿ ಪರಿಶೀಲನೆಯ ಸಂದರ್ಭ ತಮ್ಮನ್ನು ಆಹ್ವಾನಿಸದೆ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಸದಸ್ಯ ಪಿ.ಡಿ. ಪೊನ್ನಪ್ಪ ಮಾತನಾಡಿ, ಖಾಸಗಿ ಬಸ್‍ಗಳ ಸಂಚಾರಕ್ಕೆ ಮೊದಲು ಮಾರ್ಗವನ್ನು ಸೂಚಿಸಲಿ ಎಂದರು. ಶನಿವಾರ ಮತ್ತು ಭಾನುವಾರದಂದು ರಾಜಾಸೀಟು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ರಾಜಾಸೀಟು ಬಳಿಯಲ್ಲಿರುವ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ ಎನ್ನುವದು ಅರ್ಥಹೀನ ಕ್ರಮವೆಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರುಗಳಾದ ಸವಿತಾ ರಾಕೇಶ್, ಲಕ್ಷ್ಮಿ, ಅನಿತಾ ಪೂವಯ್ಯ ಹಾಗೂ ಉಣ್ಣಿಕೃಷ್ಣನ್ ಉಪಸ್ಥಿತರಿದ್ದರು.