ಮಡಿಕೇರಿ, ಮಾ. 15: ಬಿಳಿಗೇರಿಯ ಅರ್ಜುನ್ ಫ್ರೆಂಡ್ಸ್ ವತಿಯಿಂದ ಪ್ರಥಮ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ತಾ. 18 ರಂದು ಮತ್ತು 19 ರಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವದು. ಪ್ರಥಮ ಬಹುಮಾನ ರೂ. 13,333 ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. 7,777 ಮತ್ತು ಟ್ರೋಫಿ ಎಲ್ಲಾ ಪಂದ್ಯಗಳಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ನೀಡಿ ಗೌರವಿಸಲಾಗುವದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8277778744, 9483826022, 9483114226, 9741010153 ಯನ್ನು ಸಂಪರ್ಕಿಸಬಹುದು.