ಮಡಿಕೇರಿ, ಮಾ. 14: ಮಡಿಕೇರಿಯ ಶಂಕರ್ ಕ್ರಿಕೆಟ್ ಅಕಾಡೆಮಿ ವತಿಯಿಂದ ತಾ. 31 ರಿಂದ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಕ್ರಿಕೆಟ್ ತರಬೇತಿ ಶಿಬಿರ ಏರ್ಪಡಿಸಲಾಗಿದೆ.
16 ವರ್ಷದೊಳಗಿನ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದ್ದು, ಆಸಕ್ತರು ತಾ. 31 ರಂದು ಅಪರಾಹ್ನ 3 ಗಂಟೆಗೆ, ಕೊಡಗು ವಿದ್ಯಾಲಯದಲ್ಲಿ ವರದಿ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಕ್ಕೆ 9980060322 ಅಥವಾ 9480073688 ಮೊಬೈಲ್ ಸಂಖ್ಯೆ ಯನ್ನು ಸಂಪರ್ಕಿಸಬಹುದಾಗಿದೆ.