ಮೂರ್ನಾಡು, ಮಾ. 15: ಜೀವ ವಿಮ ನಿಗಮ ಮಡಿಕೇರಿ ಶಾಖೆ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಗೆ ಬೀರು ಹಾಗೂ ಇನ್ಸಿನೇಟರ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.
ಮಡಿಕೇರಿ ಜೀವ ವಿಮ ನಿಗಮದ ಶಾಖಾ ವ್ಯವಸ್ಥಾಪಕ ಮಡೆಯಂಡ ಜೀವನ್ ಕುಮಾರ್ ರೂ. 25 ಸಾವಿರ ಮೌಲ್ಯದ ಪರಿಕರಗಳನ್ನು ವಿದ್ಯಾಸಂಸ್ಥೆಗೆ ಹಸ್ತಾಂತರಿಸಿದರು. ಬಳಿಕ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದ ಅವರು, ವಿಮ ನಿಗಮವು ಸುಮಾರು 14ಲಕ್ಷ ಕೋಟಿ ರೂಗಳನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ. ಪ್ರತಿ ಮನೆಗೂ ಆಧಾರ ಸ್ತಂಭವಾಗಿ ಜೀವ ವಿಮೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಅಧ್ಯಕ್ಷತೆ ವಹಿಸಿದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಮಡಿಕೇರಿ ಜೀವ ವಿಮ ನಿಗಮದ ಸಹಾಯಕ ವ್ಯವಸ್ಥಾಪಕಿ ಟಿ.ವಿ. ಸುಜಾತ, ಅಭಿವೃದ್ಧಿ ಅಧಿಕಾರಿ ನಟರಾಜ್, ಸೋಮಶೇಖರ್, ರಾಘವೇಂದ್ರ ಉಪಸ್ಥಿತರಿದ್ದರು.