ವೀರಾಜಪೇಟೆ, ಮಾ. 15: ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ಹಾಗೂ ಅಂಗಾಳಪರಮೇಶ್ವರಿ ಯುವ ಭಕ್ತ ಮಂಡಳಿಯಿಂದ ಹೋಳಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹೋಳಿ ಅಂಗವಾಗಿ ಬೆಳಿಗ್ಗೆ ಮಾರಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಪರಾಹ್ನ 4ಗಂಟೆಗೆ ಡಿ.ಜೆ.ಯ ಅಬ್ಬರದ ಸಂಗೀತದೊಂದಿಗೆ ಯುವಕರ ತಂಡ ತೆಲುಗರಬೀದಿ,ಜೈನರಬೀದಿ, ದೊಡ್ಡಟ್ಟಿ ಚೌಕಿಯವರೆಗೆ ಬಣ್ಣ ಹಚ್ಚಿಕೊಂಡು ಮೆರವಣಿಗೆ ನಡೆಸಿದರು.
ದೊಡ್ಡಟ್ಟಿ ಚೌಕಿಯಿಂದ ಮೆರವಣಿಗೆ ಹಿಂದಿರುಗುತ್ತಿದ್ದಂತೆ ಯುವಕರ ತಂಡ ಮಾರಿಯಮ್ಮ ದೇವಾಲಯದ ತನಕ ಮನೆ ಮನೆ ಮುಂದೆ ಇಡಲಾಗಿದ್ದ ಬಣ್ಣದ ನೀರಿನಲ್ಲಿ ಓಕುಳಿ ಆಡಿದರು.