ಮಡಿಕೇರಿ, ಮಾ. 15: ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿ 4 ನೇ ಬಜೆಟ್ ಮಂಡಿಸಿದ್ದು, ಅವರ ರಾಜಕೀಯ ಜೀವನದಲ್ಲ್ಲಿ 12 ನೇ ಬಜೆಟ್ ಮಂಡಿಸಿ ದಾಖಲೆ ಸ್ಥಾಪಿಸಿದ್ದಾರೆ. ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಇಂದು ವಿಧಾನ ಸಭೆಯಲ್ಲಿ ಬಹುಜನ ಓಲೈಕೆಯ ಬಜೆಟ್ ಮಂಡಿಸಿದ್ದು ಮುಂದಿನ ವರ್ಷದ ಚುನಾವಣೆಯನ್ನು ದೃಷ್ಟಿಯಿರಿಸಿಕೊಳ್ಳಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ. ಆದರೆ, ರೈತರಿಗೆ ಸಾಲ ಮನ್ನಾ ಮಾಡಿಲ್ಲ ಎನ್ನುವದು ಕೊರತೆಯಾಗಿಯೇ ಉಳಿದಿದೆ. ಬಜೆಟ್‍ನ ಒಳಹೂರಣ ಈ ಕೆಳಗಿನಂತಿದೆ. ಆಯವ್ಯಯ ಗಾತ್ರ (ಸಂಚಿತ ನಿಧಿ) – 1,86,561 ಕೋಟಿ ರೂ.ಗಳು. ಈ ಮೊತ್ತವು 2016-17ನೇ ಸಾಲಿನ ಆಯವ್ಯಯ ಅಂದಾಜು 1,63,419 ಕೋಟಿ ರೂ.ಗಳಿಗೆ ಹೋಲಿಸಿದಲ್ಲಿಶೇ. 14.16 ರಷ್ಟು ಹೆಚ್ಚಳ. ಒಟ್ಟು ಸ್ವೀಕೃತಿ – 1,82,119 ಕೋಟಿ ರೂ. – ರಾಜಸ್ವ ಸ್ವೀಕೃತಿ 1,44,892 ಕೋಟಿ ರೂ. ಮತ್ತು 37,092 ಕೋಟಿ ರೂ. ಸಾಲ ಮತ್ತು 135 ಕೋಟಿ ರೂ. ಬಂಡವಾಳ ಸ್ವೀಕೃತಿ ಒಟ್ಟು ವೆಚ್ಚ – 1,86,561 ಕೋಟಿ ರೂ. – ರಾಜಸ್ವ ವೆಚ್ಚ 1,44,755 ಕೋಟಿ ರೂ. ಮತ್ತು ಬಂಡವಾಳ ವೆಚ್ಚ 33,630 ಕೋಟಿ ರೂ. ಹಾಗೂ ಸಾಲ ಮರುಪಾವತಿ 8,176 ಕೋಟಿ ರೂ.
“ಕೃಷಿ ಭಾಗ್ಯ” ಯೋಜನೆ - ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಎಲ್ಲ ತಾಲೂಕುಗಳಿಗೆ ವಿಸ್ತರಣೆ - 600 ಕೋಟಿ ರೂ. “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ”ಗೆ 31.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸೇರ್ಪಡೆ.
ಕೇಂದ್ರದ ನೆರವಿನ ಜೊತೆಗೆ ರಾಜ್ಯ ಸರ್ಕಾರದ ಸಂಪನ್ಮೂಲಗಳಿಂದ 845 ಕೋಟಿ ರೂ. ನೆರವು. ನೀರಿನ ವಿವೇಕಯುತ ಮತ್ತು ದಕ್ಷ ಬಳಕೆಗೆ 1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2 ಹೆ. ವರೆಗೆ ಶೇ.90 ರಷ್ಟು ಹಾಗೂ 5 ಹೆ. ವರೆಗೆ ಶೇ. 50ರಷ್ಟು ಸಹಾಯಧನದಲ್ಲಿ ಹನಿ ಮತ್ತು ತುಂತುರು ನೀರಾವರಿ ಘಟಕ ವಿತರಣೆ- 375 ಕೋಟಿ ರೂ. “ಕೃಷಿ ಯಂತ್ರಧಾರೆ ಕಾರ್ಯಕ್ರಮ”ದಡಿ ಹೋಬಳಿಗಳಲ್ಲಿ 250 ಹೆಚ್ಚು ಕೇಂದ್ರಗಳ ಸ್ಥಾಪನೆ- 122 ಕೋಟಿ ರೂ. ಬೇಸಾಯದ ವೆಚ್ಚದ ಕಡಿತ, ಸುಧಾರಿತ ತಾಂತ್ರಿಕತೆ ಅಳವಡಿಕೆಯನ್ನು ಉತ್ತೇಜಿಸಲು, ಭತ್ತ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಉತ್ಪಾದನೆ ಹೆಚ್ಚಳಕ್ಕೆ ರೈತರ ಖಾತೆಗೆ ನೇರವಾಗಿ ಪ್ರೋತ್ಸಾಹಧನ- 100 ಕೋಟಿ ರೂ. ಪ್ರತಿ ತಾಲೂಕು ಕೇಂದ್ರದಲ್ಲಿ ಒಂದರಂತೆ 174 “ಗ್ರಾಮೀಣ ಕೃಷಿ ಯಂತ್ರೋಪಕರಣ/ ಸೇವಾ ಕೇಂದ್ರಗಳ” ಸ್ಥಾಪನೆ; ಪ್ರತಿ ಕೇಂದ್ರ ಸ್ಥಾಪನೆಗೆ ಬ್ಯಾಂಕ್ ಲಿಂಕೇಜ್‍ನೊಂದಿಗೆ 5 ಲಕ್ಷ ರೂ. ಅಥವಾ ಗರಿಷ್ಠ ಶೇ. 50 ಸಹಾಯಧನ; ಪರಿಶಿಷ್ಟ ಜಾತಿ/ ಪಂಗಡದವರಿಗೆ ಗರಿಷ್ಠ ಶೇ. 75 ರಷ್ಟು ಸಹಾಯಧನ – 10 ಕೋಟಿ ರೂ.
(ಮೊದಲ ಪುಟದಿಂದ)
ತೋಟಗಾರಿಕೆ : ತೋಟಗಾರಿಕೆ ಇಲಾಖೆಯಡಿ ಮೊಟ್ಟ ಮೊದಲ ಬಾರಿಗೆ “ಕೃಷಿ ಭಾಗ್ಯ” ಯೋಜನೆ ಅನುಷ್ಠಾನ; 200 ಕೋಟಿ ರೂ. ಪ್ರತ್ಯೇಕ ಅನುದಾನ. 20,000 ಎಕರೆ ಪ್ರದೇಶಕ್ಕೆ ತೋಟಗಾರಿಕಾ ಬೆಳೆಗಳ ವಿಸ್ತರಣೆಗೆ 20,000 ರೈತರಿಗೆ 40 ಲಕ್ಷ ಉತ್ತಮ ಗುಣಮಟ್ಟದ ಸಸಿ ನೆಡುವ ಸಾಮಗ್ರಿ ಪೂರೈಕೆ- 5 ಕೋಟಿ ರೂ. ಇಲಾಖೆ ಯ 418 ತೋಟಗಳಲ್ಲಿ ಮುಂದಿನ 5 ವ/ರ್Àಗಳಲ್ಲಿ 100 ಮಾದರಿ ತೋಟಗಳ ಅಭಿವೃದ್ಧಿ- 10 ಕೋಟಿ ರೂ. 100 ಎಪಿಎಂಸಿ ಮಾರುಕಟ್ಟೆಗಳಲ್ಲಿ ವೈಜ್ಞಾನಿಕ ಹಣ್ಣು ಮಾಗಿಸುವ ಸೌಲಭ್ಯ ಕಲ್ಪಿಸಲು 10 ಕೋಟಿ ರೂ. ಸಂಬಾರ ಅಭಿವೃದ್ಧಿ ಮಂಡಳಿ ಮೂಲಕ ಒಣಮೆಣಸಿ&divound; Àಕಾಯಿ, ಮೆಣಸು ಮತ್ತು ಅರಿಷಿನ ಇತ್ಯಾದಿ ಬೆಳೆಗಾರರಿಗೆ ಉತ್ತಮ ಕೊಯ್ಲೋತ್ತರ ಮತ್ತು ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ನೆರವು; 7000 ರೈತರಿಗೆ ಅನುಕೂಲ ಕಲ್ಪಿಸುವ ಗುರಿ - 3 ಕೋಟಿ ರೂ.
ನೀರಾಗೆ ಉತ್ತೇಜನ : ‘ನೀರಾ’ವನ್ನು ಪುಷ್ಟಿದಾಯಕ ಪೇಯವನ್ನಾಗಿ ಇಳಿಸಲು ಹಾಗೂ ಇದನ್ನು ಇತರ ಉದ್ದೇಶಗಳಿಗೆ ಬಳಸುವದಕ್ಕೆ ಸಂಸ್ಕರಿಸಲು.
ಪಶುಸಂಗೋಪನೆ: 302 ಪ್ರಾಥಮಿಕ ಪಶು ವೈದ್ಯಕೀಯ ಕೇಂದ್ರಗಳನ್ನು ಪಶು ಚಿಕಿತ್ಸಾಲಯ ಗಳನ್ನಾಗಿ ಉನ್ನತೀಕರಣ. “ಪ್ರಮಾಣೀಕೃತ ಉತ್ಕøಷ್ಟ ತಳಿ ಟಗರುಗಳ ಉತ್ಪಾದಕ ಘಟಕ”ಗಳ ಸ್ಥಾಪನೆ. 7.25 ಕೋಟಿ ರೂ.ಗಳ ಘಟಕ ವೆಚ್ಚದಲ್ಲಿ 2 ಆಧುನಿಕ ಕಸಾಯಿಖಾನೆ ನಿರ್ಮಾಣ. ತಲಾ 5 ಲಕ್ಷ ರೂ.ಗಳ ವೆಚ್ಚದಲ್ಲಿ ಅಸ್ತಿತ್ವದಲ್ಲಿರುವ ಮಾಂಸದ ಅಂಗಡಿಗಳ ಆಧುನೀಕರಣ; ಪ್ರತಿ ಅಂಗಡಿಗೆ 1.25 ಲಕ್ಷ ರೂ.ಗಳ ಸಹಾಯಧನ. ಅಪಘಾತದಲ್ಲಿ ವಿಮೆ ಮಾಡದ ಎತ್ತು / ಹಸುಗಳ ಸಾವಿನಿಂದ ನಷ್ಟ ಅನುಭವಿಸುವ ರೈತರಿಗೆ ಸಂಕಷ್ಟ ನಿವಾರಣೆಗೆ ಪ್ರತಿ ರಾಸಿಗೆ 10,000 ರೂ. ಪರಿಹಾರಧನ. 6 ತಿಂಗಳೊಳಗೆ ಸಾವು ಸಂಭವಿಸುವ ಕುರಿ / ಮೇಕೆಮರಿಗಳಿಗೆ 2,500 ರೂ. ಹಾಗೂ 6 ತಿಂಗಳ ನಂತರ ಸಾವಿಗೀಡಾಗುವ ಕುರಿ / ಮೇಕೆಮರಿಗಳಿಗೆ 5,000 ರೂ.ಗಳ ಪರಿಹಾರ.
ರೇಶ್ಮೆ : ಬೀಜ ಉತ್ಪಾದನೆ ಮತ್ತು ಚಾಕಿ ಸಾಕಣೆಯಲ್ಲಿ ಗುಣಮಟ್ಟ ನಿಯಂತ್ರಣ ಖಾತರಿಗೆ ಹಾಗೂ ರೇಷ್ಮೆ ಉದ್ಯಮದ ಅಭಿವೃದ್ಧಿಗೆ ಪ್ರಾಧಿಕಾರ ಸ್ಥಾಪನೆ.
ಮೀನುಗಾರಿಕೆ : “ಮತ್ಸ್ಯ ಕೃಷಿ ಆಶಾ ಕಿರಣ” ಯೋಜನೆಯಡಿ ಪ್ರಮುಖ ಕೆರೆಗಳ 2,500 ಹೆಕ್ಟೇರ್ ಪ್ರದೇಶದಲ್ಲಿ ಹೆಕ್ಟೇರ್‍ಗೆ 4,000 ಬಲಿತ ಮೀನುಮರಿ ಹಾಗೂ 2 ಟನ್ ಕೃತಕ ಆಹಾರ ಖರೀದಿಗೆ ಘಟಕ ವೆಚ್ಚದ ಶೇ.50ರಷ್ಟು ಹಾಗೂ ಗರಿಷ್ಠ 27,000 ರೂ. ನೀಡಲು ಕ್ರಮ - 6.75 ಕೋಟಿ ರೂ.
ಸಹಕಾರ : ಈ ಸಾಲಿನಲ್ಲಿ 25 ಲಕ್ಷ ರೈತರಿಗೆ 13,500 ಕೋಟಿ ರೂ.ಗಳ ಕೃಷಿ ಸಾಲ ವಿತರಿಸುವ ಗುರಿ. ರಾಜ್ಯದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ. ಇಂಟರ್‍ನೆಟ್ ಸಂಪರ್ಕ ಇರುವ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಡಿಸಿಸಿ ಬ್ಯಾಂಕ್‍ಗಳಿಂದ ನಬಾಡ್ರ್À ಸಹಾಯದೊಂದಿಗೆ ಮೈಕ್ರೋ ಎಟಿಎಂ ಕಮ್ ಪಿಒಎಸ್ ಯಂತ್ರಗಳ ಪೂರೈಕೆ; ಸಣ್ಣ ನೀರಾವರಿಯನ್ವಯ· ಕೆರೆಗಳ ಹೂಳೆತ್ತುವ “ಕೆರೆ ಸಂಜೀವಿನಿ” ಯೋಜನೆಗೆ-100 ಕೋಟಿ ರೂ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಯೋಜನೆಯನ್ವಯ : ಅರಣ್ಯ ಭೂಮಿಯಲ್ಲಿ 50 “ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ”ಗಳ ಅಭಿವೃದ್ಧಿ. ವನಮಹೋತ್ಸವಕ್ಕಾಗಿ ಎತ್ತರದ ಹಾಗೂ ಉತ್ತಮ ಗುಣಮಟ್ಟದ 6 ಕೋಟಿ ಸಸಿಗಳನ್ನು ಬೆಳೆಸಲು ಕ್ರಮ. ಎಲ್ಲಾ ನರ್ಸರಿಗಳ ವೈಜ್ಞಾನಿಕ ಅಭಿವೃದ್ಧಿಗೆ “ನರ್ಸರಿ ಅಭಿವೃದ್ಧಿ ಏಜೆನ್ಸಿ” ರಚನೆ. ಕೇಂದ್ರದಲ್ಲಿ ಅರಣ್ಯ ಮಾಹಿತಿ ಕೇಂದ್ರದ ಅಭಿವೃದ್ಧಿ. ಜನವಸತಿ ಪ್ರದೇಶಗಳಿಗೆ ವನ್ಯಮೃಗಗಳ ವಲಸೆ ತಡೆಗಟ್ಟಲು, ಸ್ವಯಂಚಾಲಿತ ಸೋಲಾರ್ ವಿದ್ಯುತ್ ಪಂಪ್‍ಗಳ ಸಹಾಯದೊಂದಿಗೆ ದಟ್ಟ ಅರಣ್ಯದಲ್ಲಿ ಇರುವ 100 ಜಲಕಾಯಗಳನ್ನು ತುಂಬಲು 10 ಕೋಟಿ ರೂ ಅನುದಾನ.
ಶಾಲಾ ಶಿಕ್ಷಣ ನೀತಿಯ ರಚನೆ : ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟವನ್ನು ಉತ್ತಮಪಡಿಸಲು ಅಭ್ಯಾಸ ಮತ್ತು ಚಟುವಟಿಕೆ ಪುಸ್ತಕಗಳ ಬಳಕೆ; 1 ರಿಂದ 8ನೇ ತರಗತಿಗಳವರೆಗೆ ವಸ್ತುನಿಷ್ಠ ಕಲಿಕಾ ಮೌಲ್ಯಮಾಪನ; ವಿಶ್ವಾಸ ಕಿರಣ - ಬೇಸಿಗೆ ಮತ್ತು ಇತರ ರಜಾ ಅವಧಿಗಳಲ್ಲಿ ಪೂರಕ ಬೋಧನೆ;
1 ರಿಂದ 10ನೇ ತರಗತಿಗಳವರೆಗೆ ಪರಿಷ್ಕøತ ಪಠ್ಯಪುಸ್ತಕಗಳು ಮತ್ತು 9 ರಿಂದ 12 ತರಗತಿಗಳವರೆಗೆ ಆಯ್ದ ವಿಷÀಯಗಳಿಗೆ ಓಅಇಖಖಿ ಪಠ್ಯ ಪುಸ್ತಕಗಳ ಅಳವಡಿಕೆ. 1ನೇ ತರಗತಿಯಿಂದ ಆಂಗ್ಲ ಭಾಷೆಯ ಪರಿಣಾಮಕಾರಿ ಬೋಧನೆ: ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ 12ನೇ ತರಗತಿವರೆಗೆ 176 ಸಂಯೋಜಿತ ಶಾಲೆಗಳು. ಹೆಚ್ಚುವರಿ 1000 ಪ್ರೌಢಶಾಲೆಗಳು ಮತ್ತು ಪಿ.ಯು. ಕಾಲೇಜುಗಳಲ್ಲಿ ಐಟಿ ಸ್ಕೂಲ್. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳ ಹೆಚ್ಚು ಸಮಗ್ರ ಸುಧಾರಣೆ
ವಿದ್ಯಾರ್ಥಿಗಳ ಪ್ರೇರಣೆಗಾಗಿ ಕೈಗೊಳ್ಳಲಾಗುವ ಕ್ರಮಗಳು: ಶೂ ಮತ್ತು ಸಾಕ್ಸ್ ವಿತರಣೆ; ಜುಲೈ ತಿಂಗಳಿನಿಂದ ಜಾರಿಗೆ ಬರುವಂತೆ ವಾರದಲ್ಲಿ 5 ದಿನ ಹಾಲು ವಿತರಣೆ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮದ ಅಡಿ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ 4 ಲಕ್ಷ ಮಕ್ಕಳಿಗೆ ಸಾರವರ್ಧಕ ಅಕ್ಕಿ ಉಪಯೋಗ 4 ಜಿಲ್ಲೆಗಳಿಗೆ ವಿಸ್ತರಣೆ 8 ರಿಂದ 10ನೇ ತರಗತಿಯ ಹೆಣ್ಣು ಮಕ್ಕಳಿಗೆ ಚೂಡಿದಾರ್ ಸಮವಸ್ತ್ರ ಶಾಲಾ ಗ್ರಂಥಾಲಯಗಳಿಗೆ ಸಾಮಾಜಿಕ ಸಂದೇಶವುಳ್ಳ ಕಥಾ ಪುಸ್ತಕಗಳು; ದೃಷ್ಟಿ ಪರೀಕ್ಷೆ ಮತ್ತು ಕನ್ನಡಕಗಳ ವಿತರಣೆ, 50 ಸಾವಿರ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪ್ರಮುಖ ವಿಷÀಯಗಳಲ್ಲಿ ಮಧ್ಯಮ ಮತ್ತು ದೀರ್ಘ ಅವಧಿಯ ಅವಶ್ಯಾಧಾರಿತ ಪುನರ್ರಚನಾ ತರಬೇತಿ; ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಸಾಮಥ್ರ್ಯ ವರ್ಧನೆಗೆ ಕ್ರಮ.
ಉನ್ನತ ಶಿಕ್ಷಣದಡಿ : ಹೆಣ್ಣುಮಕ್ಕಳ ಮತ್ತು ಗಂಡುಮಕ್ಕಳ ಹಾಸ್ಟೆಲ್ ಗಳೊಂದಿಗೆ 10 ಮಾದರಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳ ಸ್ಥಾಪನೆ. ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಪ್ರಥಮದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣೆ; 1.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ : ಪ್ರತಿ ಆಶಾ ಕಾರ್ಯಕರ್ತರು ಈಗಾಗಲೇ ಪಡೆಯುತ್ತಿರುವ ಪ್ರೋತ್ಸಾಹ ಧನದ ಜೊತೆ 1000 ರೂ. ಗಳ ಗೌರವಧನ ನೀಡಿಕೆ. 150 ಆರೋಗ್ಯ ವಿಸ್ತರಣಾ ಚಿಕಿತ್ಸಾಲಯಗಳ ಸ್ಥಾಪನೆ-15 ಕೋಟಿ ರೂ. ರಾಜ್ಯದಲ್ಲಿನ ಉಗಿಏ ಇಒಖI ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 711 ಅಂಬ್ಯುಲೆನ್ಸ್‍ಗಳ ಜೊತೆಗೆ ಇಲಾಖೆಯ 827 ಅಂಬ್ಯುಲೆನ್ಸ್‍ಗಳನ್ನು ಒಟ್ಟುಗೂಡಿಸಿ, ಪ್ರತಿ 10 ರಿಂದ 15 ಕಿ.ಮೀ. ಸುತ್ತಳತೆ ಯಲ್ಲಿರುವ 35 ಸಾವಿರ ಜನ ಸಂಖ್ಯೆಗೆ ಒಂದರಂತೆ ಆಂಬುಲೆನ್ಸ್ ಸೇವೆಯ ವಿಸ್ತರಣೆ. 64 ಸಂಚಾರಿ ಆರೋಗ್ಯ ಘಟಕಗಳ ಪ್ರಾರಂಭ- 25.34 ಕೋಟಿ ರೂ. 150 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 3 ಲಕ್ಷ ರೂ.ಗಳ ವೆಚ್ಚದಲ್ಲಿ ಶವಾಗಾರಗಳ ನಿರ್ಮಾಣ- 4.5 ಕೋಟಿ ರೂ. ರಾಜ್ಯದಲ್ಲಿ “ಜನೌಷÀಧಿ ಔಷಧ ಮಳಿಗೆಗಳು” ಯೋಜನೆಯ ಅಡಿಯಲ್ಲಿ 200 ಜೆನರಿಕ್ ಔಷಧ ಮಳಿಗೆಗಳ ಪ್ರಾರಂಭ. ಔಷಧೀಯ ಸಸ್ಯಗಳ ಗಿಡಮೂಲಿಕೆ ಔಷÀಧ ಕೋಶ ಅನುಷ್ಠಾನ. ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿ ಆರೋಗ್ಯ ಪಾಲನೆ ಪರಿಹಾರಗಳ ಉದ್ದೇಶಕ್ಕೆ 2 ಕೋಟಿ ರೂ.
ರಾಷ್ಟ್ರೀಯ ಆರೋಗ್ಯ ಮಿಶನ್ ಅಡಿ ಯೋಜನೆಗಳು : 114 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ 3 ಹಾಸಿಗೆಗಳ ಸಾಮಥ್ರ್ಯದ ವೆಂಟಿಲೇಟರ್ ಸೌಲಭ್ಯ ವಿರುವ ತೀವ್ರ ನಿಗಾ ಘಟಕ ಪ್ರಾರಂಭಕ್ಕೆ ಕ್ರಮ. ತಜ್ಞರ ಕೊರತೆ ನೀಗಿಸಲು 10 ಸರ್ಕಾರಿ ಆಸ್ಪತ್ರೆಗಳಲ್ಲಿ ಡಿಎನ್‍ಬಿ ಸ್ನಾತಕೋತ್ತರ ಕೋರ್ಸ್ ಪ್ರಾರಂಭ. ಸಂಯೋಜಿತ, ಸಮಗ್ರ ಆರೋಗ್ಯ ಸೇವೆ ಒದಗಿಸಲು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಆಯುಶ್ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ.
206 ಸಮುದಾಯ ಆರೋಗ್ಯ ಕೇಂದ್ರಗಳು, 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ-ಹಾಸ್ಪಿಟಲ್ ಕಾರ್ಯಕ್ರಮದ ವಿಸ್ತರಣೆ - 13.78 ಕೋಟಿ ರೂ. 16500 ಕಿರಿಯ ಮಹಿಳಾ ಆರೋಗ್ಯ ಸಹಾಯಕರಿಗೆ ತಾಯಿ ಮತ್ತು ಮಗುವಿನ ಅನುಸರಣಾ ವ್ಯವಸ್ಥೆಯಡಿ ಕಂಪ್ಯೂಟರ್ ಟ್ಯಾಬ್ ವಿತರಣೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ : ರಾಜ್ಯದ ಎಲ್ಲಾ 30 ಜಿಲ್ಲೆಗಳಿಗೂ “ಮಾತೃ ಪೂರ್ಣ” ಯೋಜನೆ ವಿಸ್ತರಣೆ; ಜುಲೈ ತಿಂಗಳಿನಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಸಿದ್ಧಪಡಿಸಿದ ಬಿಸಿಯೂಟ ಪೂರೈಕೆ- 302 ಕೋಟಿ ರೂ. ಎಲ್ಲಾ ಅಂಗನವಾಡಿಯ ಮಕ್ಕಳಿಗೆ ಮುಂದಿನ ಜೂನ್ ತಿಂಗಳಿನಿಂದ ವಾರದಲ್ಲಿ ಎರಡು ದಿನ ಮೊಟ್ಟೆ
ಪೂರೈಕೆ-47 ಕೋಟಿ ರೂ. ಕ್ಷೀರ ಭಾಗ್ಯ ಯೋಜನೆಯಡಿ ಜುಲೈ ತಿಂಗಳಿನಿಂದ ಹಾಲು ವಿತರಣೆ 3 ರಿಂದ 5 ದಿನಗಳಿಗೆ ಹೆಚ್ಚಳ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರಿಗೆ ನೀಡುವ ಗೌರವಧನದಲ್ಲಿ ಅನುಕ್ರಮವಾಗಿ 1,000 ರೂ. ಹಾಗೂ 500 ರೂ.ಗಳಷ್ಟು ಹೆಚ್ಚಳ. ಅಂಗನವಾಡಿ
ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸರ್ಕಾರದಿಂದ ಅಪಘಾತ ವಿಮೆ ಯೋಜನೆ ಜಾರಿ. ಅತ್ಯಾಚಾರ ಮತ್ತು ವಿವಿಧ ದೌರ್ಜನ್ಯ ಗಳಿಗೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಚಿಕಿತ್ಸೆ ನೀಡಲು 145 ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷÀ ಚಿಕಿತ್ಸಾ ಘಟಕಗಳ ಸ್ಥಾಪನೆ. ಹೆಚ್.ಐ.ವಿ. ಸೋಂಕಿತ ಹಾಗೂ ಬಾಧಿತರಾದವರಿಗೆ ಪಾಲನೆ ಯೋಜನೆಯಡಿ 25,000 ಮಕ್ಕಳಿಗೆ ನೀಡಲಾಗುವ ಧನ ಸಹಾಯವನ್ನು ಮಾಸಿಕ 800 ರೂ.ಗಳಿಂದ 1,000 ರೂ.ಗಳಿಗೆ ಏರಿಕೆ. “ಸ್ವಾವಲಂಬನ” ವಿಮಾ ಯೋಜನೆ ಯಡಿ 1.12 ಲಕ್ಷ ವಿಕಲಚೇತನರಿಗೆ 357 ರೂ.ಗಳ ವಾರ್ಷಿಕ ಕಂತು ಪಾವತಿಗೆ 4 ಕೋಟಿ ರೂ. ಅನುದಾನ. 20,000 ಹಿರಿಯ ನಾಗರಿಕರಿಗೆ ವಿವಿಧ ಸಾಧನ ಉಪಕರಣಗಳ ವಿತರಣೆ. “ಸಾಧನೆ” ಯೋಜನೆಯಡಿ ನೀಡಲಾಗುವ ಆರ್ಥಿಕ ನೆರವು 50,000 ರೂ.ಗಳಿಗೆ ಹೆಚ್ಚಳ. ಆಟಿಸಂ, ಸೆರಬ್ರಲ್ ಪಾಲ್ಸಿ, ಬುದ್ಧಿ ಮಾಂದ್ಯತೆ ಮತ್ತು ಬಹುವಿಧದ ವೈಕಲ್ಯ ಹೊಂದಿರುವ ಮಕ್ಕಳಿಗಾಗಿ 4 ವಿಭಾಗಗಳಲ್ಲಿ ಹಗಲು ಯೋಗಕ್ಷೇಮ ಕೇಂದ್ರಗಳ ಸ್ಥಾಪನೆ. ಶಿಶು ಕೇಂದ್ರಿತ ಯೋಜನೆಯಡಿ ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಶ್ರವಣ ದೋಷÀವುಳ್ಳ ಮತ್ತು ಅಂಧರ ಹಾಗೂ ಬುದ್ಧಿಮಾಂದ್ಯ ವಿಶೇಷÀ ಶಾಲೆಗಳ ಪ್ರತಿ ಮಗುವಿಗೆ ನೀಡುವ ಮಾಸಿಕ ಅನುದಾನ 1200 ರೂ.ಗ¼ಷ್ಟು ಏರಿಕೆ. ಪ್ರಸಕ್ತ ಸಾಲಿನಲ್ಲಿ ವಿಕಲಚೇತನರಿಗೆ ನೀಡುತ್ತಿರುವ ಸುಧಾರಿತ ದ್ವಿಚಕ್ರ ವಾಹನಗಳ ಸಂಖ್ಯೆ 4000ಕ್ಕೆ ಏರಿಕೆ.
“ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳ” ಮೂಲಕ ಎಲ್ಲಾ 30 ಜಿಲ್ಲೆಗಳಲ್ಲಿ “ಸವಿರುಚಿ” ಸಂಚಾರಿ ಕ್ಯಾಂಟೀನ್‍ಗಳ ಪ್ರಾರಂಭ.
“ಪರಿಕರ ಸಹಾಯಧನ” ಯೋಜನೆಯಡಿ ಮಹಿಳೆಯರು ಸ್ವತ: ಜಂಟಿಯಾಗಿ ನಡೆಸುತ್ತಿರುವ 10,000 ನ್ಯಾಯಬೆಲೆ ಅಂಗಡಿಗಳಿಗೆ 5,000 ರೂ.ಗಳ ಘಟಕ ವೆಚ್ಚದಲ್ಲಿ ಅಗತ್ಯ ಸಲಕರಣೆಗಳ ಖರೀದಿ, ಪೂರೈಕೆ.
ಕಾರ್ಯಕರ್ತರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಲಾಗುವ 20,000 ರೂ.ಗಳ ಪ್ರೋತ್ಸಾಹಧನ ಪರಿಷ್ಕರಣೆ; ತಲಾ 25,000 ರೂ.ಗಳ ಪ್ರೋತ್ಸಾಹಧನ ಹಾಗೂ 25,000 ರೂ.ಗಳ ಸಾಲ ವಿತರಣೆ. “ಧನಶ್ರೀ” ಯೋಜನೆಯಡಿ ಸಹ ಇದೇ ಮಾದರಿ ಮುಂದುವರಿಕೆ.
ಸಮಾಜ ಕಲ್ಯಾಣ : ಜಿಲ್ಲೆಗೆ ಒಂದರಂತೆ ತಲಾ 1 ಕೋಟಿ ರೂ. ವೆಚ್ಚದಲ್ಲಿ 30 ಮೊರಾರ್ಜಿ ವಸತಿ ಶಾಲೆಗಳನ್ನು ವಿಜ್ಞಾನ ಮತ್ತು ಗಣಿತ ವಿಷÀಯಗಳೊಂದಿಗೆ ಪಿ.ಯು.ಸಿ.ಗೆ ಮೇಲ್ದರ್ಜೆಗೆ. ಹಾಸ್ಟೆಲ್‍ಗಳು, ವಸತಿ ಶಾಲೆಗಳು, ಆಶ್ರಮ ಶಾಲೆಗಳ ಮತ್ತು ಅನುದಾನಿತ ಖಾಸಗಿ ಹಾಸ್ಟೆಲ್‍ಗಳ ವಿದ್ಯಾರ್ಥಿಗಳ ಆಹಾರ ಭತ್ಯೆ ಪ್ರತಿ ವಿದ್ಯಾರ್ಥಿಗೆ ಮಾಸಿಕ 100 ರೂ.ಗ¼ಷ್ಟು ಹೆಚ್ಚಳ; 1500 ರೂ. ಗಳಿಗೆ ನಿಗದಿ. 1 ಲಕ್ಷ ಪರಿಶಿಷ್ಟ ಜಾತಿ / ಪರಿಶಿಷ್ಟÀ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಹಾಸ್ಟೆಲ್‍ಗಳಲ್ಲಿರುವ ವಿದ್ಯಾರ್ಥಿಗಳ ಬಳಕೆಗಾಗಿ ಬುಕ್ ಬ್ಯಾಂಕ್‍ಗಳ ಸ್ಥಾಪನೆ. 1 ರಿಂದ 8ನೇ ತರಗತಿಯ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಡೇ ಸ್ಕಾಲರ್ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ 250 ರೂ.ಗಳಷ್ಟು ಏರಿಕೆ; ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳನ್ನು ಕೊರೆಯುವ ಘಟಕ ವೆಚ್ಚ 2.50 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಹಾಗೂ ಸಬ್ಸಿಡಿ 2 ಲಕ್ಷ ರೂ.ಗಳಿಂದ 2.5 ಲಕ್ಷ ರೂ.ಗಳಿಗೆ ಹೆಚ್ಚಳ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಭೂರಹಿತ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿ ಯೋಜನೆಯಡಿ ಘಟಕ ವೆಚ್ಚ 15 ಲಕ್ಷ ರೂ.ಗಳಿಗೆ ಏರಿಕೆ. ವೃತ್ತಿ ಕೌಶಲ್ಯ ನಡೆದ 1400 ಪರಿಶಿಷ್ಟ ಜಾತಿ ಮತ್ತು 600 ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ 5 ಲಕ್ಷ ರೂ.ಗಳವರೆಗಿನ ಘಟಕ ವೆಚ್ಚದ ಸ್ವಯಂ ಉದ್ಯೋಗ ಘಟಕ ಆರಂಭಿಸಲು 2.5 ಲಕ್ಷ ರೂ. ಅಥವಾ ಶೇ.50 ರಷ್ಟು ಯೋಜನಾ ವೆಚ್ಚ ಸಹಾಯಧನ. ವಾಹನ ಚಾಲನಾ ಪರವಾನಗಿ ಹೊಂದಿರುವ 3500 ಪರಿಶಿಷ್ಟ ಜಾತಿ ಮತ್ತು 1500 ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿಗಳನ್ನು ಖರೀದಿಗೆ 3 ಲಕ್ಷ ರೂ.ಗಳವರೆಗೆ ಅಥವಾ ವಾಹನದ ಶೇ.50ರಷ್ಟು ಸಹಾಯಧನ. ಸಫಾಯಿ ಕರ್ಮಚಾರಿಗಳಿಗೆ ಜ್ಯೋತಿ ಸಂಜೀವಿನಿ ಮಾದರಿಯಲ್ಲಿ ಆರೋಗ್ಯ ಸೌಲಭ್ಯ. ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆ 5000 ರೂ. ಗಳಿಗೆ ಹೆಚ್ಚಳ. ಆದಿವಾಸಿ ಸಮುದಾಯ ಭವನಗಳ ನಿರ್ಮಾಣಕ್ಕೆ 15 ಕೋಟಿ ರೂ. ಬಿಪಿಎಲ್ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಗೃಹ ನಿರ್ಮಾಣಕ್ಕಾಗಿ ನಿಗದಿಪಡಿಸಲಾಗಿರುವ ಘಟಕ ವೆಚ್ಚ ಗ್ರಾಮೀಣ ಪ್ರದೇಶದಲ್ಲಿ 1.75 ಲಕ್ಷ ರೂ.ಗಳಿಗೆ ಮತ್ತು ನಗರ ಪ್ರದೇಶಗಳಲ್ಲಿÀ 2 ಲಕ್ಷ ರೂ.ಗಳಿಗೆ ಹೆಚ್ಚಳ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ವಿಧವೆಯರು ಮರುವಿವಾಹವಾದಲ್ಲಿ ಅವರಿಗೆ 3 ಲಕ್ಷ ರೂ.ಗಳ ಪ್ರೋತ್ಸಾº Àಧನ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಯುವಕರು ಯುವತಿಯರು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸಮುದಾಯದ ಒಳಗೆ ಅಂತರಜಾತಿ ವಾಹವಾದಲ್ಲಿ ಅಂತಹವರಿಗೆ 2 ಲಕ್ಷ ರೂ. ಪ್ರೋತ್ಸಾಹಧನ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಬ್ಯಾಂಕ್ ಮತ್ತು ಕೆಎಸ್‍ಎಫ್‍ಸಿಯಲ್ಲಿ ಸಾಲ ಪಡೆಯಲು ಸಮಾನಾಂತರ ಖಾತರಿ ಒದಗಿಸಲು ನೆರವಿನೊಂದಿಗೆ 100 ಕೋಟಿ ರೂ.ಗಳ ಮೂಲ ನಿಧಿ ಸ್ಥಾಪನೆ. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳಿಂದ ಒಂದು ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕಾಭಿವೃದ್ಧಿಗಾಗಿ ನೇರ ಸಾಲ ಯೋಜನೆ;.
2ಲಕ್ಷ ಬಿ.ಪಿ.ಎಲ್. ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಯೋಗ ದೊಂದಿಗೆ “ಅಡುಗೆ ಅನಿಲ” ಸಂಪರ್ಕ -100 ಕೋಟಿ ರೂ.
ಹಿಂದುಳಿದ ವರ್ಗಗಳ ಕಲ್ಯಾಣ: ಇ-ಆಡಳಿತ ಇಲಾಖೆಯ ನೆರವಿನೊಂದಿಗೆ 202 ವೃತ್ತೀಯ, ಸ್ನಾತಕೋತ್ತರ ಮತ್ತು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಹಾಸ್ಟೆಲ್‍ಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ. ಪ್ರತಿಷ್ಠಿತ ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ಬಾರಿ 2 ಲಕ್ಷ ರೂ.ಗಳ ಪ್ರೋತ್ಸಾಹಧನ. ಹಾಸ್ಟೆಲ್ ವಿದ್ಯಾರ್ಥಿಗಳ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು, ಕ್ಷ್ಷೌರ ಹಾಗೂ ಸಮವಸ್ತ್ರ ವೆಚ್ಚ ದ್ವಿಗುಣ. ಸರ್ಕಾರಿ ಹಾಸ್ಟೆಲ್‍ಗಳ/ವಸತಿ ಹಾಗೂ ಆಶ್ರಮ ಶಾಲೆಗಳ ಆಹಾರ ಭತ್ಯೆ ಪ್ರತಿ ವಿದ್ಯಾರ್ಥಿಗೆ ಮಾಸಿಕ 100 ರೂ.ಗಳಷ್ಟು ಹೆಚ್ಚಳ. ಸೇನೆಗಳಿಗೆ ಆಯ್ಕೆಯಾಗುವ ಅವಕಾಶ ಹೆಚ್ಚಳಕ್ಕೆ 3000 ಅಭ್ಯರ್ಥಿಗಳಿಗೆ ತರಬೇತಿ.: ಹಿಂದುಳಿದ ವರ್ಗಗಳ ವಿಧವೆಯರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು 10,000 ರೂ. ಸಹಾಯಧನ ಮತ್ತು ಶೇ. 4ರ ಬಡ್ಡಿ ದರದಲ್ಲಿ 30,000 ರೂ. ಸಾಲವನ್ನೊಳಗೊಂಡ ಆರ್ಥಿಕ ನೆರವು. ಮಡಿವಾಳ, ಸವಿತಾ ಸಮಾಜ, ತಿಗಳ, ಕುಂಬಾರ ಸಮುದಾಯಗಳ ಅಭಿವೃದ್ಧಿಗೆ 60 ಕೋಟಿ ರೂ. ಅನುದಾನ. ವಾಹನ ಚಾಲನಾ ಪರವಾನಗಿಯನ್ನು ಹೊಂದಿರುವ ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಡನೆ 1000 ಪ್ರವಾಸಿ ಟ್ಯಾಕ್ಸಿಗಳ ವಿತರಣೆ. ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ ಸಾಲ ಯೋಜನೆ ಅಡಿ 15,000/- ರೂ.ಗಳ ಘಟಕ ವೆಚ್ಚದಲ್ಲಿ ಶೇ.4ರ ಬಡ್ಡಿ ದರದಲ್ಲಿ 10,000/- ರೂ.ಗಳ ಸಾಲ ಹಾಗೂ 5,000/- ರೂ.ಗಳ ಸಹಾಯಧನ. ವಿಶ್ವಕರ್ಮ ಸಮುದಾಯದವರು ಮಾಡುವ ಕೆಲಸಗಳಲ್ಲಿ ವೃತ್ತಿ ಕೌಶಲ್ಯ ಸುಧಾರಣೆ ಹಾಗೂ ಆಧುನಿಕ ಸಲಕರಣೆ ಖರೀದಿಗೆ 300 ಜನರಿಗೆ ತಲಾ 1.5 ಲಕ್ಷ ರೂ.ಗಳ ಅನುದಾನ. ಉಪ್ಪಾರ ಮತ್ತು ಇದರ ಉಪಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪನೆ. ಬೆಸ್ತ, ಕಬ್ಬಲಿಗ, ಕೋಲಿ, ಗಂಗಮತ, ಮೊಗವೀರ ಮತ್ತು ಇವುಗಳ ಉಪಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಸ್ಥಾಪನೆ.
ಬುಡಬುಡಕಿ, ಗೊಂದಳಿ, ಹೆಳವ, ಪಿಚಗುಂ�?