ಮಡಿಕೇರಿ, ಮಾ. 16: ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ. ನಗರಸಭಾ ಸಾಮಾನ್ಯ ಸಭೆ ಇದೆ ಅಂದ ಮೇಲೆ ಕಿತ್ತಾಟ ರಂಪಾಟ ಇದ್ದದ್ದೇ... ಈ ಬಾರಿ ಸ್ವಲ್ಪ ಬದಲಾವಣೆ ಅದೇನಪ್ಪಾ ಅಂದ್ರೆ ಪ್ರತಿಬಾರಿ ಸದಸ್ಯರು, ಅಧ್ಯಕ್ಷರ ನಡುವೆ ರಂಪಾಟ ನಡೆಯುತ್ತಿತ್ತು. ಆದರೆ ಈ ಬಾರಿ ಅಧ್ಯಕ್ಷ-ಉಪಾಧ್ಯಕ್ಷರ ನಡುವೆಯೆ ಕಿತ್ತಾಟ ನಡೆದು, ನಗರಸಭೆಯ ಪ್ರತಿ ಬಾರಿಯ ದೊಂಬರಾಟಕ್ಕೆ ಹೊಸ ಕಥೆ ಸೇರ್ಪಡೆಗೊಂಡಿತು.
ಸುರಭಿ ಬಾರ್.., ಈ ಹೆಸರು ನಗರ ಸಭೆಯಲ್ಲಿ ಎಷ್ಟೊಂದು ಪ್ರಸಿದ್ಧಿಯಾಗಿದೆ ಎಂದರೆ ಈ ಹೆಸರು ಪ್ರಸ್ತಾಪವಾಗದೆ ಇದುವರೆಗಿನ ಯಾವ ಸಾಮಾನ್ಯ ಸಭೆಯು ಮುಕ್ತಾಯ ಕಂಡಿಲ್ಲ. ಈ ಬಾರಿಯು ಅದು ಮರುಕಳಿಸಿತು. ಸುರಭಿ ಬಾರ್‍ನವರು ಸ್ವಂತ ಖರ್ಚಿನಲ್ಲಿ ಇಂಟರ್‍ಲಾಕ್ ಅಳವಡಿಸಿಕೊಂಡಿದ್ದಾರೆ. ಇದರಿಂದ ಯಾವದೇ ತೊಂದರೆಗಳಾಗುತ್ತಿಲ್ಲ. ಆದರೂ ಅದನ್ನು ನಗರಸಭೆ ತೆರವು ಮಾತಾಡೋಕೆ ಬಿಡ್ರಿ ಎಂದು ಮನ್ಸೂರ್ ಹಾಗೂ ವೆಂಕಟೇಶ್ ವಾದಿಸಿದರು.
ವಾದಕ್ಕೆ ವಾದ ಮುಂದುವರೆದು ‘ಹೇಯ್ ಅಡ್ಡ ಮಾತಾಡ್ಬೇಡ; ಕೂತ್ಕೊಳೊ ಮಾರಾಯ ನೀನ್ಯಾರೋ ಮಾತಾಡೋಕೆ? ಎಂಬಿತ್ಯಾದಿ ಅಸಂಬದ್ಧ ಮಾತುಗಳು ಮಾದರ್Àನಿಸಿ ದವು. ಈ ವೇಳೆ ಅಧ್ಯಕ್ಷರು ಸ್ಪಷ್ಟನೆ ನೀಡಲು ಮುಂದಾದಾಗ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಉಪಾಧ್ಯಕ್ಷ ಪ್ರಕಾಶ್ ಅವರ ನಡುವೆ ಕಿತ್ತಾಟ ಶುರುವಾಯಿತು. ಯಾವ ಮಟ್ಟಿಗೆ ಎಂದರೆ ಇಬ್ಬರೂ ಎದ್ದು ನಿಂತು ಪರಸ್ಪರ ಗೊಳಿಸಿದೆ. ನಗರಸಭೆಯಿಂದಲೇ ಅಲ್ಲೆ ಇಂಟರ್‍ಲಾಕ್ ಅಳವಡಿಸಬೇಕು ಎಂದು ಈ ಹಿಂದೆ ನಗರಸಭೆ ತೀರ್ಮಾನಿಸಿದ್ದರೂ, ಅಳವಡಿಸಿರ ಲಿಲ್ಲ. ತೆರವುಗೊಳಿಸುವ ದಾದರೆ ಎಲ್ಲವನ್ನು ತೆರವು ಮಾಡಿ. ಅದು ಬಿಟ್ಟು ತಾರತಮ್ಯ ಮಾಡುವದೇಕೆ ಎಂದು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಮಾತನಾಡುತ್ತಿದ್ದಂತೆ ಸದಸ್ಯ ಮನ್ಸೂರ್ ಮಧ್ಯ ಪ್ರವೇಶಿಸಿದರು. ಈ ವೇಳೆ ಮನ್ಸೂರ್ ಹಾಗೂ ಪ್ರಕಾಶ್ ಅವರ ನಡುವೆ ವಾಗ್ಯುದ್ಧವೇ ನಡೆಯಿತು. ಇದೇ ವೇಳೆ ನಾಮನಿರ್ದೇಶಿತ ಸದಸ್ಯ ವೆಂಕಟೇಶ್ ಅವರು ಮಧ್ಯ ಪ್ರವೇಶಿಸಿದ್ದರಿಂದ ಅವರ ಮೇಲೂ ಉಪಾಧ್ಯಕ್ಷರು ಕಿಡಿಕಾರಿದರು. ‘ನಾನು ಮಾತಾಡಿದ ಮೇಲೆ ನೀವು ಮಾತಾಡಿ; ಮಧ್ಯ ಮಾತಾಡ್ಬೇಡಿ ಎಂದು ಪ್ರಕಾಶ್ ಹೇಳಿದರೆ, ನಮಗೂ ನಿಂದನೆಯಲ್ಲಿ ತೊಡಗಿ ದರು. ಈ ಸಂದರ್ಭ ಕೆಲ ಸದಸ್ಯರುಗಳೇ ಇವರಿಬ್ಬರನ್ನು ಸಮಾಧಾನಿಸಲು ಮುಂದಾಗಬೇಕಾಯಿತು.
ಈ ನಡುವೆ ಮಾತಿಗಿಳಿದ ಸದಸ್ಯ ಉಣ್ಣಿಕೃಷ್ಣ, ಕೆ.ಎಸ್. ರಮೇಶ್ ಸುರಭಿ ಬಾರ್ ಬಗ್ಗೆ ಮಾತನಾಡಿದರೆ ನಿಮಗೇಕೆ ಬೇಸರ ಎಂದು ಮನ್ಸೂರ್ ಅವರನ್ನು ಕುಟುಕಿದರು. ಸಮುದಾಯ ವನ್ನು ಓಲೈಸಿಕೊಂಡು ಮಾತನಾಡ ಬೇಡಿ, ಎಲ್ಲರನ್ನೂ ಒಂದೇ ರೀತಿ ಕಾಣಿ ಎಂದು ಹೇಳಿದರು. ನಾನು ಯಾವದೇ ಸಮುದಾಯದ ಪರ ಮಾತನಾಡುತ್ತಿಲ್ಲ ಎಂದು ಹೇಳಿದ ಮನ್ಸೂರ್ ಸಮುದಾಯದ ಬಗ್ಗೆ ಮಾತನಾಡಿ ನೀವು ಒಡಕು ಮೂಡಿಸಬೇಡಿ ಎಂದರು. ಕೊನೆಗೆ ಇಂಟರ್‍ಲಾಕ್ ತೆರವು ಮಾಡುವದಾದರೆ ಎಲ್ಲಾ ಕಡೆ ಮಾಡಿ ಅದುಬಿಟ್ಟು ತಾರತಮ್ಯ ಮಾಡಬೇಡಿ ಎಂದು ಸದಸ್ಯೆ ಅನಿತಾ ಪೂವಯ್ಯ ಸೇರಿದಂತೆ ಸದಸ್ಯರು ಹೇಳಿದರು.
ನಗರಸಭೆ ವ್ಯಾಪಾರ ಕೇಂದ್ರವಲ್ಲ. ಒಂದು ವೇಳೆ ಸ್ವಂತ ಖರ್ಚಿನಲ್ಲಿ ಇಂಟರ್‍ಲಾಕ್ ಅಳವಡಿಸು ವದಾದರೂ ನಗರಸಭೆಯಿಂದ ಅನುಮತಿ ಪಡೆದು ಅಳವಡಿಸು ವಂತಾಗಬೇಕು ಎಂದು ಕೆ.ಎಂ. ಗಣೇಶ್ ಹಾಗೂ ಹೆಚ್.ಎಂ. ನಂದಕುಮಾರ್ ಹೇಳಿದರು. ಈ ಬಗ್ಗೆ
ಚರ್ಚೆ-ವಿಚರ್ಚೆಗಳು ಪೂರ್ಣಗೊಳ್ಳುವ ವೇಳೆಗೆ ಸಭಾಂಗಣ ಕಾಗೆ ಗೂಡಿನಂತಾಗಿತ್ತು.
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ನಡುವೆ ಹೊಂದಾಣಿಕೆಯಿಲ್ಲ ಎಂಬದು ಕೂಡ ಬಹಿರಂಗ ಗೊಂಡಿತು.