ಮಡಿಕೇರಿ, ಮಾ. 16 : ಕೊಡಗಿನ ಇತಿಹಾಸದಲ್ಲೆ ಪ್ರಥಮ ಬಾರಿಗೆ ಜಿಲ್ಲೆಯ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ರೂ. 2.97 ಕೋಟಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಕೊಡಗು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖಾ ಸಚಿವ ತನ್ವೀರ್ ಸೇಠ್ ಅವರು ದೊಡ್ಡ ಮೊತ್ತದ ಅನುದಾನ ಒದಗಿಸಿದ್ದಾರೆ. ಅವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆಗಳನ್ನು ಸಲ್ಲಿಸುವದಾಗಿ ತಿಳಿಸಿದರು.

ಮಂಜೂರು ಮಾಡಿರುವ ಅನುದಾನದಲ್ಲಿ ಪ್ರಮುಖವಾಗಿ ಜಿಲ್ಲಾ ವ್ಯಾಪ್ತಿಯಲ್ಲಿರುವ 39 ಖಬರ ಸ್ಥಾನಗಳಿಗೆ ತಡೆಗೋಡೆ ನಿರ್ಮಿಸಿ ರಕ್ಷಣೆÉ ಒದಗಿಸಲು 1.91 ಕೊಟಿ, 22 ಮಸೀದಿಗಳ ಅಭಿವೃದ್ಧಿ ಕಾಮಗಾರಿ ಗಳಿಗಾಗಿ 45 ಲಕ್ಷ ರೂ., 14 ದರ್ಗಾಗಳಿಗೆ 28 ಲಕ್ಷ , 17 ಮದರಸಗಳ ಅಭಿವೃದ್ಧಿ ಕಾಮಗಾರಿಗೆ 32.50 ಲಕ್ಷ ರೂ.ಗಳನ್ನು ಒದಗಿಸ ಲಾಗಿದೆ. ಅಬ್ದುಲ್ ರೆಹಮಾನ್, ಇದರೊಂದಿಗೆ ಹುದಿಕೇರಿ ಮತ್ತು ಶ್ರೀಮಂಗಲದಲ್ಲಿರುವ ಮಸೀದಿಗಳು ಶಿಥಿಲಾವಸ್ಥೆಯಲ್ಲಿದ್ದು, ಇವುಗಳನ್ನು 9 ಲಕ್ಷ ರೂ. ವೆಚ್ಚದಲ್ಲಿ ವಕ್ಫ್ ಮಂಡಳಿ ಯಿಂದ ನೇರವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎಮ್ಮೆಮಾಡು ಉರೂಸ್ ಸಂದರ್ಭ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು, ಜಿಲ್ಲೆಯ ಗ್ರಾಮೀಣ ಭಾಗಗಳ ಮಸೀದಿಗಳ ಅಭಿವೃದ್ಧಿಗಾಗಿ 2 ಕೋಟಿ ಹೆಚ್ಚುವರಿ ಅನುದಾನ ಒದಗಿಸುವ ಭರವಸೆ ನೀಡಿರುವದಾಗಿ ಅಬ್ದುಲ್ ರೆಹಮಾನ್ ತಿಳಿಸಿದರು.

ನಗರದ ಗ್ರಾಮಾಂತರ ಠಾಣೆÉಯ ಬಳಿಯಲ್ಲಿ ನೂತÀನವಾಗಿ ನಿರ್ಮಾಣ ವಾಗಿರುವ ಮೌಲಾನಾ ಆಜಾದ್ ಭವನದಲ್ಲಿ ವಕ್ಫ್ ಮಂಡಳಿ ಮತ್ತು ಬಿಸಿಎಂ ಇಲಾಖೆ ತನ್ನ ಸ್ವಂತ ಕಛೇರಿಗಳನ್ನು ಹೊಂದಲಿದೆ. ಶೀಘ್ರದಲ್ಲೆ ವಕ್ಫ್ ಕಛೇರಿ ಉದ್ಘಾಟನೆ ನಡೆಯಲಿದೆ ಯೆಂದು ತಿಳಿಸಿದ ಅಬ್ದುಲ್ ರೆಹೆಮಾನ್, ರಾಜ್ಯದಲ್ಲಿ ಮಂಗಳೂರು, ಬೆಂಗಳೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಮಾತ್ರ ವಕ್ಫ್ ಮಂಡಳಿ ಸ್ವಂತ ಕಛೇರಿಯನ್ನು ಹೊಂದಿರುವದಾಗಿ ಹೇಳಿದರು.

ವಕ್ಫ್ ಮಂಡಳಿಯ ಉಪಾಧ್ಯಕ್ಷ ಆಲೀರ ಎರ್ಮು ಮಾತನಾಡಿ, ಜಿಲ್ಲಾ ವ್ಯಾಪ್ತಿಯ ಮುಸ್ಲಿಂ ಸಮುದಾಯದ ಮಸೀದಿ, ಮದರಸ ಸೇರಿದಂತೆ ಧಾರ್ಮಿಕ ಕೇಂದ್ರಗಳ ಸಂರಕ್ಷಣೆ, ಅಭಿವೃದ್ಧಿಯ ಜವಾಬ್ದಾರಿ ವಕ್ಫ್ ಮಂಡಳಿಗೆ ಸಂಬಂಧಪಡುತ್ತದೆ. ಹೀಗಿದ್ದೂ ಶನಿವಾರಸಂತೆಯ ಕೆ.ಎ.ಯಾಕೂಬ್, ಪೊನ್ನಂಪೇಟೆಯ ಬಾಪು ಅವರುಗಳು ಜಿಲ್ಲೆಯ ಮಸೀದಿ ಮದರಸಗಳಿಗೆ ಸರ್ಕಾರದಿಂದ ಅನುದಾನವನ್ನು ಮಂಜೂರು ಮಾಡಿಸಿರುವದಾಗಿ ಅನಗತ್ಯ ಹೇಳಿಕೆ ಮತ್ತು ಪ್ರಚಾರ ಪಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು. ವಕ್ಫ್ ಮಂಡಳಿ ಇರುವದೆ ಮಸೀದಿ ಮದರಸಗಳ ಅಭಿವೃದ್ಧಿಗಾಗಿ. ಮಂಡಳಿಯಿಂದ ನಿರ್ದಿಷ್ಟ ಅಭಿವೃದ್ಧಿ ಕಾರ್ಯಗಳ ಪ್ರಸ್ತಾವನೆ ಸಲ್ಲಿಸಿದರಷ್ಟೆ ಅನುದಾನ ಬಿಡುಗಡೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವಕ್ಫ್ ಮಂಡಳಿ ಸದಸ್ಯರಾದ ಹಮೀದ್, ದಾವೂದ್ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ಸಾದತ್ ಹಸನ್ ಉಪಸ್ಥಿತರಿದ್ದರು.