ಮಡಿಕೇರಿ, ಮಾ. 16: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ತಾ. 19ರಂದು ಬೆಳಿಗ್ಗೆ 10.30ಕ್ಕೆ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನಲ್ಲಿ ಅಂತರ್ರಾಷ್ಟ್ರೀಯ ‘ಪೊಮ್ಮಕ್ಕಡ ನಾಳ್’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಒಕ್ಕೂಟದಿಂದ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಉದ್ಘಾಟಿಸಲಿದ್ದಾರೆ.

ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಇಗ್ಗುತಪ್ಪ ಕೊಡವಕೇರಿಯ ಅಧ್ಯಕ್ಷೆ ಚೌರೀರ ಕಾವೇರಿ ಪೂಣಚ್ಚ, ಸಮಾಜ ಸೇವಕಿ ಕೊಕ್ಕೇಂಗಡ ಸೌಭಾಗ್ಯ ಪೊನ್ನಪ್ಪ, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನ ಕಾರ್ಯಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಪ್ರಾಂಶುಪಾಲೆ ಕಲ್ಮಾಡಂಡ ಸರಸ್ವತಿ, ಕಾವೇರಿ ಕೊಡವಕೇರಿಯ ಅಧ್ಯಕ್ಷೆ ಪಳಂಗಂಡ ಕಮಲ ಸುಬ್ಬಯ್ಯ ಪಾಲ್ಗೊಳ್ಳಲಿದ್ದಾರೆ. ಶಿಕ್ಷಕಿ ಚೋಕೀರ ಅನಿತಾ ದೇವಯ್ಯ ಅವರು ‘ಕೊಡವಾಮೆನ ಬೊಳ್‍ತ್‍ವಲ್ಲಿ ಪೊಮ್ಮಕ್ಕಡ ಪಾತ್ರ’ ವಿಷಯದ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಈ ಸಂದರ್ಭ ವೀಣಾ ಅಚ್ಚಯ್ಯ, ಎನ್.ಸಿ.ಸಿ. ಸಾಧಕಿ ಅಜ್ಜೀನಂಡ ಐಶ್ವರ್ಯ ದೇಚಮ್ಮ, ಅಂತರ್ರಾಷ್ಟ್ರೀಯ ಹಾಕಿ ಆಟಗಾರ್ತಿಯರಾದ ಮಲ್ಲಮಾಡ ಪೊನ್ನಮ್ಮ ಹಾಗೂ ಮಲ್ಲಮಾಡ ಲೀಲಾವತಿ ಅವರನ್ನು ಸನ್ಮಾನಿಸಲಾಗುವದು. ಸಾಂಸ್ಕøತಿಕ ಕಾರ್ಯಕ್ರಮವೂ ಈ ಸಂದರ್ಭ ನಡೆಯಲಿದೆ.