21ನೇ ಶತಮಾನ ಕಂಡ ಅತಿದೊಡ್ಡ ಅರ್ಥಕ್ರಾಂತಿಗಳಲ್ಲಿ ಭಾರತದ ನೋಟು ಅಮಾನ್ಯೀಕರಣವೂ ಒಂದು. ಅದುವರೆಗೂ ಬಳಸಲಾಗುತ್ತಿದ್ದ 500 ಮತ್ತು 1000 ಮುಖ ಬೆಲೆಯ ನೋಟುಗಳು ಇನ್ನು ಮುಂದೆ ಕೇವಲ ಕಾಗದದ ತುಂಡು ಎಂಬಂತಾದಾಗ ದೇಶದ ಇಡೀ ಅರ್ಥ ವ್ಯವಸ್ಥೆಯೇ ತಲ್ಲಣಗೊಂಡಿದ್ದು ನಿಜ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಮಾಜದ ವಿವಿಧ ಕ್ಷೇತ್ರಗಳಿಂದ ಬಹಳಷ್ಟು ಪರವಿರೋಧಗಳು ಬಂದಿವೆ. ಅಷ್ಟಕ್ಕೂ ಈ ನೋಟು ಅಮಾನ್ಯದಿಂದ ಆಗುವ ಲಾಭಗಳಾದರೂ ಏನು ನೋಡೋಣ
v ಅಗಾಧ ಪ್ರಮಾಣದ ಕಪ್ಪು ಹಣ ಬಯಲಿಗೆ: ನಮ್ಮ ದೇಶ ಎದುರಿಸುತ್ತಿರುವ ಕರಾಳ ಸಮಸ್ಯೆಗಳಲ್ಲಿ ಕಪ್ಪು ಹಣವೂ ಒಂದು. ಭಾರೀ ಪ್ರಮಾಣದ ಕಪ್ಪು ಹಣ ಯಾವದೇ ಲೆಕ್ಕಕ್ಕೆ ಸಿಗದೆ ಎಲ್ಲೆಲ್ಲೋ ಬಚ್ಚಿಟ್ಟುಕೊಂಡಿದ್ದವು. ಯಾವಾಗ ನೋಟು ಅಮಾನ್ಯವಾಯಿತೋ ಆವಾಗ ಈ ಕಪ್ಪು ಹಣಗಳೆಲ್ಲವೂ ಹೊರಗೆ ಬರಲೇ ಬೇಕಾಯಿತು. ಅಥವಾ ಅಸ್ತಿತ್ವ ಕಳೆದುಕೊಳ್ಳ ಬೇಕಾಯಿತು. ಒಂದು ಅಂದಾಜಿನ ಪ್ರಕಾರ ನೋಟು ಅಮಾನ್ಯದಿಂದ ಹೊರಬಂದ ಕಪ್ಪು ಹಣದ ಪ್ರಮಾಣ ಬರೋಬ್ಬರಿ 4 ಲಕ್ಷ ಕೋಟಿ ರೂ.
v ನಕಲಿ ನೋಟಿಗೆ ತಿಲಾಂಜಲಿ : ದೇಶ ಎದುರಿಸುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ನಕಲಿ ನೋಟುಗಳು. ಭಯೋತ್ಪಾದನೆ ಮತ್ತು ಸಮಾಜ ಘಾತುಕ ಚಟುವಟಿಕೆಗಳಿಗೆ ಈ ನಕಲಿ ನೋಟುಗಳನ್ನು ಬಳಸಲಾಗುತ್ತಿತ್ತು. ಇದೀಗ ನೋಟ್‍ಗಳ ನಿಷೇಧದಿಂದ ಈ ನಕಲಿ ನೋಟು ಗಳೆಲ್ಲವೂ ಜೀವ ಕಳೆದುಕೊಂಡಿವೆ.
v ಭಯೋತ್ಪಾದನೆಗೆ ಅಂಕುಶ: ಭಯೋತ್ಪಾದನೆಗೆ ಇಂದು ದೇಶವೇ ನಡುಗಿ ಹೋಗಿದೆ. ಈ ಭಯೋತ್ಪಾದನೆ ಉತ್ತೇಜನಕ್ಕೂ ಬಹುಮುಖ ಬೆಲೆಯ ನೋಟುಗಳು ದೇಶ ವಿದೇಶದಿಂದ ಪೂರೈಕೆಯಾಗುತ್ತಿದ್ದವು. ನೋಟು ನಿಷೇಧದಿಂದ ಭಯೋತ್ಪಾದನಾ ಚಟುವಟಿಕೆಗಳಿಗೂ ಕಡಿವಾಣ ಬಿದ್ದಿತ್ತು. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಜಮ್ಮು ಕಾಶ್ಮೀರದÀಲ್ಲಿ ಒಳ ನುಸುಳು ಕೋರರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದೇ ಇದಕ್ಕೆ ಸಾಕ್ಷಿ.
vಬೇನಾಮಿ ಆಸ್ತಿಗಳಿಗೆ ನಿಯಂತ್ರಣ: ಕಪ್ಪು ಕುಳಗಳು ಅಗಾಧ ಪ್ರಮಾಣದಲ್ಲಿ ಭೂಮಿ. ಕಟ್ಟಡ, ವಾಹನ, ಆಭರಣಗಳ ರೂಪದಲ್ಲೂ ಕಪ್ಪು ಹಣ ಸಂಗ್ರಹಿಸಿಟ್ಟು ಕೊಂಡಿದ್ದಾರೆ. ಇದೀಗ ನೋಟು ನಿಷೇಧದಿಂದ ಈ ಅಕ್ರಮ ವ್ಯವಹಾರಗಳಿಗೂ ಕಡಿವಾಣ ಬಿದ್ದಿವೆ.
v ಬಹಳಷ್ಟು ಮಂದಿಯಿಂದ ತೆರಿಗೆ ಘೋಷಣೆ: ದೇಶದ ಲಕ್ಷಾಂತರ ಮಂದಿ ಉದ್ಯಮಿಗಳು ಶ್ರೀಮಂತರು ಇದುವರೆಗೂ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿ ದ್ದರು. ಆದರೆ ನೋಟು ನಿಷೇಧದಿಂದ ಬಹುತೇಕ ಮಂದಿ ತಮ್ಮ ಆಸ್ತಿ ಘೋಷಣೆ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿದರು. ಇದರಿಂದಲೂ ಸರ್ಕಾರದ ಖಜಾನೆಗೆ ಸಾವಿರಾರು ಕೋಟಿ ರೂಪಾಯಿ ಹಣ ಹರಿದು ಬಂದಿದೆ.
v ಸರ್ಕಾರದ ಖಜಾನೆಗೆ ಅಗಾಧ ಮೊತ್ತ ಪಾವತಿ: ನೋಟು ನಿಷೇಧದ ಬಳಿಕ ವಿವಿಧ ಬ್ಯಾಂಕ್‍ಗಳಿಗೆ ಜಮೆಯಾದ ಒಟ್ಟು ಮೊತ್ತ ಸುಮಾರು 15 ಲಕ್ಷ ಕೋಟಿ ರೂಪಾಯಿ. ಅಂದರೆ ಅದುವರೆಗೆ ಬೇರೆ ಬೇರೆ ಕಾರಣಗಳಿಂದಾಗಿ ಖಾತೆಗೆ ಜಮೆಯಾಗದೆ ಅನುಪಯುಕ್ತವಾಗಿದ್ದ ಈ ಹಣ ಇದೀಗ ಒಮ್ಮೆಗೆ ಬ್ಯಾಂಕ್‍ಗೆ ಜಮೆಯಾಗಿದೆ. ಇದನ್ನು ಸರ್ಕಾರ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ.
v ನೋಟು ಅಮಾನ್ಯೀಕರಣದ ಬಾಧಕಗಳು : ದಶಕಗಳಿಂದ ಚಾಲ್ತಿಯಲ್ಲಿದ್ದ ಬಹುಮುಖ ಬೆಲೆಯ ನೋಟುಗಳನ್ನು ಸರ್ಕಾರ ರಾತ್ರೋ ರಾತ್ರಿ ನಿಷೇಧಿಸಿದಾಗ ಇಡೀ ದೇಶದ ಅರ್ಥ ವ್ಯವಸ್ಥೆ ಒಮ್ಮೆಗೆ ಅಲ್ಲೋಲ ಕಲ್ಲೋಲವಾಗಿದ್ದಂತೂ ನಿಜ. ಒಂದೊಂದು ರೂಪಾಯಿಗೂ ಜನ ಸಾಮಾನ್ಯರು ಪರದಾಡುವಂತಾಯಿತು. ವ್ಯಾಪಾರ ವಹಿವಾಟು ಕುಸಿದವು. ಮಾತ್ರವಲ್ಲ ಯಾವ ಉದ್ದೇಶಗಳಿಗಾಗಿ ನೋಟು ನಿಷೇಧ ಮಾಡಲಾಯಿತೋ ಆ ಉದ್ದೇಶಗಳಲ್ಲೆವು ಒಂದು ಮಿಥ್ಯೆ ಎಂಬ ವಾದವೂ ಹುಟ್ಟಿಕೊಂಡಿದೆ.
v ಕಪ್ಪುಹಣ ನಿಯಂತ್ರಣ ಅಸಾಧ್ಯ: ನೋಟು ನಿಷೇಧದಿಂದ ಭಾರೀ ಪ್ರಮಾಣದ ಕಪ್ಪುಹಣ ಬಯಲಿಗೆ ಬಂತು ಎಂಬ ಮಾತಿದೆ. ವಾಸ್ತವವಾಗಿ ಬ್ಯಾಂಕುಗಳಿಗೆ ಜಮೆಯಾದ ಒಟ್ಟು 15 ಲಕ್ಷ ಕೋಟಿ ರೂಪಾಯಿಯಲ್ಲಿ ಶೇಕಡಾ 40ರಷ್ಟು ಕಪ್ಪು ಹಣ ಎಂದು ಭಾವಿಸಲಾಗಿದೆ. ಆದರೆ ವಾಸ್ತವವಾಗಿ ಬಹಳ ಸಣ್ಣ ಪ್ರಮಾಣದ ಕಪ್ಪು ಹಣ ಮಾತ್ರ ನೋಟುಗಳ ರೂಪದಲ್ಲಿವೆ. ಉಳಿದ ಕಪ್ಪುಹಣ, ಆಸ್ತಿ, ಭೂಮಿ, ಆಭರಣಗಳ ರೂಪದಲ್ಲಿವೆ. ಭಾರೀ ಕುಳಗಳ ಮೇಲೆ ನೋಟು ನಿಷೇಧ ಯಾವದೇ ಪರಿಣಾಮ ಬೀರಿಲ್ಲ. ಹಾಗಾಗಿ ಕಪ್ಪು ಹಣ ಬಯಲಿಗೆ ಎಂಬದು ಬೆಟ್ಟ ಅಗೆದು ಇಲಿ ಹಿಡಿದಂತೆ ಆಗಿದೆ.
v ನಕಲಿ ನೋಟುಗಳ ನಿಯಂತ್ರಣವೂ ಆಗುವುದಿಲ್ಲ. : ಈ ಹಿಂದೆ 500 ಮತ್ತು 1000 ಮುಖ ಬೆಲೆಯ ನಕಲಿ ನೋಟುಗಳ ದೇಶ ವಿದೇಶಗಳಿಂದ ಭಾರತಕ್ಕೆ ವಾಮಮಾರ್ಗದಲ್ಲಿ ಪೂರೈಕೆಯಾಗುತ್ತಿದ್ದವು. ಆದರೆ ನೋಟು