ನಾಪೆÇೀಕ್ಲು, ಮಾ. 16: ಮಹಿಳೆಯರು ವೃತ್ತಿಪರ ತರಬೇತಿಗಳನ್ನು ಕೈಗೊಳ್ಳುವದರ ಮೂಲಕ ಆರ್ಥಿಕವಾಗಿ ಮುಂದೆ ಬರಬೇಕೆಂದು ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಎಂ. ಕಾವೇರಪ್ಪ ಅಭಿಪ್ರಾಯಪಟ್ಟರು.ಭಾರತ- ಸರಕಾರ, ಕಾಫಿ ಮಂಡಳಿ ವಿಸ್ತಾರಣಾ ವಿಭಾಗ ಮಡಿಕೇರಿ, ಮತ್ತು ಭಗವತಿ ಮಹಿಳಾ ಸಮಾಜ ವತಿಯಿಂದ ಆಯೋಜಿಸ ಲಾಗಿದ್ದ ಮಹಿಳಾ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗಿನ ಕಾಫಿಯು ಸ್ವಾದಿಷ್ಟವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದು, ವ್ಯಾಪಾರಸ್ಥರು ಬೆಳೆಗಾರರನ್ನು ‘ಔಟ್ ಟರ್ನ್- ಮೋಹಿಶ್ಚರ್’ ಎಂದು ಶೋಷಣೆ ಮಾಡುತ್ತಿದ್ದು, ಈ ಬಗ್ಗೆ ಬೆಳೆಗಾರರು ಜಾಗೃತರಾಗಿ ಉತ್ತಮ ಧಾರಣೆ ಪಡೆಯಲು ಪ್ರಯತ್ನಿಸ ಬೇಕೆಂದರು. ಸಭೆಯಲ್ಲಿ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಜಯರಾಮನ್ ಮಾತನಾಡಿದರು. ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷೆ ಶಿವಚಾಳಿಯಂಡ ಪಾರ್ವತಿ ಬೆಳ್ಯಪ್ಪ ವಹಿಸಿದ್ದರು. ಆರ್.ಎಂ.ಸಿ. ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಚಿಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಮಾಜಿ ಅಧ್ಯಕ್ಷೆ ಶಿವಚಾಳಿಯಂಡ ದೇವಕ್ಕಿ ಮುತ್ತಪ್ಪ ಮತ್ತಿತರರು ಇದ್ದರು.